ಗೂಗಲ್ ಪ್ರಕಾರ KGf ದಾಖಲೆ ಮುರಿದು 2500 ಕೋಟಿ ಗಳಿಸಿದ ಕನ್ನಡ ಚಿತ್ರ

0
2828

ಕನ್ನಡದ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ ಯಾವುದು ಅಂತ ಕೇಳಿದ್ರೆ ಯಾರ್ ಬೇಕಾದರೂ ಹೇಳ್ತಾರೆ ಅದು ಕೆಜಿಎಫ್ ಅಂರ! ಆದರೆ ಅದು ಸುಳ್ಳು ಅಂತಿದೆ ಗೂಗಲ್. ಹೌದು ಕನ್ನಡದ ಈ ಚಿತ್ರ ಬರೋಬ್ಬರಿ 2500 ಕೋಟಿ ಗಳಿಸಿದೆ ಹಾಗು ಅದರ ಬಜೆಟ್ ಕೇವಲ 30 ಲಕ್ಷ ಎಂದು ಗೂಗಲ್ ವಿಕಿಪೀಡಿಯ ಹೇಳಿದೆ.

ಹಾಗಾದರೆ ಆ ಚಿತ್ರ ಯಾವುದು ಅಂತ ನೊಡ ಹೊರಟರೆ ಅದು ಗ್ಲೊಬಲ್ ಸ್ಟಾರ್ , ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ನಿರ್ದೇಶನದ ಹುಚ್ಚ ವೆಂಕಟ್ ಚಿತ್ರ. ಹುಚ್ಚ ವೆಂಕಟ್ ಚಿತ್ರ 2014 ರಲ್ಲಿ ಬಿಡುಗಡೆಯಾಗಿ ಒಂದೇ ದಿನದಲ್ಲಿ ಕೇವಲ 15 ಜನ ಪ್ರೇಕ್ಷಕರು ಬಂದಿದ್ದು ಅಟ್ಟರ್ ಪ್ಲಾಪ್ ಆಗಿದ್ದು ನಿಮಗೆಲ್ಲಾ ಗೊತ್ತೇ ಇದೆ. ಆ ಚಿತ್ರದ ಮೊದಲ ದಿನದ ಶೋ ವೇಳೆ ಅಭಿನಯ ಥಿಯೇಟರ್ ನಲ್ಲಿ ಹುಚ್ಚ ವೆಂಕಟ್ ಸಮಯ ಚಾನಲ್’ನ ವರದಿಗಾರರೊಂದಿಗೆ ಪ್ರೇಕ್ಷಕರನ್ನ ಎದ್ವಾ ತದ್ವಾ ಬೈದಿದ್ದರು. ಇದು ಎಷ್ಟು ವೈರಲ್ ಆಗಿತ್ತೆಂದರೆ‌ ಅದಾದ ಮೇಲೆ ಹುಚ್ಚ ವೆಂಕಟ್ ಪಾಕಿಸ್ತಾನ, ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ತನ್ನ ವೆಂಕಟ್ ಸೇನೆ ಇದೆ ಎಂದು ಹೇಳಿದ್ದು ಆಯಿತು.

ಇಂತಿಪ್ಪ ಹುಚ್ಚ ವೆಂಕಟ್ ಚಿತ್ರ 2500 ಕೋಟಿ ಗಳಿಸದೆ ಎಂದು ವಿಕಿಪೀಡಿಯದಲ್ಲಿ ಯಾರೋ ಎಡಿಟ್ ಮಾಡಿದ್ದಾರೆ.ವಿಕಿಪೀಡಿಯದಲ್ಲಿ ಯಾರು ಬೇಕಾದರೂ ಸೇರಬಹುದು. ತಮಗೆ ಇಷ್ಟ ಬಂದ ಹಾಗೇ ಎಡಿಟ್ ಮಾಡಬಹುದು. ಇದು ಒಂದು ರೀತಿಯಲ್ಲಿ ಮಿಸ್ ಯೂಸ್ ಆಗಿ ತಲೆ ಹರಟೆ ಮಾಡಿದ್ದಾರೆ. ಪಾಪ ! 20 ಲಕ್ಷದ ಬಜೆಟ್ ನಲ್ಲಿ ಒಂದು ರೂಪಾಯಿನೂ ಲಾಭ ಬರದೇ ಲುಕ್ಸಾನು ಹೊಡೆದ ವೆಂಕಟ್’ಗೆ ಯಾರೋ ಕಿಚಾಯಿಸಲು ಹೀಗೆ ಬರೆದಿದ್ದಾರೆ.

ಗೂಗಲ್ ಪ್ರಕಾರ ಹುಚ್ಚ ವೆಂಕಟ್ ಹಾರರ್, ಸೈಕಾಲಜಿ ಕಲ್ ಥ್ರಿಲ್ಲರ್, ಕಾಮಿಡಿ, ಆಕ್ಚನ್ ಜಾನರ್ ನ ಚಿತ್ರವಂತೆ. ಅದರಲ್ಲಿ ಹುಚ್ಚ ವೆಂಕಟ್ ಹಿರೋಯಿನ್ ಪಾತ್ರದಲ್ಲೂ ನಟಿಸಿದ್ದಾರೆ ಎಂದು ಬರೆಯಲಾಗಿದೆ.

ಇದು ಸಾಮಾಜಿಕ ಜಾಲತಾಣದಲ್ಲಿ ಟ್ರೊಲ್ ಆಗಿದೆ. ಇಷ್ಟು ವೈರಲ್ ಆದ ಮೆಲೆ ವಿಕಿಪೀಡಿಯದಲ್ಲಿ ಅದನ್ನು ಎಡಿಟ್ ಮಾಡಿ ಲಾಭ 25 ಲಕ್ಷ ಎಂದು ಬರೆಯಲಾಗಿದೆ. ನೋಡಿ ಟೆಕ್ನಾಲಜಿ ಎಷ್ಟು ಮುಂದುವರೆದಿದ್ದರೂ ಈ ತರಹ ಎಡವಟ್ಟಿಗೆ ನಮ್ಮವರೇ ಸಾಕಲ್ಲವಾ ?!

LEAVE A REPLY

Please enter your comment!
Please enter your name here