ನಮ್ಮ ಸಂಪ್ರದಾಯ, ಆಚಾರ ವಿಚಾರ ಪದ್ಧತಿಗಳಲ್ಲಿ ಯಾವುದೋ ಒಂದು ವೈಜ್ಞಾನಿಕ ಸತ್ಯ ಇರುತ್ತದೆ. ಅಷ್ಟಿಲ್ಲದೆ ಹಿರಿಯರು ಸಂಪ್ರದಾಯ ರೂಪಿಸುತ್ತಿರಲಿಲ್ಲ.
ಗಂಡ ಹೊರಗೆ ಹೋಗುವಾಗ ಹೆಂಡತಿಯ ಈ ಭಾಗವನ್ನು ಮುಟ್ಟಿದರೆ ಅವನಿಗೆ ಒಳ್ಳೆಯದಾಗುತ್ತದಂತೆ. ಮನೆಯಲ್ಲಿ ಲಕ್ಷ್ಮಿ ಒಲಿಯುತ್ತಾಳೆ. ಸುಖ ಸಮೃದ್ದಿ ಸಿಗುತ್ತದೆ. ಅದು ಯಾವ ಭಾಗ ಬನ್ನಿ ತಿಳಿದುಕೊಳ್ಳೋಣ, ಮನೆಯಿಂದ ಹೊರ ಹೋಗಬೇಕಾದರೆ ಯಾರಾದರೂ ಸರಿ ಹೋದ ಕೆಲಸ ಆಗಬೇಕು, ಹಣಕಾಸಿನ ಅಭಿವೃದ್ಧಿ ಆಗಬೇಕು, ಯಶಸ್ಸು ಸಿಗಬೇಕು ಎಂದೇ ಹೋಗುತ್ತಾರೆ. ಅದಕ್ಕೆ ಅವರು ಹೆಂಡತಿಯ ಈ ಭಾಗವನ್ನು ಮುಟ್ಟಿ ಹೋಗಬೇಕು. ಅದು ಯಾವುದೆಂದರೆ ಹೆಂಡತಿಯ ಬಲಗೈ ಭಾಗವನ್ನು ಮೃದುವಾಗಿ ಸ್ಪರ್ಶಿಸಿ ಹೋಗಬೇಕು.
ಹೆಂಡತಿ ಅಂದರೆ ಹೆಣ್ಣು, ಹೆಣ್ಣು ದೇವಿಯ ಸ್ವರೂಪ.ಅಂತಹ ಹೆಣ್ಣಿಗೆ ನಾವು ಯಾವುದೇ ರೀತಿಯಲ್ಲಿ ಮೋಸ ಮಾಡಬಾರದು. ನೋವು ಕೊಡಬಾರದು. ಹೆಂಡತಿ ಕಣ್ಣಲ್ಲಿ ಯಾವತ್ತೂ ಕಣ್ಣೀರು ಹಾಕಿಸಬಾರದು. ಮನೆಯಲ್ಲಿ ಯಾವಾಗಲೂ ಹೆಂಡತಿ ಅಳ್ತಿದ್ದರೆ ಆ ಮನೆಗೆ ಶ್ರೇಯಸ್ಸಲ್ಲ. ಕೆಲವು ಕುಡುಕರು, ಸಿಟ್ಟು ಹೆಚ್ಚಿರುವ ಗಂಡಂದಿರು ಸುಮ್ಮ ಸುಮ್ಮನೆ ಹೆಂಡತಿಯ ಕಣ್ಣಲ್ಲಿ ನೀರು ತರಿಸ್ತಾರೆ. ಅದು ಅವರ ಮನೆಗೆ ಶ್ರೇಯಸ್ಕರವಲ್ಲ.
ಹೆಂಡತಿ ಆದವರು ಗಂಡನ ಹೆಸರನ್ನು ಕರೆಯಬಾರದು. ಈಗಿನ ಕಾಲದಲ್ಲಿ ಲವ್ ಮ್ಯಾರೇಜ್, ಬಾಲ್ಯ ಸ್ನೇಹಿತ ಅಥವಾ ಮಾವನ ಮಗನನ್ನು ಮದುವೆಯಾಗಿ ಗಂಡಮ ಹೆಸರನ್ನು ಕರೆಯುತ್ತಾರೆ. ಆದರೆ ಪುರಾಣದ ಸಂಪ್ರದಾಯದ ಪ್ರಕಾರ ಗಂಡನ ಹೆಸರನ್ನು ಯಾವುದೇ ಕಾರಣಕ್ಕೂ ಹೆಸರಿಡಿದು ಕರೆಯಬಾರದು. ಅದೇ ರೀತಿಯಲ್ಲಿ ಹೆಂಡತಿಗೆ ಗಂಡಂದಿರು ಯಾವತ್ತೂ ಕಣ್ಣೀರನ್ನ ಹಾಕಿಸಬಾರದು.
ಹೆಂಡತಿಗೆ ಬಯ್ಯುವುದನ್ನು ನಿಲ್ಲಿಸಿ. ನಾಳೆಯಿಂದನೇ ಈ ಕೆಲಸ ಮಾಡಿ.ಆಗ ನಿಮ್ಮ ಮನೆಯಲ್ಲಿ ಆಗುವ ಸುಖ, ಸಂತೋಷ, ನೆಮ್ಮದಿ ಹೆಚ್ಚಾಗುತ್ತದೆ. ನಿಮಗೆ ಆಶ್ಚರ್ಯ ಆಗವಂತೆ ಮನೆ ಏಳಿಗೆ ಆಗುತ್ತದೆ.
ಇಷ್ಟು ಮಾತ್ರವಲ್ಲದೇ ಮನೆಯಲ್ಲಿ ಇರುವ ಹಿರಿಯರು, ತಂದೆ ತಾಯಿಯರನ್ನು ಗೌರವದಿಂದ ಕಾಣಿರಿ. ಹಿರಿಯ ವಯಸ್ಸಿನಲ್ಲಿ ಅವರಾಡುವ ಮಾತುಗಳು ನಿಮಗೆ ಬೇಸರ ತರುವುದು ಸಹಜ. ಆದರೆ ಅವುಗಳನ್ನು ನೀವು ಕ್ಷಮಿಸಿ ಹಿರಿಯರನ್ನು ಗೌರವಿಸಿ ಚೆನ್ನಾಗಿ ಸಾಕಿರಿ. ಅವರು ಸಂತೋಷವಾದರೆ ನಿಮಗೆ ಐಶ್ವರ್ಯ ಒಲಿದುಬರಲಿದೆ. ಹಿರಿಯರ ಮನಸ್ಪೂರ್ತಿದಾಯಕ ಹಾರೈಕೆ ಆಶಿರ್ವಾದ ನಿಮಗೆ ಒಳಿತನ್ನು ಮಾಡುತ್ತದೆ.