ಒಂದು ಕಾಲದಲ್ಲಿ ತಿನ್ನಲು ಊಟ ಇರಲಿಲ್ಲ ಇಂದು 3415 ಕೋಟಿ ಕಂಪನಿಯ ಒಡೆಯ..! ಇವರ ಕಥೆ ನಿಜವಾಗಿಯೂ ಎಲ್ಲರಿಗೂ ಸ್ಪೂರ್ತಿ.

0
16565

ಬಡವ ಹಾಗೂ ಶ್ರೀಮಂತ ಎಂಬುವ ಪದವು ಹುಟ್ಟಿನಿಂದಲೇ ಬರುತ್ತದೆ ಎಂಬುದು ಕೆಲವರ ವಾದ ಆದರೆ ಬುದ್ಧಿಜೀವಿಗಳು ಹೇಳುವ ಪ್ರಕಾರದಲ್ಲಿ ಹುಟ್ಟುತ್ತಾ ಬಡವ ಇರಬಹುದು ಆದರೆ ಬೆಳೆಯುತ್ತ ಆತ ಶ್ರೀಮಂತನಾಗುವ ಎಲ್ಲಾ ಅವಕಾಶಗಳು ಹಾಗೂ ಸೌಲಭ್ಯಗಳು ಇರುತ್ತದೆ ಆದರೆ ಶ್ರದ್ಧೆ ಮತ್ತು ಛಲದಿಂದ ಸಾಧನೆಯ ಹಾದಿಯನ್ನು ಹಿಡಿಯಬೇಕು.

ಒಬ್ಬ ಬಡ ರೈತನ ಮಗ ಇಂದು 3415 ಕೋಟಿ ಬೆಳೆಬಾಳುವ ಕಂಪನಿಯ ಮಾಲೀಕನಾಗಿ ಲಕ್ಷಾಂತರ ಜನರಿಗೆ ಮಾದರಿಯಾಗಿರುವ ವ್ಯಕ್ತಿಯ ಬಗ್ಗೆ ಇಂದು ತಿಳಿಸಿಕೊಡುತ್ತೇವೆ.

ಇವರ ಹೆಸರು ಆರೋಕಿಸ್ವಾಮಿ ವೇಳುಮಣಿ, ಒಂದು ಕಾಲದಲ್ಲಿ ಊಟದ ಸೌಕರ್ಯವಿಲ್ಲದೆ, ಸರ್ಕಾರಿ ಶಾಲೆಯಲ್ಲಿ ಊಟ ಸಿಗುತ್ತದೆ ಎಂದು ಒಂದು ಕೈಯಲ್ಲಿ ಸ್ಲೇಟ್ ಹಿಡಿದು ಶಾಲೆಗೆ ಹೋದರು, ನಂತರ ಇದೇ ಶಾಲೆ ಇವರಿಗೆ ಜೀವನ ಏನು ಎಂಬುದನ್ನು ಕಲಿಸಿತ್ತು, ಬಿಎಸ್ಪಿ ಪದವಿ ಪಡೆದ ಇವರು ಕೊಯಮತ್ತೂರಿನಲ್ಲಿ ಸಣ್ಣ ಔಷಧೀಯ ಕಂಪನಿಗೆ ಕೆಲಸಕ್ಕೆ ಸೇರಿಕೊಂಡು ದುಡಿಯುತ್ತಿದ್ದರು ಆಗ ಅವರಿಗೆ 150 ರೂಪಾಯಿ ಸಂಬಳ.

ವಿಧಿಯಾಟ ಮೂರು ವರ್ಷದೊಳಗೆ ಇವರು ಕೆಲಸ ಮಾಡುತ್ತಿದ್ದ ಕಂಪನಿ ಮುಚ್ಚಿಕೊಂಡಿತ್ತು, ಮೂರು ವರ್ಷಗಳ ಕಾಲ ಯಾವುದೇ ಕೆಲಸವಿಲ್ಲದೆ ಅಲೆಯ ಬೇಕಾಗಿತ್ತು, ಛಲಬಿಡದ ಇವರು ಪ್ರತಿಷ್ಠಿತ ಭಾಭಾ ಅಕಾಡೆಮಿ ಸಂಶೋಧನಾ ಕೇಂದ್ರದಲ್ಲಿ ಕೆಲಸ ಪಡೆದರು, ಇಲ್ಲಿ ಇವರಿಗೆ ಕೆಲಸದ ಜೊತೆಯಲ್ಲಿ ಹೆಚ್ಚಿನ ಸಂಶೋಧನೆ ಮಾಡಲು ಅವಕಾಶ ಸಿಕ್ಕಿತ್ತು.

