ಹೌದು ಬೆಂಗಳೂರು ಅಥವಾ ಸಿಟಿ ಪ್ರದೇಶಗಳು ಅತ್ಯಧಿಕವಾಗಿ ಸಾಲದ ವ್ಯವಸ್ಥೆ ದೊರೆಯುವ ಸ್ಥಳವಾಗಿ ಮಾರ್ಪಾಟಾಗಿದೆ, ಇಲ್ಲಿ ಎಲ್ಲದಕ್ಕೂ ಸಾಲ ವ್ಯವಸ್ಥೆ ಸಿಗುತ್ತದೆ, ಕಾರ್, ಮನೆ, ಮೊಬೈಲ್ ಇಷ್ಟೇ ಯಾಕೆ ಬಜಾಜ್ ಫೈನಾನ್ಸ್ ಅಡಿಯಲ್ಲಿ ಬಟ್ಟೆಗೂ ಸಾಲ ಸಿಗುತ್ತದೆ, ಹೀಗೆ ಜನರಿಗೆ ಅನುಕೂಲ ಕೊಡುವ ಹೆಸರನ್ನು ಹೇಳಿಕೊಂಡು ಸಾಲದ ಸುಳಿಯಲ್ಲಿ ಸಿಲುಕಿಸುತ್ತಿದೆ ಈ ಸಾಲ ನೀಡುವ ಕಂಪನಿಗಳು, ಮನುಷ್ಯನಿಗೆ ಯಾವ ಸಮಯದಲ್ಲಿ ದುಡ್ಡು ಅತ್ಯವಶ್ಯಕ ಎಂಬುದನ್ನು ತುಂಬಾ ಲೆಕ್ಕಮಾಡಿ ಯೋಚನೆ ಮಾಡುತ್ತಾರೆ ಎಂದು ಕಾಣುತ್ತದೆ, ಅದಕ್ಕಾಗಿ ಅವರಿಗೆ ಇಂತಹ ಒಳ್ಳೆಯ ಐಡಿಯಾಗಳು ಬರುತ್ತವೆ, ಇದೀಗ ಬಜಾಜ್ ಫೈನಾನ್ಸ್ ಕಂಪನಿ ಮದುವೆ ಮಾಡಿಕೊಳ್ಳವವರಿಗೂ ಭರ್ಜರಿ ಸಾಲ ನೀಡುವ ಹೊಸ ಯೋಜನೆಯೊಂದನ್ನು ಜಾರಿಗೆ ತಂದಿದೆ.
ಹೌದು ಮದುವೆ ಮಾಡಿಕೊಡಬೇಕು ಎಂದರೆ ಹೆಣ್ಣಿನ ಕಡೆಯವರಿಗೆ ಬಹಳ ದೊಡ್ಡ ಚಿಂತೆಯಾಗುತ್ತದೆ, ಇನ್ನು ಮುಂದೆ ಹೆಣ್ಣಿನ ಕಡೆಯವರು ಬಜಾಜ್ ಕಂಪನಿ ಆನ್ಲೈನ್ ಸಾಲದ ಮೊರೆ ಹೋಗಬಹುದು, ಇದರ ಕಂಡೀಶನ್ ಗಳು ಯಾವ ರೀತಿ ಇದೆ, ಎಷ್ಟು ಸಲ ದೊರೆಯುತ್ತದೆ, ಸಾಲ ತೀರಿಸುವುದು ಹೇಗೆ, ಡಾಕ್ಯುಮೆಂಟ್ಗಳು ಯಾವ ರೀತಿ ಇರುತ್ತವೆ, ಎಲ್ಲಾ ಮಾಹಿತಿಯು ಇಂದು ನಾವು ನಿಮಗೆ ತಿಳಿಸಿ ಕೊಳ್ಳುತ್ತೇವೆ, ಅದಕ್ಕಿಂತ ಮುಂಚೆ ನೀವಿನ್ನು ನಮ್ಮ ಕರುನಾಡ ಸೊಗಡು ಫೇಸ್ಬುಕ್ ಲೈಕ್ ಮಾಡಿಲ್ಲ ಅಂದರೆ ತಪ್ಪದೇ ಈಗಲೇ ಲೈಕ್ ಮಾಡಿ ಹಾಗೂ ಎಲ್ಲ ವಿಷಯಗಳ ಬಗ್ಗೆ ಮೊದಲು ಅಪ್ಡೇಟ್ ಪಡೆಯಿರಿ.
