ಕೋಟಿ ಕೊಟ್ಟರೂ ಆಗದ ಕೆಲಸ ನಿಂಬೆಹಣ್ಣಿನಿಂದ ಆಗುತ್ತೆ. ನಿಂಬೆಹಣ್ಣಿನ ದೀಪದ ಮಹತ್ವ ಅಪಾರ. ಇದರಿಂದ ಉತ್ತಮ ಫಲಗಳು ಸಿಗುವುದು ಎಷ್ಟು ಸತ್ಯವೋ, ಅಷ್ಟೇ ಕಹಿ ಸತ್ಯ ಮತ್ತೊಂದಿದೆ. ಇದನ್ನು ಯಾವ ಸಮಯದಲ್ಲಿ, ಯಾವ ಸ್ಥಳಗಳಲ್ಲಿ ಹಾಗು ಹೀಗೆ ಹಚ್ಚಬೇಕು ಎಂಬ ಮಾಹಿತಿ ತಿಳಿಯುವುದು ಅನಿವಾರ್ಯ. ಇಲ್ಲವಾದರೆ ಅಪಾಯವಾಗಬಹುದು. ನಿಂಬೆಹಣ್ಣು ಸ್ತ್ರೀ ದೇವತೆಯಾದ, ಶಕ್ತಿ ಸ್ವರೂಪಿಣಿಯಾದ ಪಾರ್ವತಿದೇವಿಗೆ ಬಹಳ ಇಷ್ಟ. ದೇವಿಗೆ ನಿಂಬೆಹಣ್ಣಿನ ಹಾರ ಹಾಕುವುದನ್ನು ನಾವು ನೋಡಿರುತ್ತೇವೆ.
ದೀಪವನ್ನು ಪಾರ್ವತಿ ಸ್ವರೂಪಿಯಾದ ಅಂಬಾ ಭವಾನಿ ಮಂದಿರ, ಚೌಡೇಶ್ವರಿ ದೇವಿ, ಮಾರಿಯಮ್ಮ, ದುರ್ಗಾ ಹಾಗೂ ಶಕ್ತಿ ದೇವತೆಯರ ದೇವಾಲಯಗಳಲ್ಲಿ ನಿಂಬೆಹಣ್ಣಿನ ದೀಪಗಳನ್ನು ಹಚ್ಚಬೇಕು. ಯಾವುದೇ ಕಾರಣಕ್ಕೂ ಮಹಾಲಕ್ಷ್ಮಿ ಹಾಗೂ ಸರಸ್ವತಿಯ ಯಾವುದೇ ದೇವಾಲಯದಲ್ಲಿ ನಿಂಬೆಹಣ್ಣಿನ ದೀಪವನ್ನು ಹಚ್ಚಬಾರದು. ಹಾಗೆ ಒಂದು ವೇಳೆ ಹಚ್ಚಿದರೆ ಆ ಮನೆಯಲ್ಲಿ ಸುಖ ಸಂತೋಷ ಇರುವುದಿಲ್ಲ. ಸಂಸಾರದಲ್ಲಿ ಯಾವಾಗಲೂ ನೆಮ್ಮದಿ ಇರುವುದಿಲ್ಲ. ಹಣಕಾಸಿನ ಸಮಸ್ಯೆ ಅಧಿಕವಾಗಿರುತ್ತದೆ. ಆರೋಗ್ಯ ಬಾಧೆ ಮನೆಯಲ್ಲಿ ಅಪಮೃ’ತ್ಯುವಿನಂತಹ ಘೋರ ಕಾರ್ಯಗಳು ನಡೆದು ಹೋಗುತ್ತದೆ.
