ಬಿಗ್ ಬಾಸ್ ಕಾರ್ಯಕ್ರಮ ಶುರುವಾಗಿ ತಿಂಗಳೇ ಕಳೆದರೂ ಪ್ರಮುಖ ಸ್ಪರ್ಧೆಯಾದ ಕುರಿ ಪ್ರತಾಪ್ ಅವರು ಕ್ಯಾಪ್ಟನ್ ಆಗಿ ಆಯ್ಕೆಯಾಗಿರಲಿಲ್ಲ, ಹಾಗಾಗಿ ಕುರಿ ಪ್ರತಾಪ್ ಅವರ ಅಭಿಮಾನಿಗಳಿಗೆ ಇದು ಬಹುದೊಡ್ಡ ನಿರಾಸೆಯನ್ನು ಉಂಟು ಮಾಡಿತ್ತು, ಆದರೆ ಇಂದು ಕುರಿ ಅವರು ಅತಿ ಹೆಚ್ಚು ಕಲ್ಲಂಗಡಿ ಹಣ್ಣು ತಿನ್ನುವ ಮೂಲಕ ಪ್ರತಾಪ್ ಕ್ಯಾಪ್ಟನ್ ಆಗಿದ್ದಾರೆ, ಈ ಮೂಲಕ ಕ್ಯಾಪ್ಟನ್ ಆಗಿ ಮನೆಯ ಎಲ್ಲಾ ಸಮಸ್ಯೆಗಳನ್ನು ಮತ್ತು ಮನೆಯ ಇತರ ಸ್ಪರ್ಧಿಗಳನ್ನು ಹೇಗೆ ಸಂಭಾಳಿಸುತ್ತಾರೆ ಎಂಬುದೇ ದೊಡ್ಡ ಕಾತುರತೆ ಯಾಗಿದೆ.
ಕ್ಯಾಪ್ಟನ್ ಆಗ ಕುರಿ ಪ್ರತಾಪ್ ಅವರಿಗೆ ಬಿಗ್ ಬಾಸ್ ಅವರು ಅಭಿನಂದನೆ ನೀಡುತ್ತಾ ಹೂಗುಚ್ಛವನ್ನು ಕಳಿಸಿಕೊಟ್ಟಿದ್ದರು, ಇದೇ ಸಮಯದಲ್ಲಿ ಕುರಿ ಪ್ರತಾಪ್ ಅವರ ಮಕ್ಕಳು ಮತ್ತು ಮಡದಿ ದ್ವನಿ ಕೇಳಿಸಲಾಯಿತು, ಇದೇ ಸಮಯದಲ್ಲಿ ಮನೆಯ ಇತರ ಅಭ್ಯರ್ಥಿಗಳು ಕುರಿ ಪ್ರತಾಪ್ ಕಣ್ಣಲ್ಲಿ ನೀರು ಬರುತ್ತಾ ಎಂದು ಕಾದರೂ, ಆದರೆ ಸ್ಟ್ರಾಂಗ್ ಆದ ಸ್ಪರ್ಧಿ ಕುರಿ ಪ್ರತಾಪ್ ಆಗಿರುವುದರಿಂದ ಮನೆಯವರ ನಿರೀಕ್ಷೆ ಹುಸಿಯಾಯಿತು.
ಕುರಿ ಪ್ರತಾಪ್ ಅವರು ಕ್ಯಾಪ್ಟನ್ ಆದ ತಕ್ಷಣ ಅಡುಗೆಮನೆಯಲ್ಲಿ ಮಸಾಲೆ ಪದಾರ್ಥಗಳ ಅವಶ್ಯಕತೆಗಳು ಇದ್ದಿದ್ದರಿಂದ ಕ್ಯಾಮೆರಾ ಮುಂದೆ ಬಂದು ಬಿಗ್ಬಾಸ್ ಅವರಿಗೆ ಅಡ್ಡಬಿದ್ದು ಬೇಡಿಕೆಯನ್ನು ಸಲ್ಲಿಸಿದರು, ಇದಾದ ನಂತರ ತಕ್ಷಣವೇ ನಾಮಿನೇಷನ್ ಪ್ರಕ್ರಿಯೆ ನಡೆದು ಚಂದನ್ ಆಚಾರ್, ಪೃಥ್ವಿ, ಭೂಮಿ ಹಾಗೂ ಕಿಶನ್ ನಾಮಿನೇಟ್ ಆದರು ಕೊನೆಯಲ್ಲಿ ಬಿಗ್ ಬಾಸ್ ಕುರಿ ಪ್ರತಾಪ್ ಅವರು ಒಬ್ಬ ಸ್ಪರ್ದಿಯನ್ನು ನೇರ ನೋಮಿನೆಟ್ ಮಾಡಬೇಕು ಎಂದಾಗ ಶೈನ್ ಶೆಟ್ಟಿ ಅವರನ್ನು ನೇರ ನಾಮಿನೇಟ್ ಮಾಡಿದ್ದಾರೆ, ಇದರ ಜೊತೆಗೆ ಸುಜಾತಾ ಅವರೂ ನೋಮಿನೆಟ್ ಮಾಡಿದ್ದ ರಾಜು ತಾಳಿಕೋಟೆ ನಾಮಿನೇಟ್ ಆಗಿದ್ದಾರೆ.
ಈ ನಡುವೆ ವೈಟ್ ಕಾರ್ಡ್ ಎಂಟ್ರಿ ಯಲ್ಲಿ ಬರುವ ಮಹಿಳಾ ಸ್ಪರ್ದಿಯನ್ನು ತಮ್ಮ ಹಳೆಯ ಪ್ರೇಯಸಿ ಎಂದು ನಂಬಿಸುವಂತೆ ಟಾಸ್ಕ್ ಅನ್ನು ಕಿಶನ್ ಅವರಿಗೆ ನೀಡಿದ್ದು ಬಿಗ್ ಬಾಸ್ ಕಾರ್ಯಕ್ರಮ ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ, ಈ ವಾರದ ನಾಮಿನೇಷನ್ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಮರೆಯದೆ ನಮ್ಮ ಕಾಮೆಂಟ್ ಬಾಕ್ಸಲ್ಲಿ ಬರೆದು ತಿಳಿಸಿ, ಕುರಿ ಪ್ರತಾಪ್ ಅವರು ಕ್ಯಾಪ್ಟನ್ ಆಗಿದ್ದು ನಿಮಗೆ ಇಷ್ಟವಾಗಿದ್ದರೆ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.