ಬಿಳಿ ಅಕ್ಕಿ ಶಕ್ತಿ ಶಾಲಿಯೇ ಅಥವಾ ಕೆಂಪು ಅಕ್ಕಿ ಹೆಚ್ಚು ಶಕ್ತಿ ಶಾಲಿಯೇ..?

0
7855

ಸಂಸ್ಕರಣೆಯ ಮೂಲಕ ಅಕ್ಕಿಯ ಭತ್ತದಿಂದ ಕೇವಲ ಅದರ ಸಿಪ್ಪೆಯನ್ನು ತೆಗೆದು ನಂತರ ಸಿಗುವ ಅಕ್ಕಿಯನ್ನು ಕುಚ್ಚಲಕ್ಕಿ ಅಥವಾ ಕಂದು ಬಣ್ಣದ ಅಕ್ಕಿ ಅಥವಾ ಸಾಮಾನ್ಯವಾಗಿ ಬ್ರೌನ್ ರೈಸ್ ಎಂದು ಕರೆಯುತ್ತಾರೆ ಇದು ತನ್ನ ನಾರು ಮತ್ತು ಪೌಷ್ಟಿಕಾಂಶವನ್ನು ಕಾಯ್ದಿರಿಸಿ ಕೊಂಡಿರುತ್ತದೆ.

ಆರೋಗ್ಯಕರ ಲಾಭಗಳು : ಇದು ಸೆಲೆನಿಯಮ್ ಇಂದ ಸಮೃದ್ಧವಾಗಿದ್ದು ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಗಳು, ಉರಿ ಊತದ ಸಮಸ್ಯೆಗಳು ಮತ್ತು ಇತ್ಯಾದಿ ಸಮಸ್ಯೆಗಳು ಬರುವ ಅಪಾಯಗಳನ್ನು ತಡೆಗಟ್ಟುತ್ತದೆ, ಒಂದು ಕಪ್ ಕುಚ್ಚಲಕ್ಕಿಯಲ್ಲಿ ಒಂದು ದಿನಕ್ಕೆ ಅಗತ್ಯವಿರುವ ಶೇಕಡಾ 80 % ಮಾಂಗನೀಸ್ ಒಳಗೊಂಡಿರುತ್ತದೆ.

ಈ ಖನಿಜವು ಮಾನವ ದೇಹದಲ್ಲಿ ಒಳ್ಳೆಯ ಕೊಬ್ಬನ್ನು ಉತ್ಪತ್ತಿಮಾಡಲು ಅಗತ್ಯಕರ ಕೊಬ್ಬಿನ ಅಂಶಗಳನ್ನು ರಚಿಸುತ್ತದೆ, ಅಷ್ಟೇ ಅಲ್ಲದೆ ಇದು ನರಮಂಡಲ ಮತ್ತು ಸಂತಾನೋತೃತಿಯ ಕಾರ್ಯದಲ್ಲೂ ಸಹಾಯಮಾಡುತ್ತದೆ, ಇದರಲ್ಲಿ ನೈಸರ್ಗಿಕ ಎಣ್ಯಹೃದಯ ಸ್ನೇಹಿ ಎಣ್ಣೆ ಯಾಗಿದ್ದು ಇದು ದೇಹದಲ್ಲಿ ಕೆಟ್ಟ ಕೊಬ್ಬುಗಳಾದ LDL ಕೊಲೆಸ್ಟ್ರಾಲ್ ಕಡಿಮ ಮಾಡುತ್ತದ.

