ಶಿವನಿಗೆ ಮೂರನೆಯ ಕಣ್ಣು ಹಿಂಬದಿಯಲ್ಲಿ ಇದ್ದರೆ, ತಾಯಿ ಜಗನ್ಮಾತೆ ಗೆ ಹಣೆಯ ಮೇಲೆ ಇರುವ ಕುಂಕುಮ ಮೂರನೆಯ ಕಣ್ಣು ಎಂದು ಹೇಳುತ್ತಾರೆ, ಎರಡು ಹುಬ್ಬುಗಳ ನಡುವೆ ಇರುವ ಕುಂಕುಮ ಸೌಭಾಗ್ಯ, ಶುಭದ ಸಂಕೇತ, ಅಂತಹ ತಾಯಿ ಇಡೀ ಜಗತ್ತಿಗೆ ಜನ್ಮದಾತೆ, ಆಕೆ ಹಣೆಯ ಮೇಲಿರುವ ಕುಂಕುಮದ ಕಡೆಗೆ ಭಕ್ತರು ನೇರವಾಗಿ ನೋಡಿದರೆ ಸಾಕು ಬದುಕಿನಲ್ಲಿ ಕಷ್ಟ ನಷ್ಟ ಮಾನಸಿಕ ಕಿರುಕುಳ ದೂರವಾಗಿ ನೆಮ್ಮದಿ ದೊರಕುತ್ತದೆ, ಆಗೆ ಲೇಪಿಸಿ ಕೊಂಡಿರುವ ಕುಂಕುಮದಲ್ಲಿ ಅಂತಹ ದಿವ್ಯ ಶಕ್ತಿ ಉಂಟು ಭಕ್ತರ ಪಾಲಿಗೆ ಆಕೆಯ ಕುಂಕುಮ ವರದಾನ.
ವಾಸ್ತವಿಕವಾಗಿ ಹೇಳುವುದಾದರೆ ಕುಂಕುಮ ಹುಬ್ಬುಗಳ ನಡುವೆ ಇಟ್ಟುಕೊಳ್ಳುವುದರಿಂದ ಕಣ್ಣಿನ ದೃಷ್ಟಿ, ಮೆದುಳಿನ ನರಗಳಲ್ಲಿ ಉತ್ತಮ ರೀತಿಯಲ್ಲಿ ಸಂಚಲನ ಉಂಟಾಗುತ್ತದೆ, ಆಗ ನಮಗೆ ತಲೆನೋವು ಮೆದುಳಿನಲ್ಲಿ ಇರುವ ನರಗಳು ಸಂಸ್ಕೃತಿಯಾಗಿ ಕೆಲಸ ಮಾಡುವುದು ಎಂದು ವಿಜ್ಞಾನಿಗಳ ಉಲ್ಲೇಖ, ಹೀಗೆ ತಾಯಿ ಜಗನ್ಮಾತೆ ಪಾಲಿಸುವ ಕೆಲಸಗಳನ್ನು ಪ್ರತಿಯೊಬ್ಬ ಹೆಣ್ಣುಮಗಳು ಮಾಡುವುದರಿಂದ ಕುಂಕುಮ ಎನ್ನುವುದು ಅತ್ಯಂತ ಪ್ರಾಶಸ್ತ್ಯ, ಗೌರವ, ಶುಭದ ಸಂಕೇತ ಹಾಗೆ ಉಳಿದಿದೆ.
ವೈಚಾರಿಕತೆಯಲ್ಲಿ ನಮ್ಮ ಪರಂಪರೆಯಲ್ಲಿ ಹೆಣ್ಣು ಸಂಸ್ಕೃತಿ, ಸಂಪ್ರದಾಯದ ಪ್ರತೀಕ, ಇಡೀ ವಿಶ್ವದಲ್ಲಿಯೇ ಈ ಮಾತು ನಿಜ ಎಂದು ಹೇಳಲಾಗಿದೆ, ಈಗಿರುವ ಸಮಯದಲ್ಲಿ ನಮ್ಮ ಕುಂಕುಮದ ಬಗ್ಗೆ ವಿದೇಶಿ ವನಿತೆಯರು ಸಹಾ ಅಪಾರ ಆಸಕ್ತಿ ಗೌರವ ಇಟ್ಟು ಕೊಂಡಿದ್ದಾರೆ, ತಾವು ಸಹ ಕುಂಕುಮ ಲೇಪಿಸಿಕೊಂಡು ಸೀರೆ ಧರಿಸಿ ಹಬ್ಬ ಹರಿದಿನಗಳಲ್ಲಿ ಪಾಲ್ಗೊಳ್ಳಲು ಇಷ್ಟಪಡುತ್ತಾರೆ, ಹೀಗೆ ಜೀವನದಲ್ಲಿ ಕುಂಕುಮ ಎನ್ನುವುದು ಸಕಲ ರೀತಿಯಿಂದಲೂ ಮನ್ನಣೆಗೆ ಪಾತ್ರವಾಗಿದೆ ಕುಂಕುಮ ಎಂದರೆ ಸೌಭಾಗ್ಯ.