ನಮ್ಮ ಭಾರತದ ಸಣ್ಣ ಊರು ಇದು ಆದರೆ ಈ ಊರಿನಲ್ಲಿರುವ ಪ್ರತಿಯೊಂದು ಮನೆ ಮನದಲ್ಲಿ ದೇಶ ಅಭಿಮಾನ ಮಾತ್ರ ಬಹಳ ದೊಡ್ಡದು ಎಂದರೆ ತಪ್ಪಾಗಲಾರದು ಕಾರಣ ಈ ಊರಿಗೆ ಭೇಟಿಕೊಟ್ಟರೆ ಪ್ರತಿಯೊಂದು ರಸ್ತೆಯಲ್ಲಿ ನೀವು ರಾಷ್ಟ್ರಧ್ವಜವನ್ನು ಕಾಣಬಹುದು ಅಷ್ಟೇ ಅಲ್ಲ ಇಲ್ಲಿಯ ಶಾಲೆಯಲ್ಲಿ ಮಕ್ಕಳು ಪದ್ಯ ಕಲಿಯುವ ಮುಂಚೆ ನಾಡಗೀತೆಯನ್ನು ಹಾಡಿ ನಂತರ ಶಾಲೆಯಲ್ಲಿ ಪಾಠವನ್ನು ಕೇಳುವುದು.
ಆ ಊರು ಇರುವುದು ನಮ್ಮ ನೆರೆ ರಾಜ್ಯವಾದ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ಹಾಗೂ ಊರಿನ ಹೆಸರು ಮಧವರಂ, ಅಷ್ಟೇ ಅಲ್ಲ ಈ ಊರಿನ ಪ್ರತಿ ಮನೆಯಲ್ಲೂ ಒಬ್ಬ ಸೈನಿಕ ಇದ್ದೇ ಇರುತ್ತಾನೆ, ಭಾರತ ಇತಿಹಾಸದ ಸ್ವಾತಂತ್ರ್ಯ ಬಂದ ನಂತರದ ಪ್ರತಿ ಯುದ್ಧದಲ್ಲಿ ಈ ಊರಿನ ಸೈನಿಕರು ಇದ್ದರು ಹಾಗೂ ಮುಂದೆಯೂ ಇರುತ್ತಾರೆ ಒಂದನೇ ವಿಶ್ವಯುದ್ಧ, ಎರಡನೇ ವಿಶ್ವಯುದ್ಧ, ಇಂಡೋ ಚಿನ ವಾರ್, ಇಂಡೋ ಪಾಕಿಸ್ತಾನವು ಹೀಗೆ ಪ್ರತಿಯೊಂದು ಯುದ್ಧದಲ್ಲಿ ಈ ಊರಿನವರ ಕೊಡುಗೆ ಇದೆ.
ಇಲ್ಲಿನ ಮಹಿಳೆಯರು ಸಹ ಯುದ್ಧದಲ್ಲಿ ತಮ್ಮ ಮಗ ಅಥವಾ ಗಂಡ ಹುತಾತ್ಮನಾದ ರೆ ಒಂದು ಚೂರು ದುಃಖವನ್ನು ಪಡುವುದಿಲ್ಲ ಬದಲಿಗೆ ತನ್ನ ಮಗ ಅಥವಾ ಗಂಡನ ಮೇಲೆ ಹೆಮ್ಮೆ ಪಡುತ್ತಾರೆ ಹಾಗೂ ಊರಿನಲ್ಲಿ ಎಲ್ಲರ ಮುಂದೆ ಗರ್ವದಿಂದ ಎದೆ ಎತ್ತಿ ನಡೆಯುತ್ತಾರೆ.
ನಿಮಗೆ ಆಶ್ಚರ್ಯವಾಗಬಹುದು ಏಳು ಸಾವಿರ ಜನಸಂಖ್ಯೆ ಇರುವ ಈ ಊರಿನಲ್ಲಿ ಭಾರತೀಯ ಭೂಸೇನೆಯಲ್ಲಿ 500 ಜನ ಸೇವೆ ಸಲ್ಲಿಸುತ್ತಿದ್ದಾರೆ ವಾಯು ಸೇನೆ 200 ಜನ ಹಾಗೂ ನೌಕಾ ಸೇನೆಯಲ್ಲಿ 15 ಜನ ಸೇವೆ ಸಲ್ಲಿಸುತ್ತಿದ್ದಾರೆ, ಈಗ ಹೇಳಿ ಈ ಊರಿನ ಜನರ ದೇಶಭಕ್ತಿಯ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಮರೆಯದೆ ನಮ್ಮ ಕಾಮೆಂಟ್ ಬಾಕ್ಸಲ್ಲಿ ಬರೆದು ತಿಳಿಸಿ.
ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.