ಇದರ ಅಧಿಕ ನಾರಿನಂಶದಿಂದ ಕೂಡ ಇದು ಜೀರ್ಣಕಾರಿ ಗುಣಗಳನ್ನು ಹೊಂದಿದ ಮತ್ತು ಇದು ಹೊಟ್ಟೆಯನ್ನು ಸ್ವಚ್ಛ ಮಾಡಲು ಅನುಕೂಲ ಮಾಡುವುದಲ್ಲದೆ, ಇದು ದೇಹದ ತೂಕ ಇಳಿಕ ಮತ್ತು ಮೆಟಾಬಾಲಿಕ್ ಚಟುವಟಿಕೆಯನ್ನು ಉತ್ತೇಜಿಸುತ್ತದೆ, ಕೇವಲ ಒಂದು ಕಪ್ ಕುಚ್ಚಲಕ್ಕಿ ತಿಂದರೂ ಹೊಟ್ಟೆ ತುಂಬುತ್ತದೆ, ಇದನ್ನು ಸಂಸ್ಕರಣೆ ಮಾಡಿದರೂ ಕೂಡ ಇದು ತನ್ನ ಪೌಷ್ಟಿಕಾಂಶಗಳನ್ನು ಕಳೆದುಕೊಳ್ಳದೆ ಇರುವುದರಿಂದ ಇದನ್ನು ನಾವು ಪರಿವೂರ್ಣ ಧಾನ್ಯವೆಂದು ಕರೆಯುತ್ತೇವ.

ಈ ಪರಿಪೂರ್ಣ ಧಾನ್ಯ ರಕ್ತನಾಳಗಳ  ಕಠಿಣ ಮಾಡಿ ಹೃದ್ರೋಗ ಮತ್ತು ರಕ್ತದಲ್ಲಿನ ಅಧಿಕ ಕೊಲೆಸ್ಟ್ರಾಲ್ ಆಗುವ ಅಪಾಯವನ್ನು ಕಡಿಮೆ ಮಾಡುತ್ತದೆ, ಕುಚ್ಚಲಕ್ಕಿಯ ನಿಗೂಢ ಸತ್ಯ ನಮಗಲ್ಲರಿಗೂ ತಿಳಿದಿರುವಂತ ಆಂಟಿ ಆಕ್ಸಿಡೆಂಟ್ ಗಳು ಹಚಾಗಿ ಬ್ಲೂ ಬೆರ್ರಿಗಳು, ಸ್ಮಾಬೆರ್ರಿಗಳು ಮತ್ತು ಇತರ ಹಣ್ಣು ಮತ್ತು ತರಕಾರಿಗಳಲ್ಲಿ ಇವೆ ಎಂದು ಆದರೆ ಕುಚ್ಚಲಕ್ಕಿಯಲ್ಲಿ ನಾವು ಅಷ್ಟೇ ಪ್ರಮಾಣದ ಆಂಟಿ ಆಕ್ಸಿಡಂಟ್ರಳನ್ನು ಕಾಣಬಹುದು.

ಕೆಲವು ಅಧ್ಯಯನಗಳ ಪ್ರಕಾರ ಕುಚ್ಚಲಕ್ಕಿಯನ್ನು ಹಚ್ಚಾಗಿ ಬಳಸುವುದರಿಂದ ಕರುಳು ಕ್ಯಾನ್ಸರ್‌ ಪ್ರಕರಣಗಳು ಕಡಿಮೆಯಾಗಿದೆ, ಇದಕ್ಕೆ ಕಾರಣ ಅದರಲ್ಲಿರುವ ಹೆಚ್ಚು ನಾರಿನಂಶ ಆಗಿದೆ, ಈ ನಾರು ಕ್ಯಾನ್ಸರ್ಕಾರಕ ಕೋಶಗಳೊಂದಿಗೆ ಅಂಟಿಕೊಂಡು ದೇಹದಿಂದ ಹೊರಹಾಕಿ ನಮ್ಮ ಕರುಳುಗಳನ್ನು ಆರೋಗ್ಯವಾಗಿರಿಸುತ್ತದೆ, ಇದರಲ್ಲಿರುವ ಇನ್ನು ಹಲವು ಅಂಶಗಳು ಜೀರ್ಣ ಕ್ರಿಯೆಯಲ್ಲಿ, ಸಹಾಯ ಮಾಡಿ ಮಲಬದ್ಧತೆ ಆಗದಿರುವಂತೆ ನೋಡಿಕೊಳ್ಳುತ್ತದೆ ಮತ್ತು ನಿಯಮಿತವಾದ ಕರುಳುಗಳ ಚಲನೆಗೆ ಉತ್ತೇಜಿಸುತ್ತದೆ, ಬಿಳಿ ಅಕ್ಕಿಯಂತೆ, ಕುಚ್ಚಲಕ್ಕಿ ತನ್ನ ಸಕ್ಕರೆ ಅಂಶವನ್ನು ಎಕಾಎಕಿ ಬಿಡದ ನಿಧಾನಗತಿಯಲ್ಲಿ ಬಿಡುಗಡೆ ಮಾಡುತ್ತದೆ, ಇದರಿಂದಾಗಿಯೇ ಮಧುಮೇಹದ ರೋಗಿಗಳಿಗೆ ಬಿಳಿ ಅಕ್ಕಿಗಿಂತ ಇದು ಒಳ್ಳೆಯ ಆಯ್ಕೆಯಾಗಿದೆ.

