ಕೈಗೆ ಬಳೆಯನ್ನು ತೊಡದ ಹೆಣ್ಣು ಮಕ್ಕಳು ಈ ಮಾಹಿತಿಯನ್ನು ಖಂಡಿತವಾಗಿಯೂ ಓದಲೇಬೇಕು..!!

0
8533

ಹೆಣ್ಣು ಮಕ್ಕಳು ಅಲಂಕಾರಪ್ರಿಯರು, ತಮ್ಮ ಅಂದ ಚಂದವನ್ನು ದ್ವಿಗುಣಗೊಳಿಸಲು ಬಹಳ ವಿಧವಿಧವಾದ ಆಭರಣಗಳನ್ನು ತೊಡುವ ಅಭ್ಯಾಸ ಬಹಳ ಹಿಂದಿನ ಕಾಲದಿಂದಲೂ ರೂಢಿಯಲ್ಲಿದೆ, ಒಂದು ಕಾಲದಲ್ಲಿ ಹೆಣ್ಣುಮಕ್ಕಳು ಬಳೆಗಳನ್ನು ಕಡ್ಡಾಯವಾಗಿ ಹಾಕಿಕೊಳ್ಳಬೇಕು ಎಂಬ ಆಚರಣೆಗಳು ಇತ್ತು, ಗಂಡ ಏನಾದರೂ ಸತ್ತರೆ ಆಗಷ್ಟೇ ಕೈಗಳಿಂದ ಬಳೆಗಳನ್ನು ತೆಗೆಯ ಬೇಕಿತ್ತು, ಈ ಧಾರ್ಮಿಕ ಆಚರಣೆಗಳು ಈಗ ಅಷ್ಟಿಲ್ಲ ಬಿಡಿ, ಆದರೆ ಇಂದು ನಾವು ಮಾತನಾಡಲು ಹೊರಟಿರುವ ವಿಚಾರ ಇದಲ್ಲ ಮೊದಲಿಗೆ ಹೆಣ್ಣು ಮಕ್ಕಳು ಕೈಗೆ ಬಳೆಗಳನ್ನು ತೊಟ್ಟರೆ ಅದರಿಂದ ಅವರಿಗೆ ಇರುವ ಆರೋಗ್ಯ ಲಾಭಗಳ ಬಗ್ಗೆ.

ಆಭರಣಗಳಿಂದ ಅಂದರೆ ಕೈ ಬಳೆಗಳು, ಕಾಲಿನ ಗೆಜ್ಜೆ, ಉಂಗುರ, ಕಿವಿಯ ಓಲೆ ಅಥವಾ ಮೂಗಿನ ನತ್ತು ಇವುಗಳನ್ನು ಅಲಂಕಾರಕ್ಕೆ ಅಷ್ಟೇ ಅಲ್ಲದೆ ಶರೀರ ಶಾಸ್ತ್ರ ಹೇಳುವಂತೆ ಹಲವು ಆರೋಗ್ಯ ಹಾಗೂ ಮಾನಸಿಕ ಸಂಬಂಧಿತ ಉಪಯೋಗಗಳಿಗಾಗಿ ಆಭರಣಗಳನ್ನು ತೊಡಲೇ ಬೇಕು, ಹಾಗಾದರೆ ಆರೋಗ್ಯ ಲಾಭಗಳ ಬಗ್ಗೆ ತಿಳಿಸುತ್ತೇವೆ ಮುಂದೆ ಓದಿ.

ಮನುಷ್ಯನ ದೇಹದಲ್ಲಿ ಕೈಗಳ ಮುನ್ನಿಕಟ್ಟು ಅತ್ಯಂತ ಶಕ್ತಿಯುತವಾದ ಜಾಗ, ಈ ಜಾಗದಲ್ಲಿ ಸಾಕಷ್ಟು ಶಕ್ತಿ ಉತ್ಪಾದನೆಯಾಗುತ್ತದೆ, ಮತ್ತು ಇಲ್ಲಿಂದಲೇ ದೇಹದ ಉಳಿದ ಭಾಗಗಳಿಗೆ ಶಕ್ತಿಯು ರವಾನೆಯಾಗುವುದು, ನಿಮಗೆ ತಿಳಿದಿರಲಿ ಬಳೆಗಳನ್ನು ತೊಡುವುದು ಇದೆ ಮುನ್ನಿ ಕಟ್ಟು ಸುತ್ತ, ಇದೆ ಮುನ್ನಿ ಕಟ್ಟು ಪದೇ ಪದೇ ಬಳೆಯ ಸಂಪರ್ಕಕ್ಕೆ ಬಂದು ಪ್ರಚೋದನೆಗೆ ಒಳಗಾಗುತ್ತದೆ ಇದರಿಂದ ರಕ್ತ ಪರಿಚಲನೆ ದೇಹದಲ್ಲಿ ಹೆಚ್ಚುತ್ತದೆ, ಹೆಂಗಸರು ಮನೆಯಲ್ಲಿ ಮಾಡುವ ಅಷ್ಟು ಶ್ರಮದ ಕೆಲಸಕ್ಕೆ ಶಕ್ತಿ ನೀಡುವುದೇ ಈ ಬಳೆಗಳು.