ಪಾರ್ವತಿ ದೇವಾಲಯದಲ್ಲಿ ನಿಂಬೆಹಣ್ಣಿನ ದೀಪವನ್ನು ದೇವಿ ವಾರದ ಮಂಗಳವಾರ ಹಾಗೂ ಶುಕ್ರವಾರ ಹಚ್ಚುತ್ತಾರೆ. ಮಂಗಳವಾರ ಹಚ್ಚುವ ದೀಪಕ್ಕಿಂತ ಶುಕ್ರವಾರ ಹಚ್ಚುವ ದೀಪಕ್ಕೆ ಬಲು ವೈಶಿಷ್ಟ್ಯ ವಿರುತ್ತದೆ. ಏಕೆಂದರೆ ಮಂಗಳವಾರದ ದೀಪವು ರಜೋಗುಣದಿಂದ ಕೂಡಿರುತ್ತದೆ ಹಾಗೂ ಶುಕ್ರವಾರದ ದೀಪವು ಅತ್ಯಂತ ಶುಭಪ್ರದವಾಗಿರುತ್ತದೆ. ಶುಕ್ರವಾರ ದೇವಿಗೆ ದೀಪ ಹಚ್ಚಿದರೆ ಮನಸ್ಸಿಗೆ ನೆಮ್ಮದಿ ಉಂಟುಮಾಡುತ್ತದೆ.
ಶುಕ್ರವಾರದ ದಿನ ಶಕ್ತಿ ದೇವತೆಯರಿಗೆ ನಿಂಬೆಹಣ್ಣಿನ ದೀಪ ಹಚ್ಚಿ ನಂತರ ಮನೆಯ ಯಜಮಾನರ ಅಥವಾ ಪೂಜೆ ಮಾಡುವವರ ಹೆಸರಿನಲ್ಲಿ ದೇವರಿಗೆ ಅಷ್ಟೋತ್ತರ ಮಾಡಿಸಬೇಕು.
ನಂತರ ಕೋಸಂಬರಿ, ಪಾನಕ, ಮಜ್ಜಿಗೆ ಹಾಗೂ ಹಣ್ಣುಹಂಪಲುಗಳನ್ನು ದೇವರಿಗೆ ನೈವೇದ್ಯ ಮಾಡಿ ಸುಮಂಗಲಿಯರಿಗೆ ಕೊಡಬೇಕು. ಸಾಧ್ಯವಾದರೆ ಅರಿಶಿನ, ಕುಂಕುಮ, ಬಳೆ, ರವಿಕೆ, ಕಣ, ಸೀರೆ ಕೊಟ್ಟರೆ ದೇವರಿಗೆ ಬಲು ಪ್ರೀತಿ. ತಾಂಬೂಲ ದಾನ ಹಾಗೂ ಯಥಾಶಕ್ತಿ ದಕ್ಷಿಣೆಯನ್ನು ಸುಮಂಗಲಿಯರಿಗೆ ಕೊಟ್ಟು ನಮಸ್ಕಾರ ಮಾಡಬೇಕು. ಹೀಗೆ ಮಾಡಿದರೆ ನೆನೆದ ಕಾರ್ಯಗಳು ಸುಸೂತ್ರವಾಗಿ ಮತ್ತು ಅತಿ ಶೀಘ್ರದಲ್ಲಿ ನೆರವೇರುತ್ತದೆ.
ನಿಂಬೆಹಣ್ಣಿನ ದೀಪವನ್ನು ಹಚ್ಚುವಾಗ ಗಮನಿಸಬೇಕಾದ ಅಂಶಗಳು : ಯಾವುದೇ ಕಾರಣಕ್ಕೂ ಒಂದೇ ಮನೆಯಲ್ಲಿ ಒಬ್ಬರು ಹೆಂಗಸರು ಮಾತ್ರ ನಿಂಬೆಹಣ್ಣಿನ ದೀಪ ಹಚ್ಚಬೇಕು. ಯಾವುದೇ ಕಾರಣಕ್ಕೂ ನಿಂಬೆಹಣ್ಣಿನ ದೀಪವನ್ನು ಮನೆಯಲ್ಲಿ ಹಚ್ಚಲೇಬಾರದು. ಯಾವುದೇ ಕಾರಣಕ್ಕೂ ಹೆಂಗಸರು ರಜಸ್ಥಲೆ ಇರುವಾಗ ನಿಂಬೆಹಣ್ಣಿನ ದೀಪ ಹಚ್ಚಬಾರದು. ಯಾವುದೇ ಕಾರಣಕ್ಕೂ ಸ್ತ್ರೀಯರು ನಾಲ್ಕು ದಿನ ನೀರು ಹಾಕಿಕೊಂಡು ಅಥವಾ ಸ್ನಾನ ಮಾಡಿಕೊಂಡು ಮತ್ತು ಅದೇ ದಿನ ನಿಂಬೆಹಣ್ಣಿನ ದೀಪ ಹಚ್ಚಬಾರದು. ನಿಂಬೆಹಣ್ಣಿನ ದೀಪವನ್ನು ಮೈಲಿಗೆ ಇರುವವರು ಯಾವುದೇ ಕಾರಣಕ್ಕೂ ಹಚ್ಚಬಾರದು.
