ಭಾವನಾತ್ಮಕತೆ : ಅನಾದಿಕಾಲದಿಂದಲೂ ಧ್ಯಾನ ಎನ್ನುವುದು ಭಾರತೀಯ ಪರಂಪರೆಯಲ್ಲಿ ಸೇರಿಹೋಗಿದೆ ಧ್ಯಾನ ಎನ್ನುವುದು, ಸಕಲ ರೋಗಗಳಿಗೂ ಮದ್ದು ಧ್ಯಾನ ಮಾಡುವುದು, ನಮ್ಮ ಜೀವನದಲ್ಲಿ ನೆಮ್ಮದಿ ಶಾಂತಿ ಕಾಣುವ ಸಲುವಾಗಿ ಎಂದರೆ ತಪ್ಪಾಗುವುದಿಲ್ಲ, ನಾವು ಕುಳಿತು ಧ್ಯಾನ ಮಾಡುತ್ತೇವೆ, ಸುಖಾಸನದಲ್ಲಿ ಕುಳಿತು ಧ್ಯಾನ ಮಾಡುವ ಸಮಯದಲ್ಲಿ ತಲ್ಲೀನ ಆಗಬಲ್ಲದು ಅಂತಹ ಸ್ಥಿತಿಗೆ ಭಂಗಿಗೆ ಸುಖಾಸನ ಎಂದು ಕರೆಯುತ್ತಾರೆ, ಈ ರೀತಿ ಆರಾಮವಾಗಿರುವ ಭಂಗಿಯಲ್ಲಿ ಕುಳಿತು ನಾವು ಮನಸ್ಸು ದೇವರು ಇಷ್ಟವಾದ ವಿಷಯ, ಪ್ರೀತಿಯ ವ್ಯಕ್ತಿಗಳು, ಚಿತ್ರ, ಕಣ್ಣುಗಳ ಮುಂದೆ ತಂದು ಅಕ್ಕರೆಯಿಂದ ಸವಿಯುತ್ತ ಮನಸ್ಸು ಏಕಾಗ್ರತೆ ಕಡೆಗೆ ಕರೆದುಕೊಂಡು ಹೋಗುವ ಸ್ಥಿತಿಗೆ ಧ್ಯಾನ ಎನ್ನಲಾಗುತ್ತದೆ, ಭಾರತೀಯ ಪರಂಪರೆಯಲ್ಲಿಸಾಧು, ಸಂತರು, ಋಷಿಗಳು, ಯೋಗಿಗಳು ಇಂತಹ ಸಾಧನೆ ಮಾಡಿ ಹುಲು ಮಾನವರಿಗೂ ಸಹ ಉಪದೇಶ ಮಾಡಿ ನೆಮ್ಮದಿಯ ಜೀವನಕ್ಕೆ ಕಾರಣ ಆಗಿದ್ದಾರೆ.
ವಾಸ್ತವಿಕತೆ : ಧ್ಯಾನದಿಂದ ಹಲವಾರು ಬಗೆ ಪ್ರಯೋಜನಗಳು ಉಂಟು, ನಮ್ಮ ಕೆಲಸ ವೇಗವಾಗಿ ಮಾಡಲು ಏಕಾಗ್ರತೆ ಬೇಕು, ಅಂತ ಏಕಾಗ್ರತೆ ಬೆಳೆಸಿಕೊಳ್ಳಲು ಇದು ಸಹಕಾರಿ, ಧ್ಯಾನದಿಂದ ಮಾನಸಿಕ ದೃಢತೆ, ಏಕಾಗ್ರತೆ, ಸಹನೆ, ತಾಳ್ಮೆ ಗುಣಗಳು ನಮ್ಮಲ್ಲಿ ನೆಲೆ ನಿಲ್ಲುವುದು, ಹೀಗೆ ನಾವು ಸಕರಾತ್ಮಕ ಚಿಂತನೆಗೆ ನಮ್ಮನ್ನು ನಾವು ಈಡು ಮಾಡಿಕೊಳ್ಳುತ್ತೇವೆ, ನಮ್ಮನ್ನು ನಾವು ನಮ್ಮ ಸತ್ವ ಪ್ರೇರಣೆಗೆ ಹಚ್ಚಿಕೊಳ್ಳುತ್ತೇವೆ, ಆಗ ನಮ್ಮ ಜೀವನದಲ್ಲಿ ನಾವು ಗೆಲುವು ಸಾಧನೆ ಮಾಡಲು ಹಾದಿ ತಾನೇ ತಾನಾಗಿ ತೆರೆದುಕೊಳ್ಳುತ್ತದೆ, ಮನಸ್ಸು ಹಗರು ಲವಲವಿಕೆ ಸಂತೋಷದಿಂದ ಇರಲು ಧ್ಯಾನ ಸಹಾಯ ಮಾಡುತ್ತದೆ.
ವೈಚಾರಿಕತೆ : ಬದುಕುವುದು ಎನ್ನುವುದು ಸುಖ, ದುಃಖಗಳ ಸಂಕಲನ, ಕೆಲವು ಬಾರಿ ಸುಖವು ಜಾಸ್ತಿ ಆಗಬಹುದು, ದುಃಖವು ಅಧಿಕ ಎನ್ನಿಸಬಹುದು ಅಂತಹ ಸಮಯದಲ್ಲಿ ಮಾನಸಿಕ ಸಮತೋಲನ ಸಾಧನೆ ಮಾಡಲು ದ್ಯಾನ ಸಹಾಯ ಮಾಡುತ್ತದೆ, ಎನ್ನುವ ಸಂಗತಿ ನಮ್ಮ ಪ್ರಾಚೀನ ಕಾಲದಿಂದಲೂ ತಿಳಿದು ಬಂದಿದೆ, ನಮ್ಮ ಮನಸ್ಸು ಹತೋಟಿಗೆ ತರಲು ಧ್ಯಾನ ಪ್ರಮುಖ ಕಾರಣ ಆಗುತ್ತದೆ, ಹೀಗೆ ಸಮತೋಲನದಿಂದ ಜೀವನ ನಡೆಸಲು ಧ್ಯಾನದ ಹಾದಿ ಹಿಡಿಯುವುದು ಸೂಕ್ತ.