ಜೀವನದಲ್ಲಿ ಯಶಸ್ಸನ್ನು ಸಾಧಿಸಿ ಶ್ರೀಮಂತರಾಗಲು ಈ 6 ಸುಲಭ ದಿನಚರಿ ಪಾಲನೆ ಮಾಡಿ ಸಾಕು..!

0
6534

ಮನುಷ್ಯನ ಭಾವನೆಗಳು ಪರಿಸ್ಥಿತಿಗೆ ಮತ್ತು ಕಾಲಕ್ಕೆ ತಕ್ಕಂತೆ ಬದಲಾಗುತ್ತದೆ ಎಂಬ ಮಾತನ್ನು ಒಪ್ಪಿಕೊಳ್ಳಲೇಬೇಕು, ಅದರಂತೆ ಪರಿಸ್ಥಿತಿಗಳು ಮತ್ತು ಸಮಯದ ಮೇಲೆ ನಾವು ನಮ್ಮ ದೇಹದ ಹತೋಟಿಯನ್ನು ಸಾಧಿಸಿದಲ್ಲಿ ಎಂತಹುದೇ ಸಾಧನೆ ಮಾಡಿ ಜೀವನದಲ್ಲಿ ಗೆಲ್ಲಲು ಸಂಪೂರ್ಣ ಸಹಾಯ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಜೀವನದಲ್ಲಿ ಯಶಸ್ಸು ಕಂಡಿರುವ ವ್ಯಕ್ತಿಗಳು ತಪ್ಪದೇ ಪಾಲಿಸುವ 6 ಸೂತ್ರಗಳನ್ನು ಇಂದು ನಾವು ನಿಮಗೆ ತಿಳಿಸುತ್ತೇವೆ.

ಬೆಳಗ್ಗೆ ಎಲ್ಲರಿಗಿಂತ ಮುಂಚೆ ಹೇಳುವುದು : ಉದಾಹರಣೆಗೆ ನಿಮ್ಮ ಗೆಳೆಯರೊಂದಿಗೆ ನೀವು ರೂಮಿನಲ್ಲಿ ವಾಸವಾಗಿರುತ್ತಾರೆ ಎಂದರೆ ನಿಮ್ಮ ಎಲ್ಲಾ ಗೆಳೆಯರಿಗಿಂತ ಮುಂಚೆಯೇ ನೀವು ಎದ್ದಾಗ ನಿಮ್ಮ ಮುಂಜಾನೆಯ ಎಲ್ಲಾ ಚಟುವಟಿಕೆಗಳನ್ನು ಅವರಿಗಿಂತ ಮುಂಚೆಯೇ ಮುಗಿಸಿಬಿಟ್ಟರೆ, ಉಳಿದ ಸಮಯದಲ್ಲಿ ನೀವು ಹೆಚ್ಚು ಲವಲವಿಕೆಯಿಂದ ಇರುತ್ತೀರಿ, ಹಾಗೂ ಆತ್ಮವಿಶ್ವಾಸವನ್ನು ಹೇರಳವಾಗಿ ಪಡೆಯುತ್ತೀರಿ.

ಬೆಳಗ್ಗೆ ಎದ್ದ ತಕ್ಷಣ ಮೊಬೈಲ್ ನೋಡುವುದನ್ನು ಬಿಡಿ : ಬೆಳಗ್ಗೆ ಎದ್ದೊಡನೆ ಮನಸ್ಸು ಯಾವುದೇ ಯೋಚನೆ ಹಾಗೂ ದುಃಖಗಳಿಂದ ದೂರವಿರುತ್ತದೆ, ಇಂತಹ ಸಮಯದಲ್ಲಿ ಪುಸ್ತಕ ಓದುವುದು ಅಥವಾ ಇತರ ಚಟುವಟಿಕೆಗಳನ್ನು ಮಾಡುವುದರಿಂದ ಲಾಭ ಸಿಗುತ್ತದೆ, ಆದರೆ ಮೊಬೈಲ್ ನೋಡುತ್ತಾ ಕೂತರೆ ಮನಸ್ಸಿಗೆ ಯಾವುದೇ ಉತ್ತಮ ಪ್ರಯೋಜನಗಳನ್ನು ಕೊಡುವುದಿಲ್ಲ.

ಮುಂಜಾನೆ ನಿಮಗೆ ಇಷ್ಟವಿರುವ ಕೆಲಸ ಮಾಡಿ : ಮೇಲೆ ತಿಳಿಸಿದ ಹಾಗೆ ಮುಂಜಾನೆ ಎದ್ದೊಡನೆ ನಿಮ್ಮ ಮನಸ್ಸು ಪ್ರಶಾಂತವಾಗಿ ಇರುತ್ತದೆ, ಅಂತಹ ಸಮಯದಲ್ಲಿ ನೀವು ಯಾವುದೇ ಕೆಲಸವನ್ನು ಮಾಡುವುದಾದರೆ ಆ ಕೆಲಸ ಬಹಳ ಅಚ್ಚುಕಟ್ಟಾಗಿ ನೆರವೇರುತ್ತದೆ, ಆದ್ದರಿಂದ ಯೋಗಾಸನ ಅಥವಾ ವ್ಯಾಯಾಮ ಇನ್ನು ಕೆಲವರಿಗೆ ಚಿತ್ರಬಿಡಿಸುವ ಅಭ್ಯಾಸವಿದ್ದರೆ ಮುಂಜಾನೆ ನೀವು ಬಿಡಿಸುವ ಚಿತ್ರಕ್ಕೆ ಜೀವ ಬರುತ್ತದೆ.

