ಒಡೆಯಾ ಚಿತ್ರ ಮುಂದಿನ ವಾರ ಡಿಸೆಂಬರ್ 12 ಕ್ಕೆ ಬಿಡುಗಡೆ ಆಗುತ್ತಿದೆ. ಸೂಪರ್ ಸ್ಟಾರ್ ರಜನಿಕಾಂತ್ ರ ಹುಟ್ಟಿದ ಹಬ್ಬದ ದಿನವೇ ಬಿಡುಗಡೆ ಆಗುತ್ತಿರುವುದು ವಿಶೇಷ. ಎಂಡಿ ಶ್ರೀಧರ್ ನಿರ್ದೇಶನದ ಈ ಚಿತ್ರ ಭಾರೀ ನಿರೀಕ್ಷೆ ಮೂಡಿಸಿದೆ.
ದರ್ಶನ್ ರವರ ಚಿತ್ರದ ಮೂಲಕ ಹೊಸ ನಟಿಯ ಎಂಟ್ರಿಯಾದರೆ ಆಕೆಗೆ ಸಕ್ಕತ್ ಲಕ್ ಗ್ಯಾರಂಟಿ. ಇದಕ್ಕೆ ಉದಾಹರಣೆ ರಚಿತಾ ರಾಮ್. ಇದೇ ಎಂಡಿ ಶ್ರೀಧರ್ ನಿರ್ದೇಶನದ ದರ್ಶನ್ ಅಭಿನಯದ ಬುಲ್ ಬುಲ್ ಚಿತ್ರದ ಮೂಲಕ ರಚಿತಾ ರಾಮ್ ಎಂಟ್ರಿಯಾಗಿ ಕನ್ನಡದ ನಂಬರ್ ಒನ್ ನಟಿಯಾಗಿ ಬೆಳೆದರು.
ಹೀಗೆ ದರ್ಶನ್ ಜೊತೆ ಪರಿಚಯ ಆದ ನಟಿಯರು ಯಶಸ್ಸು ಗಳಿಸಿದ್ದಾರೆ. ಈಗ ಒಡೆಯ ಚಿತ್ರದ ಮೂಲಕ ಮತ್ತೊಬ್ಬ ಗುಳಿಕನ್ಯೆ ಹುಡುಗಿ ಪರಿಚಯ ಆಗುತ್ತಿದ್ದಾರೆ. ಅವರ ಹೆಸರು ಸನಾ ತಿಮ್ಮಯ್ಯ ಅಂತ. ಮೂಲತಃ ಮಾಡಲ್ ಆದ ಸನಾ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದೇ ವಿಶೇಷ. ದರ್ಶನ್ ರವರ ತಾಯಿ ಮೀನಾ ತೂಗುದೀಪರವರು ಸನಾರ ಪರಿಚಯವನ್ನು ಒಡೆಯ ಟೀಮಿಗೆ ಮಾಡಿಸುತ್ತಾರೆ.
ಒಡೆಯ ಚಿತ್ರತಂಡ ಹೊಸ ನಾಯಕಿ ಹುಡುಕಾಟದಲ್ಲಿದ್ದಾಗ ಮೀನಾರವರು ಮಾಡಲಿಂಗ್ ಆದ ಸನಾರನ್ನ ಪರಿಚಯ ಮಾಡಿಸುತ್ತಾರೆ. ಸನಾಗೆ ಚಿತ್ರರಂಗ ಹೊಸತೇ. ದರ್ಶನ್ ರನ್ನ ಈ ಮೊದಲು ನೋಡಿರಲಿಲ್ಲವಂತೆ. ಸೆಟ್’ನಲ್ಲಿ ಅವರನ್ನು ನೋಡಿದರು. ಮೊದಲು ಭಯವಾಗಿತ್ತು. ಆದರೆ ದರ್ಶನ್ ಧೈರ್ಯ ತುಂಬಿದರು. ಅವರು ಡೌನ್ ಟು ಅರ್ಥ್. ಅವರು ಹೊಸಬರಿಗೆ ಧೈರ್ಯ ತುಂಬುತ್ತಾರೆ. ಅಭಿನಯದಲ್ಲಿ ಯಾವ ರೀತಿಯಲ್ಲಿ ಇಂಪ್ರೂವ್ ಆಗಬೇಕು ಎಂದು ಟಿಪ್ಸ್ ನೀಡುತ್ತಾರೆ.
ಸನಾರ ಮೊದಲ ಹೆಸರು ರಾಘವಿ. ರಾಘವಿ ಹೆಸರು ಆಕೆಗೆ ಮತ್ತು ಚಿತ್ರತಂಡಕ್ಕೆ ಇಷ್ಟವಾಗಲಿಲ್ಲ. ಅದಕ್ಕೆ ಯೋಚಿಸಿ ಸನಾತಿಮ್ಮಯ್ಯ ಎಂದು ಹೆಸರಿಟ್ಟರು. ಹೆಸರಿನ ಬದಲಾವಣೆಯಿಂದಾದರೂ ಆಕೆಯ ಅದೃಷ್ಟ ಬದಲಾಗುತ್ತಾ ನೋಡಬೇಕು.