24 ಗಂಟೆಯಲ್ಲಿ 25 ಲಕ್ಷದವರೆಗೆ ಸಾಲ ಪಡೆಯಬಹುದು, ಹೌದು ಗೆಳೆಯರೆ ಕೇವಲ 24 ಗಂಟೆಯಲ್ಲಿ ಅತಿವೇಗದಲ್ಲಿ ಸಾಲ ನೀಡುವ ಆನ್ಲೈನ್ ವ್ಯವಸ್ಥೆಯನ್ನು ಬಜಾಜ್ ಕಂಪನಿ ಈಗಾಗಲೇ ಶುರು ಮಾಡಿದ್ದು, ನೀವು ಪಡೆಯುವ 25 ಲಕ್ಷದ ವರೆಗಿನ ಸಾಲ ವನ್ನು ಸುಲಭ ತಿಂಗಳ ಕಂತುಗಳಲ್ಲಿ ಪಾವತಿ ಮಾಡಬಹುದು, ಇದಕ್ಕಾಗಿ ನಿಮಗೆ ಗರಿಷ್ಠ 60 ತಿಂಗಳ ಕಾಲ ನೀಡಲಾಗುತ್ತದೆ, ಇದಕ್ಕೆ ಇರಿಸುವ ಬಡ್ಡಿದರ ಶೇಕಡಾ 12.99 ರಷ್ಟಿದೆ ಹಾಗೂ ಪ್ರಕ್ರಿಯೆ ಶುಲ್ಕದ ಶೇಕಡ ಗರಿಷ್ಠ 4.1 ಇರಲಿದೆ.
ಇನ್ನು ನೀವು ಸಾಲ ಪಡೆಯಬೇಕಾದರೆ ಇರಬೇಕಾದ ಅರ್ಹತೆಗಳು, ಬಜಾಜ್ ಫೈನಾನ್ಸ್ ಕಂಪನಿಯ ಹೇಳುವ ನಗರದಲ್ಲಿ ಸಂಬಳ ಪಡೆದು ವಾಸ ಮಾಡುತ್ತಿರಬೇಕು, ಹಾಗೂ ಕಳೆದ ಎರಡು ತಿಂಗಳ ಸಂಬಳದ ಚೀಟಿ ಮತ್ತು ಬ್ಯಾಂಕಿನ ಪಾಸ್ಬುಕ್ ಮೂರು ತಿಂಗಳ ಅಕೌಂಟ್ ಸ್ಟೇಟ್ಮೆಂಟ್ ಸಲ್ಲಿಸಬೇಕು, ಇದಾದನಂತರ ಅರ್ಜಿಯೊಂದಿಗೆ ಸರಳ ಹಂತಗಳನ್ನು ಪೂರೈಸಿ ಕೆಲವು ಮೂಲಭೂತ ದಾಖಲೆಗಳನ್ನು ಪೂರೈಸಿದ ಬಳಿಕ 24ಗಂಟೆಯೊಳಗೆ ನಿಮಗೆ ಸಾಲ ದೊರೆಯುತ್ತದೆ, ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಮರೆಯದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಮರೆಯದೆ ನಮ್ಮ ಕಾಮೆಂಟ್ ಬಾಕ್ಸಲ್ಲಿ ಬರೆದು ತಿಳಿಸಿ.