ಇದರಿಂದ ಥೈರಾಯಿಡ್ ಜೀವರಸಾಯನಶಾಸ್ತ್ರದಲ್ಲಿ ಪಿಹೆಚ್ಡಿ ಮಾಡಿದರು, ಈ ಪದವಿ ಪಡೆಯುತ್ತಿದ್ದಂತೆ ಸ್ಟೇಟ್ ಬ್ಯಾಂಕ್ ನಲ್ಲಿ ಕೆಲಸಮಾಡುತ್ತಿದ್ದ ಸುಮತಿ ಎಂಬುವ ಹುಡುಗಿಯನ್ನು ಮದುವೆಯಾದರೆ, ನಂತರ ತಮ್ಮ ಸ್ವಂತ ಥೈರಾಯ್ಡ್ ಸಂಶೋಧನಾ ಕೇಂದ್ರವನ್ನು ತೆರೆಯುವ ಯೋಜನೆಯನ್ನು ತಮ್ಮ ಮಡದಿ ಮುಂದೆ ಇಟ್ಟರು.

ಪತಿಯನ್ನು ಹೇರಳವಾಗಿ ನಂಬುತ್ತಿದ್ದ ಸುಮತಿ ಅವರು ತಾವು ಮಾಡುತ್ತಿದ್ದ ಬ್ಯಾಂಕ್ ಕೆಲಸಕ್ಕೆ ರಿಸೈನ್ ಮಾಡಿ ಅದರಿಂದ ಬಂದ ಎರಡು ಲಕ್ಷ ಪ್ರಾವಿಡೆಂಟ್ ಫಂಡ್ ನಿಧಿಯನ್ನು ತಮ್ಮ ಗಂಡನಿಗೆ ನೀಡಿದರು, ಇದೇ ಹಣದಿಂದ ಅಂದು ಥೈರಾಯಿಡ್ ಪ್ರಯೋಗಾಲಯವನ್ನು ಪ್ರಾರಂಭಿಸಿದರು, ಶುರುವಿನಲ್ಲಿ ಥೈರಾಡ್ ಸಂಬಂಧಿತ ಸಮಸ್ಯೆಗಳಿಗೆ ಮಾತ್ರ ನಡೆಯುತ್ತಿದ್ದ ಪ್ರಯೋಗಾಲಯ ನಂತರ ಮಧುಮೇಹ, ಬಂಜೆತನ, ಹೃದಯ ಸಂಬಂಧಿ ಸಮಸ್ಯೆಗಳು ಹಾಗೂ ಲೈಂಗಿಕವಾಗಿ ಹರಡುವ ರೋಗಗಳನ್ನು ಪತ್ತೆ ಹಚ್ಚುವ ಪ್ರಯೋಗಾಲಯ ವಾಗಿ ವಿಸ್ತರಿಸಿದರು.

ಕೇವಲ ಎರಡು ವರ್ಷಗಳಲ್ಲಿ ಕಂಪನಿ 3415 ಕೋಟಿ ರೂಪಾಯಿ ಮೌಲ್ಯದ ಮಾರುಕಟ್ಟೆ ತಲುಪಿದೆ, ಭಾರತ ಹಲವೆಡೆ ನೇಪಾಳ ಬಾಂಗ್ಲಾದೇಶ ಮಧ್ಯಪ್ರದೇಶ ಸೇರಿದಂತೆ 1250 ಕೇಂದ್ರಗಳನ್ನು ಕಂಪನಿ ಹೊಂದಿದೆ, ಇಷ್ಟೆಲ್ಲಾ ಸಾಧನೆಗೆ ಬೆನ್ನೆಲುಬಾದ ಪತ್ನಿ ಇಂದು ಕ್ಯಾನ್ಸರ್ ರೋಗಕ್ಕೆ ಗುರಿಯಾಗಿ ತಮ್ಮ ಮಕ್ಕಳ ಜೊತೆಯಲ್ಲಿ ಜೀವನ ಕಳೆಯುತ್ತಿದ್ದಾರೆ, ಇವರ ಸಾಧನೆಗೆ ಎಷ್ಟು ಮೆಚ್ಚುಗೆಗಳು ನೀಡಿದರು ಕಡಿಮೆಯೇ.

LEAVE A REPLY

Please enter your comment!
Please enter your name here