ನಟ ಸುದೀಪ್ ಅಭಿನಯದ ಭಾರೀ ನಿರೀಕ್ಷೆ ಹುಟ್ಟಿಸಿರುವ ಚಿತ್ರ ದಬಾಂಗ್- 3. ಸುದೀಪ್ ಇದರಲ್ಲೇನೂ ನಾಯಕನ ಪಾತ್ರ ನಿರ್ವಹಿಸಿಲ್ಲ , ಖಳನಟನಾಗಿ ಪಾತ್ರ ನಿರ್ವಹಿಸಿದ್ದಾರೆ. ಸಲ್ಮಾನ್ ಖಾನ್ ನಾಯಕನಟನಾಗಿ ನಟಿಸಿರುವ ದಬಾಂಗ್ 3 ಕ್ರಿಸ್ಮಸ್ ಹಬ್ಬದ ಪ್ರಯುಕ್ತ ರಿಲೀಸ್ ಆಗುತ್ತಿದೆ. ಸಲ್ಮಾನ್ ಖಾನ್ ಚಿತ್ರ ಯಾವಾಗಲೂ ರಂಜಾನ್ ಸಮಯದಲ್ಲಿ ಬಿಡುಗಡೆ ಆಗುತ್ತಿತ್ತು. ಆದರೆ ಈ ಬಾರಿ ಕ್ರಿಸ್ಮಸ್ ಹಬ್ಬದಂದು ಬಿಡುಗಡೆ ಆಗುತ್ತಿದೆ.
ಸುದೀಪ್ ಇದರ ಪ್ರಮೋಷನ್’ಗೆ ಒಂದು ಚಾನಲ್’ಗೆ ಸಂದರ್ಶನ ಕೊಡುತ್ತಾ ಹಿಂದಿ ಚಿತ್ರಗಳ ಬಗ್ಗೆ ಮಾತನಾಡಿದರು. ಅವರಿಗೆ ಹೃತಿಕ್ ರೋಶನ್ ಚಿತ್ರದಲ್ಲಿ ಖಳನಟನಾಗಿ ನಟಿಸುವ ಹಂಬಲವಿದೆಯಂತೆ. ಹೃತಿಕ್ ರೋಶನ್ ರವರನ್ನು ಒಮ್ಮೆಯೂ ಭೇಟಿಯಾಗಿಲ್ಲ ಎಂದು ಹೇಳಿದ್ದಾರೆ . ಹಾಗೆಯೇ ಬಾಲಿವುಡ್ ನ ಖ್ಯಾತ ನಟ ರಣವೀರ್ ಸಿಂಗ್ ಜೊತೆ ನಟಿಸುವ ಆಸೆ ಇದೆ. ಸಿಂಬಾ ಚಿತ್ರದಲ್ಲಿಯೇ ಖಳನಟನಾಗಿ ನಟಿಸುವ ಆಫರ್ ಬಂದಿತ್ತು. ಆದರೆ ಆ ಸಮಯದಲ್ಲಿ ಪೈಲ್ವಾನ್ ಚಿತ್ರದ ಶೂಟಿಂಗ್’ನಲ್ಲಿ ಬಿಜಿ ಇದ್ದೆ ಎಂದರು.
ಇನ್ನೂ ತಮ್ಮ ಪತ್ನಿಯ ಬಗ್ಗೆ ಮಾತಾಡುತ್ತಾ ಹೃತಿಕ್ ನಟನೆಯ ಕಹೋನ ಪ್ಯಾರ್ ಚಿತ್ರದ ಯಶಸ್ಸಿನಲ್ಲಿ ನಮ್ಮ ಪಾಲೂ ಇದೆ ಎಂದು ಹೇಳುತ್ತಾರೆ. ಅದು ಹೇಗೆ ಅಂದರೆ ಆ ಚಿತ್ರವನ್ನು ಹತ್ತು ಸಲ ಹೆಂಡತಿಯೊಂದಿಗೆ ನೋಡಿದ್ದೇನೆ.ಇದರಿಂದ ನಿರ್ಮಾಪಕರಿಗೆ ಲಾಭವಾಗಿದೆ ಎಂದು ನಂಬುತ್ತಾರೆ .
ಅವರ ಹೆಂಡತಿ ಹೃತಿಕ್ ರೋಶನ್ ರವರ ಅಭಿಮಾನಿ. ಆ ಸಮಯದಲ್ಲಿ ಹೃತಿಕ್ ನಟನೆಯ ಕಹೋನ ಪ್ಯಾರ್ ಹೈ ಚಿತ್ರ ಯುವ ಜನರಲ್ಲಿ ಕಿಚ್ಚು ಹಬ್ಬಿಸಿತ್ತು. ಆಗ ಹೃತಿಕ್ ರೋಶನ್ ಅಂದರೆ ಹುಡುಗಿಯರು ಹೆಚ್ಚಾಗಿ ಇಷ್ಟಪಡುತ್ತಿದ್ದರು. ಸುದೀಪ್ ಹೆಂಡತಿ ಪ್ರಿಯಾರವರು ಕಹೋನ ಪ್ಯಾರ್ ಹೈ ಚಿತ್ರಕ್ಕೆ ಕರೆದುಕೊಂಡು ಹೋಗಿ. ಇಲ್ಲ ಅಂದರೆ ಬೇರೆಯವರ ಜೊತೆ ಹೋಗಿ ನೋಡುತ್ತೇನೆ ಎಂದು ಹೆದರಿಸಿದ್ದರು. ಹಾಗಾಗಿ ಸುದೀಪ್ ತಮ್ಮ ಹೆಂಡತಿಯನ್ನು ಕರೆದುಕೊಂಡು ಹೋದರು ಎಂದು ಹಳೆಯ ನೆನಪುಗಳನ್ನು ನೆನೆಸಿಕೊಂಡರು.