ಸಮುದ್ರದ ಆಳದಲ್ಲಿ ಹಲವಾರು ನಮಗೆ ತಿಳಿಯದ ಜೀವಿಗಳು ವಾಸ ಮಾಡುತ್ತಿದೆ, ಇನ್ನು ಇಂತಹ ಜೀವಿಗಳ ಬಗ್ಗೆ ಹಲವು ವಿಜ್ಞಾನಿಗಳು ಅಧ್ಯನ ಸಹ ಮಾಡುತ್ತಿದ್ದಾರೆ, ಇಂತಹ ಸಮಯದಲ್ಲೇ ಸಮುದ್ರದ ಆಳದಿಂದ ರಾಕ್ಷಸ ಜಿರಳೆ ಒಂದು ಮೇಲಕ್ಕೆ ಬಂದಿದೆ, ಆದರೆ ಇದಕ್ಕೆ ಯಾರು ಹೆದರುವ ಅವಶ್ಯಕತೆ ಇಲ್ಲ ಕಾರಣ ಇದು ಸತ್ತ ಜೀವಿಗಳ ದೇಹದ ಮಾಂಸವನ್ನ ಮಾತ್ರ ಸೇವಿಸುತ್ತದೆ
ಇಂಡೋನೇಷ್ಯಾದ ಜಾವಾದಲ್ಲಿರುವ ಹಿಂದೂ ಮಹಾಸಾಗರದ ಪಶ್ಚಿಮ ಕರಾವಳಿ ಪ್ರದೇಶದ ದಕ್ಷಿಣ ಭಾಗದಲ್ಲಿರುವ ಬಂಟನ್ ಎಂಬಲ್ಲಿ 2018ರಲ್ಲಿ ಮೊದಲ ಬಾರಿಗೆ ಈ ಜೀವಿಯನ್ನು ಪತ್ತೆ ಮಾಡಲಾಗಿತ್ತು. ಸಿಂಗಾಪುರದ ಸಂಶೋಧಕರು ಈ ಜೀವಿಯನ್ನು ಪತ್ತೆ ಮಾಡಿದ್ದರು.
ಇದಕ್ಕೆ ಬ್ಯಾಥಿನಾಮಸ್ ರಾಕ್ಷಸ ಅಥವಾ ಸೂಪರ್ಗೇಂಟ್ ಬ್ಯಾಥಿನಾಮಸ್ ಎಂಬ ಹೆಸರಿನ್ನಿಟ್ಟು ಇದರ ಅಧ್ಯಯನಕ್ಕೆ ಮುಂದಾಗಿದ್ದರು.
ಸತತ ಎರಡು ವರ್ಷಗಳ ಅಧ್ಯಯನದ ಬಳಿಕ ಬ್ಯಾಥಿನಾಮಸ್ ರಾಕ್ಷಸ ಅಥವಾ ಸಮುದ್ರದ ಬೃಹದಾಕಾರದ ಜಿರಲೆ ಪತ್ತೆಯಾಗಿರುವುದನ್ನು ಸಂಶೋಧಕರು ಖಚಿತಪಡಿಸಿದ್ದಾರೆ.
ಜೈವಿಕವೈವಿಧ್ಯತೆಯ ಸಂಶೋಧನಾ ಜರ್ನಲ್ ಝೂಕೀಸ್ನಲ್ಲಿ ಜು.8ರಂದು ಈ ಬಗ್ಗೆ ಪ್ರಕಟಿಸಿದ್ದ ವಿಜ್ಞಾನಿಗಳು, ಇದೊಂದು ರಾಕ್ಷಸ ಗಾತ್ರದ ಸಮಪಾದಿ ಎಂದು ಬಣ್ಣಿಸಿದ್ದಾರೆ. ಇಂಡೋನೇಷ್ಯಾದಲ್ಲಿ ಪತ್ತೆಯಾಗಿರುವ ಮೊದಲ ಸಂಕುಲ ಎಂದು ಹೇಳಲಾಗಿದೆ.
ರಾಕ್ಷಸ ಜಿರಲೆಗೆ 14 ಪಾದಗಳಿವೆ. ಆದರೆ, ಆಹಾರವನ್ನು ಅರಸಿಕೊಂಡು ಸಮುದ್ರದ ತಳಭಾಗದಲ್ಲಿ ಓಡಾಡಲು ಮಾತ್ರವೇ ಈ ಕಾಲುಗಳನ್ನು ಬಳಸುತ್ತದೆ. ಇದು 50 ಸೆಂಟಿಮೀಟರ್ (1.6 ಅಡಿ) ಉದ್ದ ಇದ್ದು, ಸಮಪಾದಿಗಳಲ್ಲೇ ಅತಿ ದೊಡ್ಡ ಗಾತ್ರದ ಜೀವಿ ಎನಿಸಿಕೊಂಡಿದೆ. ಸಾಮಾನ್ಯವಾಗಿ ಸಮಪಾದಿಗಳು 33 ಸೆಂಟಿಮೀಟರ್ಗಿಂತ ಹೆಚ್ಚು ಉದ್ದ (ಅಂದಾಜು ಒಂದು ಅಡಿಗಿಂತ ಸ್ವಲ್ಪ ಹೆಚ್ಚು) ಬೆಳೆಯುವುದಿಲ್ಲ. ಒಂದು ವೇಳೆ 50 ಸೆಂಟಿಮೀಟರ್ ಉದ್ದವಿದ್ದರೂ ಅವನ್ನು ಬೃಹದಾಕಾರದ ಸಮಪಾದಿಗಳು ಎಂದು ವರ್ಗೀಕರಿಸಲಾಗುತ್ತದೆ. ಮೂಲ ವಿಜಯವಾಣಿ