ಎಷ್ಟೇ ಕಷ್ಟಪಟ್ಟರೂ ಕುಕ್ಕರ್ ನಿಂದ ನೀರು ಅಥವಾ ಗಾಳಿ ಲಿಕೆಜ್ ಆಗುತ್ತಿದ್ದರೆ.. ತಪ್ಪದೇ ಈ ರೀತಿ ಮಾಡಿ.

0
13568

ಮನೆಯ ಮಹಿಳೆಯರಿಗೆ ಈ ಸಮಸ್ಯೆ ಅತಿ ಹೆಚ್ಚಾಗಿ ಕಾಡುತ್ತದೆ, ಎಷ್ಟೇ ಕಷ್ಟಪಟ್ಟರೂ ಕೆಲವು ಬಾರಿ ಕುಕ್ಕರ್ ಲಿಕೇಜ್ ಆಗುವುದು ನಿಲ್ಲಿಸುವುದಿಲ್ಲ, ಇದರಿಂದ ಅಡುಗೆ ಮಾಡುವುದು ತಡವಾಗುತ್ತದೆ ಅಷ್ಟೇ ಇಲ್ಲದೆ ಅಡುಗೆ ಮನೆ ಸಂಪೂರ್ಣವಾಗಿ ಕೊಳೆ ಆಗುತ್ತದೆ, ಅಡುಗೆ ಮಾಡುವುದು ದೊಡ್ಡ ಕೆಲಸವಾದರೆ ಅದರ ನಂತರ ಈ ರೀತಿಯ ಸಮಸ್ಯೆಗಳಿಂದ ಸ್ವಚ್ಛ ಮಾಡುವುದು ಮತ್ತೊಂದು ಕೆಲಸವಾಗಿ ಉಳಿದುಬಿಡುತ್ತದೆ, ಹಲವು ಬಾರಿ ಕುಕ್ಕರ್ ಬದಲಿಸಿದರು, ರಿಪೇರಿ ಮಾಡಿಸಿದರು ಈ ಸಮಸ್ಯೆ ಮಾತ್ರ ಕಡಿಮೆಯಾಗಿಲ್ಲ ಎನ್ನುವವರು ಈ ಮಾಹಿತಿಯನ್ನು ಸಂಪೂರ್ಣವಾಗಿ ನೋಡಿ.

ಈ ರೀತಿಯ ಕುಕ್ಕರ್ ಸಮಸ್ಯೆಯನ್ನು ತಡೆಯಲೂ ಒಟ್ಟು ಮೂರು ವಿಧಾನಗಳಿವೆ, ಕುಕ್ಕರನ್ನು ಚೆನ್ನಾಗಿ ತೊಳೆಯಬೇಕು ಮತ್ತು ಅದರ ಸುತ್ತಲೂ ಸಂಧಿಗಳಲ್ಲಿ ಇರುವ ಅಥವಾ ಅಂಟಿಕೊಂಡಿರುವ ಕಸ ಮತ್ತು ಅನ್ನವನ್ನು ತೆಗೆಯಬೇಕು, ಸ್ವಲ್ಪ ಸಮಯ ತಣ್ಣೀರಿನಲ್ಲಿ ನೆನಸಬೇಕು, ಇಲ್ಲವಾದರೆ ಅದನ್ನು ಮನೆಯಲ್ಲಿ ಫ್ರಿಡ್ಜ್ ಇದ್ದರೆ ಅದರಲ್ಲಿ ಇಡಬೇಕು.

ಎರಡನೆಯ ವಿಧಾನ ಕುಕ್ಕರ್ನಲ್ಲಿ ಗಾಳಿ ಬರುವ ಕೊಳವೆಯಲ್ಲಿ ಅನ್ನ ಅಥವಾ ಇತರ ಯಾವುದೇ ಕಸ ಇರದಂತೆ ನೋಡಿಕೊಳ್ಳಬೇಕು, ಕುಕ್ಕರ್ ವಿಶಲ್ ನನ್ನ ಸ್ವಚ್ಛ ಮಾಡಬೇಕು, ಸರಿಯಾಗಿ ಗಾಳಿ ಹೊರಬರುವಂತೆ ನೋಡಿಕೊಳ್ಳಬೇಕು, ಮೂರನೇ ವಿಧಾನ ನಾವು ಕುಕ್ಕರ್ ಬಳಸುತ್ತೇವೆ ಎಂದರೆ ಅನ್ನ ಬೇಯಿಸಲು ಅಥವಾ ಬೇಳೆ ಬೇಯಿಸಲು ಬಳಸುವಾಗ ಅದಕ್ಕೆ ಬೇಕಾಗುವಷ್ಟೇ ಅರ್ಹತೆಯುಳ್ಳ ಕುಕ್ಕರ್ ಬಳಸಬೇಕು ಹಾಗೂ ಅದಕ್ಕೆ ಸಮ ಪ್ರಮಾಣದ ನೀರು ಹಾಕಬೇಕು, ಇವುಗಳಿಂದ ಲಿಕೆಸ್ ತಪ್ಪಿಸಬಹುದು.

ಇನ್ನು ಹೆಚ್ಚಿನ ಮಾಹಿತಿ ಉಳ್ಳ ವಿಡಿಯೋ ಒಂದನ್ನು ಇಲ್ಲಿ ಕೆಳಗೆ ನೀಡಲಾಗಿದೆ, ಈ ವಿಡಿಯೋವನ್ನು ಸಂಪೂರ್ಣವಾಗಿ ಒಮ್ಮೆ ನೋಡಿ ಹಾಗೂ ಈ ವೀಡಿಯೊ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಮರೆಯದೆ ನಮ್ಮ ಕಾಮೆಂಟ್ ಬಾಕ್ಸ್ನಲ್ಲಿ ಬರೆದು ತಿಳಿಸಿ, ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಮರೆಯದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

LEAVE A REPLY

Please enter your comment!
Please enter your name here