ಮದುವೆಯಾಗದೇ ತಂದೆಯಾಗುತ್ತಿರುವ ಸಲ್ಮಾನ್ ಖಾನ್!

0
2855

ಮದುವೆಯಾಗದೆ ತಂದೆಯಾಗುತ್ತಿರುವ ಸಲ್ಮಾನ್ ಖಾನ್, ಹೌದು! ಸಲ್ಮಾನ್ ಖಾನ್ ತಂದೆಯಾಗುತ್ತಿದ್ದಾರೆ. ಆದರೆ ಯಾವಾಗ ಮಾತ್ರ ಅವರು ಹೇಳಿಲ್ಲ. ಸದ್ಯದಲ್ಲಿಯೇ ಎಂದು ಉತ್ತರಿಸುತ್ತಾರೆ

ಸಲ್ಮಾನ್ ಖಾನ್ ನಡೆಸಿಕೊಡುವ ಬಿಗ್ಬಾಸ್ ಶೋಗೆ ಬಾಲಿವುಡ್ ನ ಖ್ಯಾತ ನಟಿ ರಾಣಿ ಮುಖರ್ಜಿ ಆಗಮಿಸಿದ್ದರು. ಅವರು ಸಲ್ಮಾನ್ ಖಾನ್ ಗೆ ಕಳೆದ ಬಿಗ್ಬಾಸ್ 11ಕ್ಕೆ ಬಂದಾಗ ನಾನು ನಿಮಗೆ ಮದುವೆಯಾಗಿ ಅಂದಿದ್ದೆ. ಅದಕ್ಕೆ ನೀವು ನಕ್ಕಿದ್ದೀರಿ. ಅದಕ್ಕೆ ನಾನು ಮದುವೆಯಾಗುವುದು ಬೇಡ. ಕಡೆ ಪಕ್ಷ ಮಕ್ಕಳನ್ನಾದರೂ ಮಾಡಿಕೊಳ್ಳಿ ಎಂದು ಕೇಳಿದ್ದೆ. ಅದಕ್ಕೆ ನೀವು ತಲೆಯಾಡಿಸಿದ್ದೀರಿ‌. ಎಂದು ಹೇಳಿದರು.

ಈಗ ಮತ್ತೆ ಅದೇ ಪ್ರಶ್ನೆಯನ್ನು ರಾಣಿ ಮುಖರ್ಜಿ ಕೇಳಿದರು. ಮತ್ತೆ ಆಯಿತು ಎಂಬಂತೆ ಸಲ್ಮಾನ್ ಖಾನ್ ತಲೆಯಾಡಿಸಿದರು. ಅದಕ್ಕೆ ಯಾವಾಗ ಎಂದಾಗ ತಕ್ಷಣ ಮಗು ಬರುವುದಿಲ್ಲ ಕಾಯಬೇಕು ಎಂದು ಸಲ್ಮಾನ್ ಖಾನ್ ಹೇಳ್ತಾರೆ. ಹಾಗಾದರೆ 18 ತಿಂಗಳು ಕಾಯಬಹುದಾ ಎಂದಾಗ ಹೌದು ಎನ್ನುತ್ತಾರೆ ಸಲ್ಮಾನ್ ಖಾನ್.

ಸಲ್ಮಾನ್ ಖಾನ್ ಗೆ 50 ವರ್ಷವಾಗಿದ್ದು ಮೋಸ್ಟ್ ಬ್ಯಾಚುಲರ್ ಬಾಯ್ ಎಂಬ ಹೆಸರಿನಿಂದ ಅವರನ್ನು ಕರೆಯಲಾಗುತ್ತದೆ. ಐಶ್ವರ್ಯ ರೈಯನ್ನು ಪ್ರೀತಿಸುತ್ತಿದ್ದ ಎಂದು ಆಗ ಗುಲ್ಲೆಬ್ಬಿತ್ತು. ಆ ನಂತರ ಅದೇಕೋ ಏನೀ ಸಲ್ಮಾನ್ ಖಾನ್ ಮದುವೆಯಾಗುವುದ ವಿಚಾರವನ್ನು ಬಿಟ್ಟು ಬಿಟ್ಟರು. ಅದೂ ಅಲ್ಲದೇ ಅವರು ಕೃಷ್ಣ ಮೃಗ ಭೇಟೆ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದಿದ್ದು ವಿಚಾರಣೆ ಇನ್ನೂ ನಢಯುತ್ತಿದೆ. ಒಂದು ವೇಳೆ ತಮಗೆ ಹೆಚ್ಚು ಅವಧಿ ಜೈಲು ಶಿಕ್ಷೆ ಆದರೆ ತನ್ನನ್ನು ಮದುವೆಯಾದ ಹುಡುಗಿಗೆ ಅನ್ಯಾಯವಾಗುತ್ತೆ ಎಂದು ಸಲ್ಮಾನ್ ಖಾನ್ ಮದುವೆಯಾಗದೇ ಉಳಿದಿದ್ದಾರೆ.

ಸಲ್ಮಾನ್ ಖಾನ್ ನಟನೆಯ ಭಾರೀ ನಿರೀಕ್ಷಿತ ಚಿತ್ರ ದಬಾಂಗ್ 3 ಕ್ರಿಸ್ಮಸ್ ವೇಳೆಗೆ ರಿಲೀಸ್ ಆಗಲಿದ್ದು ಭಾರತೀಯ ಚಿತ್ರರಂಗದ ದಾಖಲೆಗಳು ಪುಡಿಯಾಗಲಿವೆ ಎಂದು ಹೇಳಲಾಗಿದೆ. ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಪೋಲಿಸ್ ಅಧಿಕಾರಿಯಾಗಿ ನಟಿಸಿದ್ದು ಸೋನಾಕ್ಷಿ ಸಿನ್ಹಾ ನಾಯಕಿಯಾಗಿ ನಟಿಸಿದ್ದಾರೆ . ಪ್ರಭುದೇವ ನಿರ್ದೇಶನ ಮಾಡಿದ್ದಾರೆ.

LEAVE A REPLY

Please enter your comment!
Please enter your name here