ಪ್ರತಿದಿನ ಮುಂಜಾನೆ ಬೆಳಗ್ಗೆ ಎದ್ದು, ಸ್ನಾನ ಮಾಡಿ ಗಡಿಬಿಡಿಯಲ್ಲಿ ದೇವರಿಗೆ ಕೈಮುಗಿದು, ಮನೆಯಲ್ಲಿ ತಯಾರಾಗಿದ್ದ ತಿಂಡಿ ತಿಂದು ಕೆಲಸಕ್ಕೆ ಹೊರಟರೆ ಸಂಜೆ ಮನೆಗೆ ಬಂದು ಸುಸ್ತಾಗಿ ಕೂರುವಾಗ ಧಾರವಾಹಿ ಸ್ವಲ್ಪ ಮನೋರಂಜನೆ ನೀಡುತ್ತಿದ್ದವು ಹಾಗೂ ಇಡೀ ದಿನದ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತಿದ್ದವು, ಆದರೆ ಈಗ ದೇಹಕ್ಕೆ ಯಾವುದೇ ಆಯಾಸವಿಲ್ಲದೆ, ಮಾರಣಾಂತಿಕ ಡೆಡ್ಲಿ ವೈರಸ್ ನಿಂದ ಮನೆಯ ಬಾಗಿಲನ್ನು ಬಿಟ್ಟು ಹೊರಗೆ ಹೋಗುವ ಆಗಿಲ್ಲ, ಟಿವಿ ಮುಂದೆ ನ್ಯೂಸ್ ಚಾನೆಲ್ ನೋಡುತ್ತಾ ಕೂರುವುದು ಬಿಟ್ಟರೆ ಬೇರೆ ಕೆಲಸವಿಲ್ಲ, ಇನ್ನು ಉಳಿದಂತೆ ಸಂಜೆ ಸಮಯದಲ್ಲಿ ಪ್ರಸಾರವಾಗುವ ದಾರವಾಹಿಗಳು ಮನೋರಂಜನೆ ನೀಡುತ್ತಿದ್ದವು, ಆದರೆ ಈ ದಾರವಾಹಿಗಳು ಶೂಟಿಂಗ್ ಇಲ್ಲದೆ ಇನ್ನೆಷ್ಟು ದಿನ ಪ್ರಸಾರವಾಗುತ್ತೆ ಹೇಳಿ?
ಕೊರೋನ ವೈರಸ್ ಇಂದಾಗಿ ಎಲ್ಲಾ ಫ್ಯಾಕ್ಟರಿಗಳು, ದೊಡ್ಡ ಸಾಫ್ಟ್ವೇರ್ ಕಂಪನಿಗಳು, ಕಾರ್ಖಾನೆಗಳು ಸೇರಿದಂತೆ ಸಿನಿಮಾ ಹಾಗೂ ಧಾರಾವಾಹಿ ಶೂಟಿಂಗ್ ಸಹ ನಿಂತುಹೋಗಿದೆ, ಹೊಸ ಸಿನಿಮಾ ಬಿಡುಗಡೆ ಏನೋ ನಿಂತುಹೋಗಿದೆ, ಧಾರಾವಾಹಿಗಳು ಇನ್ನೂ ಪ್ರಸಾರವಾಗುತ್ತಿವೆ, ಇನ್ನು ಎಷ್ಟು ದಿನ ಈ ದಾರವಾಹಿಗಳು ಪ್ರಸಾರವಾದ ಬಹುದು ಎಂಬ ಯೋಚನೆ ಖಂಡಿತವಾಗಿಯೂ ಬಂದೇ ಬರುತ್ತದೆ, ಸದ್ಯ ಬಹಳಷ್ಟು ಹೆಸರು ಮಾಡಿರುವ ಜೊತೆ ಜೊತೆಯಲ್ಲಿ ದಾರವಾಹಿ ಪ್ರಸಾರದ ವಿಚಾರವಾಗಿ ಅನಿರುದ್ಧ್ ಅವರ ಬಳಿ ಮಾತನಾಡಿದಾಗ ಅವರು ಹೇಳಿದ್ದು ಹೀಗೆ ಮುಂದಿನ ತಿಂಗಳು 10 ನೇ ತಾರೀಖಿನವರೆಗೂ ಪ್ರಸಾರ ಮಾಡುವಷ್ಟು ಎಪಿಸೋಡ್ಸ್ ಚಾನಲ್ ಗೆ ನೀಡಿದ್ದೇವೆ, ಆದರೆ ಅದರ ನಂತರ ಏನಾಗುತ್ತದೆ ಎಂಬುದು ಗೊತ್ತಿಲ್ಲ ಎಂದಿದ್ದಾರೆ.
ಇನ್ನು ಬಲ್ಲಮೂಲಗಳಿಂದ ಇತರ ಎಲ್ಲ ಧಾರಾವಾಹಿಗಳ ಎಪಿಸೋಡ್ ಸಹ ಅಂದಾಜು 10 ನೇ ತಾರೀಖಿನವರೆಗೂ ಬರಬಹುದು, ಕಾರಣ ಪ್ರತಿ ಧಾರಾವಾಹಿ ಸಹ ಮುಂದಿನ ಒಂದು ತಿಂಗಳವರೆಗೂ ಮುಂಚಿತವಾಗಿ ಶೂಟಿಂಗ್ ಮಾಡಿರುತ್ತಾರೆ, ಆದರೆ ಕಳೆದ 20 ದಿನಗಳಿಂದ ಶೂಟಿಂಗ್ ನಿಂತುಹೋಗಿದೆ ಹಾಗಾಗಿ ಮುಂದಿನ ತಿಂಗಳು ಎಪ್ರಿಲ್ 10 ನೇ ತಾರೀಖಿನವರೆಗೂ ಬರಬಹುದು, ಅದಾದ ನಂತರ ಹಳೆಯ ಎಪಿಸೋಡ್ ಗಳನ್ನು ಮತ್ತೆ ಪ್ಲೇ ಮಾಡಬಹುದು ಅಥವಾ ಆ ಸಮಯದಲ್ಲಿ ಚಲನಚಿತ್ರಗಳನ್ನು ಚಾನೆಲ್ ಗಳು ಪ್ರಸಾರ ಮಾಡಬಹುದು, ಬಹಿರಂಗವಾಗಿ ಇನ್ನು ಯಾವುದೇ ಚಾನೆಲ್ಗಳು ಇದರ ಬಗ್ಗೆ ಮಾತನಾಡಿಲ್ಲ ಹಾಗಾಗಿ ಕಾದು ನೋಡಬೇಕಿದೆ.