ನಿರ್ದಿಷ್ಟ ದಿನಚರಿ : ಬೆಳಗ್ಗೆ ಎದ್ದೊಡನೆ ಇಂತಹ ಕೆಲಸಗಳು ಮಾಡಬೇಕು ಮಧ್ಯಾಹ್ನ ಈ ಕೆಲಸಗಳನ್ನು ಮಾಡಬೇಕು ಹಾಗೂ ಸಂಜೆ ಇವುಗಳನ್ನು ಮಾಡಿದರೆ ರಾತ್ರಿಗೆ ಈ ಕೆಲಸಗಳನ್ನು ತಪ್ಪದೇ ಮುಗಿಸಬೇಕು ಎಂಬುವ ನಿರ್ದಿಷ್ಟ ದಿನಚರಿ ಪಾಲನೆ ಮಾಡುವವನಿಗೆ ಬದುಕು ಸುಲಭ, ಮುಂಜಾನೆಯಿಂದ ಮಧ್ಯಾಹ್ನದವರೆಗೂ ಯಾವುದೇ ಕೆಲಸಗಳನ್ನು ಮಾಡದೆ ಸಂಜೆಯ ನಂತರ ಒಂದೇ ಬಾರಿಗೆ ಅಷ್ಟು ಕೆಲಸಗಳನ್ನು ಮಾಡುತ್ತೇನೆ ಎಂದು ಹೋದರೆ ಒಂದು ಕೆಲಸಗಳು ಆಗುವುದಿಲ್ಲ ಆದರೂ ಸರಿಯಾಗಿರುವುದಿಲ್ಲ, ಈ ಗುಣಗಳು ಜೀವನದಲ್ಲಿ ಗೆಲ್ಲಲು ಬಿಡುವುದೇ ಇಲ್ಲ.

ಸಾಧ್ಯವಾಗುವ ಗುರಿಗಳನ್ನು ಇಟ್ಟುಕೊಳ್ಳಿ : ಪ್ರತಿಯೊಬ್ಬನಿಗೂ ಜೀವನದಲ್ಲಿ ತನ್ನದೇಯಾದ ಗುರಿಯನ್ನು ಹೊಂದಿರುತ್ತಾನೆ ಆದರೆ ಆ ಗುರಿಗಳು ಸಾಧ್ಯವಾಗುವ ರೀತಿಯಲ್ಲಿ ಇರಬೇಕು, ಅಸಾಧ್ಯವಾದ ಹಾಗೂ ಕಲ್ಪನೆಗೂ ಮೀರಿದ ಆಸೆಗಳು ನಿಮ್ಮ ಗುರಿಯಾಗಿದ್ದರೆ ಅದು ನೆರವೇರುವುದಿಲ್ಲ ಇದರಿಂದ ನಿಮ್ಮ ಮನಸ್ಸು ಆತ್ಮವಿಶ್ವಾಸವನ್ನು ಕಳೆದುಕೊಳ್ಳುತ್ತದೆ, ಆತ್ಮ ವಿಶ್ವಾಸವನ್ನು ಕಳೆದುಕೊಂಡು ಮನಸ್ಸು ಮತ್ತೆ ಗೆಲ್ಲುವುದು ಬಹಳ ಕಷ್ಟ.

ಮುಂಜಾನೆಯ ಕೆಲಸಕ್ಕೆ ರಾತ್ರಿ ಯೋಜನೆ : ಮುಂಜಾನೆ ನಿಮ್ಮ ಚಟುವಟಿಕೆಗಳಿಗೆ ಸಹಾಯವಾಗುವ ಕೆಲಸಗಳನ್ನು ರಾತ್ರಿಯೇ ತಯಾರಿ ಮಾಡಿಕೊಳ್ಳಿ, ಬೆಳಗ್ಗೆ ದೋಸೆ ತಿನ್ನಬೇಕಾದರೆ ಹಿಟ್ಟು ರಾತ್ರಿಯೇ ಇರಬೇಕು ಅಲ್ಲವೇ ಅದೇ ರೀತಿ ನಾಳೆಯ ಕೆಲಸಗಳಿಗೆ ಹಿಂದೆಯೇ ತಯಾರಿ ಮಾಡಿಕೊಂಡವರಿಗೆ ನಾಳೆಯ ಕೆಲಸಗಳು ಅತಿ ಸುಲಭ, ಇಂತಹ ರೂಢಿಗಳು ಮನುಷ್ಯನನ್ನು ಗೆಲ್ಲಿಸುತ್ತದೆ.

LEAVE A REPLY

Please enter your comment!
Please enter your name here