ಯಾವುದೇ ಕಾರಣಕ್ಕೂ ಆರೋಗ್ಯವು ಸರಿಯಿಲ್ಲದ ವೇಳೆಯಲ್ಲಿ ನಿಂಬೆಹಣ್ಣಿನ ದೀಪ ಹಚ್ಚಬಾರದು. ಯಾವುದೇ ಕಾರಣಕ್ಕೂ ಹಬ್ಬ-ಹರಿದಿನಗಳಲ್ಲಿ ಮತ್ತು ಕಾರ್ಯದ ದಿವಸ ನಿಂಬೆಹಣ್ಣಿನ ದೀಪ ಹಚ್ಚಬಾರದು. ಯಾವುದೇ ಕಾರಣಕ್ಕೂ ಮಕ್ಕಳ ಹುಟ್ಟುಹಬ್ಬದಂದು ಮತ್ತು ಮದುವೆಯ ದಿವಸದಂದು ನಿಂಬೆಹಣ್ಣಿನ ದೀಪ ಹಚ್ಚಬಾರದು. ಯಾವುದೇ ಕಾರಣಕ್ಕೂ ಮನೆಯಲ್ಲಿ ಎರಡು ದೀಪಗಳನ್ನು ಅಂದರೆ ಎಳ್ಳು ಮತ್ತು ನಿಂಬೆ ಹಣ್ಣಿನ ದೀಪ ಹಚ್ಚಬಾರದು. ಸುಮಂಗಲಿಯರು ರೇಷ್ಮೆ ಸೀರೆ ಉಟ್ಟು ನಿಂಬೆಹಣ್ಣಿನ ದೀಪ ಹಚ್ಚಿದರೆ ಶೀಘ್ರದಲ್ಲಿ ದೇವಿಯ ಅನುಗ್ರಹದಿಂದ ಸಕಲ ಕಾರ್ಯಗಳು ನಿರ್ವಿಘ್ನವಾಗಿ ನೆರವೇರುತ್ತವೆ.
ಸುಮಂಗಲಿಯರು ಹತ್ತಿ ಸೀರೆ ಉಟ್ಟು ನಿಂಬೆಹಣ್ಣಿನ ದೀಪ ಹಚ್ಚಿದರೆ ಮಧ್ಯಮ ಫಲ ದೊರೆಯುತ್ತದೆ. ಸುಮಂಗಲಿಯರು ದೇವರಿಗೆ ನಿಂಬೆಹಣ್ಣಿನ ದೀಪ ಹಚ್ಚುವಾಗ ಚೂಡಿದಾರ, ನೈಟಿ, ಬೇರೆ ಯಾವುದೇ ಉಡುಪನ್ನು ಹಾಕಿಕೊಂಡು ಪೂಜೆ ಮಾಡಿದರೆ ಉತ್ತಮ ಫಲಗಳು ಸಿಗುವುದಿಲ್ಲ. ಕಾರ್ಯವು ಕೈಗೂಡುವುದಿಲ್ಲ. ಪೂಜೆ ಮಾಡುವ ವೇಳೆಯಲ್ಲಿ ಹೇಗಿರುತ್ತಾರೋ ಹಾಗೆಯೇ ಅವರ ಜೀವನ ಸಾಗುತ್ತದೆ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ. ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.