ಇನ್ನು ಕೆಲವು ಅಧ್ಯಯನಗಳ ಪ್ರಕಾರ ಏಷ್ಯಾ ಖಂಡದಲ್ಲಿ ಬಿಳಿ ಅಕ್ಕಿಯ ಸೇವನೆ ಮತ್ತು ಎರಡನೇ ವಿಧದ ಮಧುಮೇಹಕ್ಕೆ ಸಂಬಂಧವಿದೆ ಎಂದು ಹೇಳಲಾಗಿದೆ ಮತ್ತು ಕೇವಲ ವಾರಕ್ಕೆ ಎರಡು ಬಾರಿ ಕುಚ್ಚಲಕ್ಕಿ ತಿನ್ನುವುದರಿಂದ ಎರಡನೇ ವಿಧದ ಮಧುಮೇಹ ಬರುವ ಸಾಧ್ಯತೆಗಳು ಶೇಖಡಾ 2ರಿಂದ 11 % ರಷ್ಟು ಕಡಿಮೆಯಾಗುತ್ತದೆ, ಅದೇ ಇನ್ನೊಂದು ಕಡೆ ಬಿಳಿ ಅಕ್ಕಿ ತಿನ್ನುವವರಲ್ಲಿ ಮಧುಮೇಹ ಬರುವ ಸಾಧ್ಯತೆಗಳು ತೀರಾ ಅಧಿಕವಾಗಿದೆ.

ಶಿಶುವಿನ ಆಹಾರ ಕುಚಲಕ್ಕಿಯ ಸರಿ ಮಾಡುವುದು ಅಥವಾ ಕೂಚಲಕ್ಕಿಯ ಅನ್ನ ಕೂಡ ಶಿಶುವಿಗೆ ತುಂಬಾ ಆರೋಗ್ಯಕರ ಮತ್ತು ಶ್ರೇಷ್ಟ ಆಹಾರವಾಗಿದೆ, ಇದರಲ್ಲಿ ಅತಿ ಹೆಚ್ಚು  ಪೌಷ್ಟಿಕಾಂಶಗಳು ಮತ್ತು ನಾರು ಇವೆ, ಇದು ಬಿಳಿ ಅಕ್ಕಿಯಲ್ಲಿ ತಯಾರಿಸಿದ ಸರಿಗಿಂತಲೂ ಅತ್ಯುತ್ತಮವಾಗಿದ್ದು ಬೆಳೆಯುವ ಮಕ್ಕಳು ಮತ್ತು ಶಿಶುಗಳ ಉತ್ತಮ ಆಹಾರವೆಂದು ಪರಿಗಣಿಸಲಾಗಿದೆ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here