ಇಂದು ನಾವು ನಿಮಗೆ ತಿಳಿಸುವ ವಿಚಾರ ಜೀವನಕ್ಕೆ ಬಹಳ ಉಪಯುಕ್ತವಾದದ್ದು, ನಮ್ಮ ಜೀವನವನ್ನು ಗಂಡು ಹೆಣ್ಣಿನ ಭೇದವಿಲ್ಲದೆ ಯಾಕೆ ಮತ್ತು ಹೇಗೆ ಅತ್ಯುತ್ತಮವಾಗಿ ನೋಡಿಕೊಳ್ಳಬೇಕು ಅಥವಾ ನಡೆದುಕೊಳ್ಳಬೇಕು ಎಂಬುದರ ಬಗ್ಗೆ ಒಂದು ದೀರ್ಘ ಆಲೋಚನೆ ಮಾಡುವುದು ಎಷ್ಟು ಅಗತ್ಯ ಎಂಬುದರ ಬಗ್ಗೆ ಒಂದು ಚರ್ಚೆಯನ್ನು ಮಾಡೋಣ.
ನಮ್ಮ ಸಮಾಜದಲ್ಲಿ ಕೆಲವು ನಿಯಮ ನಿಬಂಧನೆಗಳಿಗೆ, ಸಮಾಜದಲ್ಲಿ ಬದುಕ ಬಯಸಿದರೆ ಸಮಾಜ ನಿಯಮಗಳಿಗೆ ಬದ್ಧರಾಗಿರಬೇಕು, ನನ್ನಿಷ್ಟದಂತೆ ನಾವು ಬದುಕುತ್ತೇವೆ ಎಂದರೆ ಸಮಾಜ ಒಪ್ಪುವುದಿಲ್ಲ, ಹಾಗಾದರೆ ಸಮಾಜದ ವಾದಗಳು ಏನು.
ಬಂಡಿಗೆ ಎತ್ತುಗಳನ್ನು ಕಟ್ಟಿ ನಡೆಸುತ್ತಾರೆ ಹಸುಗಳನ್ನು ಕಟ್ಟಿ ಯಾಕೆ ನಡೆಸುವುದಿಲ್ಲ, ಗಂಡಿನ ದೈಹಿಕ ನಿರ್ಮಾಣ ಬುದ್ಧಿ ಶಕ್ತಿ ಹೆಣ್ಣಿಗಿಂತ ಭಿನ್ನವಾಗಿದೆ, ಪ್ರತಿ ಸಮಸ್ಯೆಗೂ ಹೆಣ್ಣು ಅಳುತ್ತಾಳೆ, ಗಂಡು ಆದರೆ ಪರಿಷ್ಕಾರ ಹುಡುಕುತ್ತಾನೆ ಅಥವಾ ಎದುರಿಸಲು ನೋಡುತ್ತಾನೆ.
ಸ್ಪರ್ಧಾತ್ಮಕ ಜೀವನ ಸ್ತ್ರೀ ಪುರುಷರಿಗೆ ಸಲ್ಲದು, ಯಾರು ಕಡಿಮೆ ಯಾರು ಹೆಚ್ಚು ಎಂಬ ಯೋಚನೆ ಪುರುಷರಿಗೆ ಆಗಲಿ ಹೆಣ್ಣಿಗೇ ಆಗಲಿ ಇರಬಾರದು, 10 ಲಕ್ಷ ರೂಪಾಯಿಗಳ ಬೆಲೆ ಇರುವ ಕಾರು ಕೂಡ ₹2 ಗಾಳಿ ಇರುವ ಟೈರ್ ನಲ್ಲೆ ಮುಂದಕ್ಕೆ ಹೋಗಬೇಕು.
ಸ್ವಾಭಿಮಾನದಿಂದ ಮನೆಯ ಹೊರಗೆ ಕೆಲಸ ಮಾಡಿ ದುಡಿಯುವ ಹೆಣ್ಣಾದರೂ ಪೋಷಣೆ ರಕ್ಷಣೆ ಆಶ್ರಯದಲ್ಲಿ ಬದುಕಿದರೆ ಮಾತ್ರ ಜೀವನ ಸಾರ್ಥಕವಾಗುತ್ತದೆ, ಪುರುಷರಾಗಲಿ ಸ್ತ್ರೀಯಾಗಲಿ ಒಂಟಿಯಾಗಿ ಬಾಳು ಸಾಗಿಸಬಾರದು, ಜೀವನವೆಂದರೆ ರಸಮಯ ವಾಗಿರಬೇಕು, ಸಂಸಾರವನ್ನು ಸುಂದರವಾಗಿ ಇಟ್ಟುಕೊಳ್ಳಬೇಕು.
ಉಪ್ಪು ಉಳಿ ಕಾರ ಸಮವಾಗಿ ಇದ್ದರೇನೆ ಮಾಡಿದ ಅಡುಗೆ ತಿನ್ನಲು ಸಾಧ್ಯ ಯಾವುದೇ ಪದಾರ್ಥ ಹೆಚ್ಚಾದರೂ ಅದು ಆಹಾರ ಎಂದೆನಿಸಿ ಕೊಳ್ಳುವುದಿಲ್ಲ, ತಿನ್ನುವ ಯೋಗ್ಯತೆಯನ್ನು ಕಳೆದುಕೊಂಡು ಆಹಾರವನ್ನು ಹೊರಗೆ ಚೆಲ್ಲಬೇಕಾಗುತ್ತದೆ.
ಹಾಗಾಗಿ ಹೆಣ್ಣು ಮತ್ತು ಗಂಡು ಎಂಬ ಯಾವುದೇ ಭೇದ ಭಾವವನ್ನು ಮಾಡುವ ಎಲ್ಲರೂ ಒಂದೇ ಎಂಬ ಭಾವನೆ ಗಳನ್ನು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಸಂಸಾರವು ಅತ್ಯುತ್ತಮವಾದ ರೀತಿಯಲ್ಲಿ ಮುಂದೆ ಸಾಗುತ್ತದೆ, ಹಾಗೂ ಸಮಾಜದಲ್ಲಿ ಒಳ್ಳೆಯ ಗೌರವ ವನ್ನು ಸಂಪಾದನೆ ಮಾಡುವಂತಾಗುತ್ತದೆ.