ದೇವರನ್ನು ನಂಬದೆ ಪೂಜೆ ಮಾಡದೆ ಇದ್ದವರು ಕೂಡ ಜೀವನದಲ್ಲಿ ಸುಖವಾಗಿಯೇ ಇರುತ್ತಾರೆ ಯಾಕೆ ಗೊತ್ತಾ..??

0
4587

ಬಹಳ ಜನರಲ್ಲಿ ಈ ಪ್ರಶ್ನೆ ಹುಟ್ಟುವುದು ಸಾಮಾನ್ಯ, ನನ್ನ ಕಷ್ಟವನ್ನು ತಿಳಿಸಿ ಜೀವನದಲ್ಲಿ ಬೆಳಕನ್ನು ನೀಡು ಎಂದು ದೇವರಲ್ಲಿ ನಾವು ಪರಿಪರಿಯಾಗಿ ಬೇಡಿಕೊಳ್ಳುವುದೂ ಉಂಟು, ವಿಧವಿಧವಾದ ಪೂಜೆಗಳು ಹೋಮ ಹವನಗಳು, ನಾ ನಾ ಪರೀ ಅಭಿಷೇಕಗಳು, ಕಾಣಿಕೆಗಳು, ದೇವರ ಹೆಸರಿನಲ್ಲಿ ಅನ್ನದಾನ ಹೀಗೆ ಹತ್ತು ಹಲವು ಪುಣ್ಯದ ಕೆಲಸಗಳನ್ನು ಅಥವಾ ದೇವರ ಕೆಲಸಗಳನ್ನು ಮಾಡುತ್ತೇವೆ ಕಾರಣ ದೇವರು ನಮಗೆ ಕರುಣಿಸಲಿ ಎಂಬ ಉದ್ದೇಶದಿಂದ.

ಇಷ್ಟೆಲ್ಲಾ ಮಾಡಿದರೂ ಕೆಲವರಿಗೆ ಕಷ್ಟ ಗಳು ಇದ್ದೇ ಇರುತ್ತದೆ ಆದರೆ ದೇವರನ್ನು ನಂಬದ ಬಹುಜನರು ಸುಖವಾಗಿರುತ್ತಾರೆ ಹಾಗಾದರೆ ದೇವರು ಇರುವುದು ಸುಳ್ಳು, ಈ ಪ್ರಶ್ನೆಯು ನಿಮ್ಮ ಮನಸ್ಸಿನಲ್ಲಿ ಮೂಡಿದರೆ ಆ ಪ್ರಶ್ನೆಗೆ ಉತ್ತರ ನಾವು ನಿಮಗೆ ತಿಳಿಸುತ್ತೇವೆ.

ಸಮ ಶತ್ರೌಚ ಮಿತ್ರೆಚ ತಥಾ ಮಾನಾಪಮಾನಯೋ ಎಂದು ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಹೇಳಿದ್ದಾನೆ, ಇದರ ಅರ್ಥ ನಾವೆಲ್ಲರೂ ಪರಮಾತ್ಮನ ಮಕ್ಕಳು, ಭಗವಂತನಿಗೆ ಎಲ್ಲರ ಮೇಲೆಯು ಪ್ರೇಮ ಇರುತ್ತದೆ, ಒಬ್ಬ ತಂದೆಗೆ ಐದಾರು ಮಂದಿ ಮಕ್ಕಳಿದ್ದಾರೆ ಎಂದುಕೊಳ್ಳೋಣ, ಎಲ್ಲರೂ ಒಳ್ಳೆಯವರಾಗಿ ಇರಲ್ಲ ಒಬ್ಬೊಬ್ಬರಿಗೂ ಬಹಳಷ್ಟು ವ್ಯತ್ಯಾಸ ಗಳು ಇರುತ್ತವೆ ಆದರೆ ತಂದೆಯವರಿಗೆ ಎಲ್ಲರ ಮೇಲೆ ಪ್ರೀತಿ ಇರುತ್ತದೆ ಅಲ್ಲವೇ.

ದೇವರು ತನ್ನನ್ನು ಆರಾಧಿಸುವ ಅವರನ್ನು ವಿರೋಧಿಸುವವರನ್ನು ಸಮವಾಗಿ ನೋಡುತ್ತಾನೆ, ಅತಿ ಮುಖ್ಯವಾದ ವಿಷಯ ದೇವರು ಯಾರನ್ನೂ ಶಿಕ್ಷಿಸುವುದಿಲ್ಲ, ನಮ್ಮ ಕೈಯ್ಯಾರೆ ನಾವೇ ಕಷ್ಟಗಳನ್ನು ತಂದುಕೊಳ್ಳುತ್ತೇವೆ, ದೇವರು ದಯಾಮಯನು.

ಜೊತೆಯಲ್ಲಿ ಇದನ್ನು ಓದಿ ಪುನರ್ಜನ್ಮ ಸತ್ಯವೇನು..?

ಎಲ್ಲಾ ಧರ್ಮಗಳು ಹಿಂದೂ, ಬೌದ್ಧ, ಮಹಮ್ಮದೀಯ, ಕ್ರೈಸ್ತ, ಜೈನ, ಶಿಖ್ ಸಮಸ್ತ ಪ್ರಪಂಚ ಧರ್ಮಗಳು ಪುನರ್ಜನ್ಮವನ್ನು ಅಂಗೀಕರಿಸಿವೆ, ಪುನರ್ಜನ್ಮ ಸಿದ್ಧಾಂತವನ್ನು ಕರ್ಮ ಸಿದ್ಧಾಂತ ಎಂದು ಹೇಳುತ್ತಾರೆ, ನಮ್ಮ ಪುರಾಣಗಳಲ್ಲೂ ಪುನರ್ಜನ್ಮದ ತತ್ವದ ಮೇಲೆ ನಿರ್ಮಾಣಗೊಂಡಿದೆ, ಆದ್ದರಿಂದ ಸತ್ಯ ವಂದೆ ನಂಬಬೇಕು.

LEAVE A REPLY

Please enter your comment!
Please enter your name here