ಸೋಷಿಯಲ್ ಮೀಡಿಯಾ ದಲ್ಲಿ ಪ್ರಿಯಕರ ಮದುವೆಯಾಗಿರುವ ಫೋಟೋ ನೋಡಿ ಆತ್ಮಹತ್ಯೆ ಮಾಡಿಕೊಂಡು ಡೆತ್ ನೋಟ್ ನಲ್ಲಿ ಏನು ಬರೆದಿದ್ದಾಳೆ ನೋಡಿ!

0
4270

ಬೆಂಗಳೂರಿನ ಮಾಗಡಿ ರಸ್ತೆಯ ದಾಸರಹಳ್ಳಿಯಲ್ಲಿ ತಾನು ಪ್ರೀತಿ ಮಾಡಿದ ಯುವಕ ಬೇರೆ ಯುವತಿಯೊಂದಿಗೆ ಮದುವೆಯಾಗಿದ್ದಾನೆ ಎಂದು ತಿಳಿದು ಮನನೊಂದ ಪ್ರೇಯಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ, ಯುವತಿಯನ್ನು ಪವಿತ್ರ 27 ವರ್ಷ ಎಂದು ಗುರುತಿಸಲಾಗಿದ್ದು ಈಕೆ ಅಂಗನವಾಡಿಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು, ಸುಮಾರು ನಾಲ್ಕು ವರ್ಷದಿಂದ ನಾಗೇಶ್ ಎಂಬ ವ್ಯಕ್ತಿಯನ್ನು ಪ್ರೀತಿ ಮಾಡುತ್ತಿದ್ದಳು, ಡೆತ್ ನೋಟ್ ನಲ್ಲಿ ಪ್ರಿಯಕರ ನನಗೆ ಮೋಸ ಮಾಡಿದ್ದಾನೆ ಬೇರೆಯವರನ್ನು ಮದುವೆಯಾಗಿದ್ದಾನೆ ಎಂದು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.

ಘಟನೆಯ ವಿವರ : ಪವಿತ್ರ ಹಾಗೂ ನಾಗೇಶ್ ಇಬ್ಬರು ಸುಮಾರು ನಾಲ್ಕು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು, ಆದರೆ ನಾಗೇಶ್ ಅವರ ಮನೆಯಲ್ಲಿ ಪವಿತ್ರ ಅವರನ್ನು ಮದುವೆಯಾಗಲು ನಿರಾಕರಿಸಿದ್ದಾರೆ, ಅದೆಷ್ಟು ಬಾರಿ ನಾಗೇಶ್ ಕೂಡ ಮನೆಯವರ ಮನವೊಲಿಸಲು ಪ್ರಯತ್ನ ಪಟ್ಟಿದ್ದಾರೆ, ಎಷ್ಟೇ ಮನವೊಲಿಸಲು ಪ್ರಯತ್ನ ಪಟ್ಟರೂ ಮನೆಯವರು ಒಪ್ಪದಿದ್ದಾಗ ಮನೆಯವರು ತೋರಿಸಿದ ಹುಡುಗಿಯನ್ನೇ ನಾಗೇಶ್ ಮದುವೆಯಾಗಿದ್ದಾರೆ, ಇವರ ಮದುವೆಯ ಫೋಟೋವನ್ನು ತಮ್ಮ ಫೇಸ್ ಬುಕ್ ಖಾತೆಯಲ್ಲಿ ನಂತರ ಹಂಚಿಕೊಂಡಿದ್ದಾರೆ.

ಇದನ್ನು ನೋಡಿದ ಪವಿತ್ರ ಆಘಾತಕ್ಕೆ ಒಳಗಾಗಿದ್ದಾರೆ, ನಾಗೇಶ್ ಗೆ ಕರೆ ಮಾಡಿ ಮಾತನಾಡಲು ಮುಂದಾದಾಗ ನಾಗೇಶ್ ಇವರನ್ನು ಅವಾಯ್ಡ್ ಮಾಡಿದ್ದಾರೆ ಇದರಿಂದ ಪವಿತ್ರ ಗೆ ಮತ್ತಷ್ಟು ನೋವುಂಟಾಗಿದೆ, ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ ನಂತರ ಪವಿತ್ರ ಅವರ ತಾಯಿ ಕೂಡ ಇವರಿಗೆ ಸಮಾಧಾನ ಮಾಡಿದ್ದಾರೆ, ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ರೂಮಿನಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಮನೆಗೆ ತಾಯಿ ಹಿಂದುರಿಗಿದ ಪ್ರಕರಣ ಬೆಳಕಿಗೆ ಬಂದಿದೆ ಡೆತ್ ನೋಟ್ ನಲ್ಲಿ ನನ್ನ ಸಾವಿಗೆ ನಾಗೇಶ್ ಕಾರಣ ಎಂದು ಬರೆದಿದ್ದಾರೆ.

ಮಾಗಡಿ ರೋಡ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು ಪ್ರಿಯಕರ ನಾಗೇಶ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಮೂಲ ಪಬ್ಲಿಕ್ ಟಿವಿ ವರದಿ

LEAVE A REPLY

Please enter your comment!
Please enter your name here