ಹೆಂಗಸರು ಕ್ರಿಯಾಶೀಲರಾದರು ಬಳೆಗಳು ಸಹ ಒಂದು ಪ್ರಮುಖ ಕಾರಣ ಹೇಗೆ ಎಂದರೆ ಕೈಗಳು ಅಥವಾ ಕೈಗಳಲ್ಲಿರುವ ಬಳೆಗಳು ನಿರಂತರವಾಗಿ ಅಲುಗಾಡುತ್ತದೆ ಇದರಿಂದ ಘರ್ಷಣೆ ಉಂಟಾಗಿ ವಿದ್ಯುತ್ಕಾಂತೀಯ ತರಂಗಗಳು ದೇಹದಲ್ಲಿ ಉತ್ಪತ್ತಿಯಾಗುತ್ತದೆ ಹಾಗೂ ಇಡೀ ದೇಹಕ್ಕೆ ಹರಡುತ್ತದೆ, ಬಳೆ ವೃತ್ತಾಕಾರದಲ್ಲಿ ಇರುವುದರಿಂದ ಅಲ್ಲಿ ಉತ್ಪತ್ತಿಯಾಗುವ ಶಕ್ತಿಯು ಸಹ ವೃತ್ತಾಕಾರದಲ್ಲಿ ನರವ್ಯೂಹದ ಮೂಲಕ ಸಂಪೂರ್ಣ ದೇಹಕ್ಕೆ ವರ್ಗಾವಣೆಯಾಗುತ್ತದೆ, ಇದು ಸಣ್ಣ ಪ್ರಮಾಣದಲ್ಲಿ ಆದರೂ ನಿರಂತರವಾಗಿ ವರ್ಗಾವಣೆ ಆಗುವುದರಿಂದ ಹೆಂಗಸರು ಕ್ರಿಯಾಶೀಲರಾಗಿರುತ್ತಾರೆ.

ಗರ್ಭಿಣಿ ಮಹಿಳೆಯರಿಗೆ ಶ್ರೀಮಂತ ಮಾಡುವ ಸಂದರ್ಭದಲ್ಲಿ ಅವರ ಕೈ ತುಂಬ ಗಾಜಿನ ಬಳೆಗಳನ್ನು ಧರಿಸುತ್ತಾರೆ ಯಾಕೆ ಅಂದರೆ, ಈ ಬಳೆಗಳ ಗಾಜಿನ ಶಬ್ದ ಬೆಳೆಯುತ್ತಿರುವ ಭ್ರೂಣಕ್ಕೆ ಸಂಗೀತದ ಹಾಗೆ ಕೇಳಿಸುತ್ತದೆ, ಭ್ರೂಣದಲ್ಲಿರುವ ಮಗುವು ತನ್ನ ತಾಯಿಯನ್ನು ಗುರುತಿಸಲು ಇದು ನೆರವು, ಅಷ್ಟೇ ಅಲ್ಲದೆ ಯಾವುದೇ ಲೋಹದ ಮೇಲೆ ಅಥವಾ ಕಡಗ ಧರಿಸಿ ದಲ್ಲಿ ಬಟ್ಟೆಗಳಿಂದ ಉತ್ಪತ್ತಿಯಾಗುವ ವಿದ್ಯುತ್ ಅನ್ನು ಸುಲಭವಾಗಿ ಹೊರಹರಿಸಲು ನೆರವಾಗುತ್ತದೆ.

LEAVE A REPLY

Please enter your comment!
Please enter your name here