ಹುಟ್ಟುವ ಮಕ್ಕಳ ಆರೋಗ್ಯ, ಹುಟ್ಟಿದ ಮೇಲೆ ಅವರ ಜೀವನ, ಇವೆರಡರ ಚಿಂತೆ ಪ್ರತಿ ತಂದೆ ತಾಯಂದರಿಗೆ ಇದ್ದೇ ಇರುತ್ತದೆ, ಆದರೆ ಗ್ರಹ ದೋಷ, ಶನಿ ಕಾಟ ಇತ್ಯಾದಿ ಸಮಸ್ಯೆಗಳು ಕಾಡಲು ಶುರು ಮಾಡಿದರೆ, ಯಾರು ಏನು ಮಾಡಲು ಸಾಧ್ಯವಿಲ್ಲ, ಸರಿಯಾದ ಸಮಯದಲ್ಲಿ ಮಿಲನ ಕ್ರಿಯೆ ನಡೆಸಿದರೆ ಹುಟ್ಟುವ ಮಕ್ಕಳು ಜೀವನದಲ್ಲಿ ಎಂದಿಗೂ ಕಷ್ಟಗಳನ್ನು ಪಡುವುದಿಲ್ಲ.
ಮದುವೆಯ ನಿಜವಾದ ಉದ್ದೇಶ ಶಾರೀರಿಕ ಸುಖಕ್ಕಾಗಿ ಅಲ್ಲ, ಬದಲಿಗೆ ಉತ್ತಮ ಸಂತಾನವನ್ನು ಪಡೆದು ವಂಶಾಭಿವೃದ್ಧಿ ಮಾಡಿ ಕೊಳ್ಳುವುದೇ ಮದುವೆಯ ಮುಖ್ಯ ಉದ್ದೇಶವಾಗಿದೆ, ಆದರೆ ಈ ಕಾಲದಲ್ಲಿ ಉದ್ದೇಶಗಳು ಬೀರಿವೆ ಆಗಿಬಿಟ್ಟಿದೆ.
ಪೂರ್ವ ಕಾಲದ ಧರ್ಮಶಾಸ್ತ್ರಗಳು ಸತಿ ಪತಿ ಯರಿಗೆ ಕೆಲವು ನಿಯಮ ನಿಬಂಧನೆಗಳನ್ನು ವಿಧಿಸಿದೆ ಅವುಗಳ ಬಗ್ಗೆ ಚರ್ಚಿಸೋಣ.
ಋತುಮತಿ ಆಗುವುದು ಸ್ತ್ರೀಯರಿಗೆ ಸ್ವಾಭಾವಿಕ, ಋತುಮತಿಯಾದ ದಿನದಿಂದ 16 ದಿನಗಳು ಸಂತಾನ ಪಡೆಯುವುದಕ್ಕೆ ಶುಭಪ್ರದ ವಾದರೂ ಋತು ದರ್ಶನವಾದ ದಿನದಿಂದ ನಾಲ್ಕು ದಿನಗಳ ನಿಷೇಧ ವಾಗಿದೆ, ಹಾಗೂ 11, 13 ದಿನಗಳು ಸಹ ನಿಷಿದ್ಧ ದಿನಗಳು, ಉಳಿದ ಹತ್ತು ದಿನಗಳು ಉತ್ತಮ ಸಂತಾನವನ್ನು ಪಡೆಯಲು ಶುಭಪ್ರದವಾಗಿದೆ.
ಋತು ದರ್ಶನ ದಿಂದ ಬರುವ 16 ದಿನಗಳಲ್ಲಿ ಹತ್ತು ದಿನಗಳು ಶ್ರೇಷ್ಠವಾದ ದಿನಗಳಲ್ಲಿ ಹುಣ್ಣಿಮೆ ಅಮವಾಸ್ಯೆಗಳು ಬಂದರೆ ಹೆಂಡತಿಯಿಂದ ದೂರವಿರಬೇಕು, ಇದು ಉತ್ತಮ ಸಂತಾನ ಪಡೆಯಲು ನಿರ್ದೇಶನ, ಉಳಿದ ದಿನಗಳು ಸತಿಪತಿಯರು ಇಚ್ಚೆಯಂತೆ ದೇಹ ಸುಖ ಪಡೆಯ ಬಹುದು ಆದರೆ ಹಗಲಿನ ಸಮಯಗಳು ಎಂದೆಂದೂ ನಿಷಿದ್ಧವಾಗಿದೆ.