ಬರಲಿದ್ದಾರೆ ಡಿ ಬಾಸ್ ಕಿರುತೆರೆ ನಿರೂಪಣೆಗೆ ಟಿಆರ್ ಪಿ ಉಡೀಸ್

0
2841

ಚಾಲೆಂಜಿಂಗ್ ಸ್ಟಾರ್ ದರ್ಶನ್ ಕನ್ನಡದ ಅತಿ ಖ್ಯಾತ ನಟ ಹಾಗೂ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟ ಯಾರೆಂದರೆ ಅದು ದರ್ಶನ್ ಮಾತ್ರ. ನೇರ ನುಡಿಯ ದರ್ಶನ್ ತಾವಾಯಿತು , ತಮ್ಮ ಕೆಲಸವಾಯಿತು ಆ ರೀತಿಯಲ್ಲಿ ಇರುತ್ತಾರೆ.

ಅವರು ವರ್ಷಕ್ಕೆ ಮೂರು ಚಿತ್ರಗಳನ್ನು ಮಾಡುವ ಪಣ ತೊಟ್ಟಿದ್ದಾರೆ. ಏನಾದರೂ ಆಗಲಿ ಅಭಿಮಾನಿಗಳಿಗೆ ನಿರಾಸೆ ಆಗಕೂಡದು ಅದಕ್ಕೆ ಅವರು ವರ್ಷವಿಡೀ‌ ಶೂಟಿಂಗ್ ನಲ್ಲಿ ಇರುತ್ತಾರೆ. ಪುನೀತ್ ,ಗಣೇಶ್ ,ಶಿವರಾಜ್ ಕುಮಾರ್ , ಸುದೀಪ್ ಮುಂತಾದ ನಟರು ಕಿರುತೆರೆಯ ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿದ್ದಾರೆ. ಆ ಮೂಲಕ ಅವರು ಕಿರುತೆರೆಯ ಪ್ರೇಕ್ಷಕರನ್ನು ಸೆಳೆಯುವ ಜೊತೆಗೆ ಸಂಪಾದನೆ ಕೂಡ ಚೆನ್ನಾಗಿಯೇ ಆಗುತ್ತದೆ.

ಆದರೆ ದರ್ಶನ್ ಅದೇಕೂ ಏನೋ ಯಾವುದೇ ಕಿರುತೆರೆಯ ಕಾರ್ಯಕ್ರಮಕ್ಕೆ ಬರುವುದಿಲ್ಲ. ಅವರು ಶೋ ನಡೆಸಿಕೊಟ್ಟರೆ ಅದರ ಟಿಆರ್ಪಿ ಅತಿ ಹೆಚ್ಚು ಬರುವುದು ಗ್ಯಾರಂಟಿ. ಆದರೆ ಮೊದಲಿಂದಲೂ ಕಿರುತೆರೆ, ಪ್ರಚಾರದಿಂದ ದೂರ ಇರುವ ದರ್ಶನ್ ಮನ ಒಲಿಸುವುದು ಕಷ್ಟ.

ಆದರೆ ಗುಡ್ ನ್ಯೂಸ್ ಒಂದು ಬಂದಿದೆ. ನಟ ದರ್ಶನ್ ಸದ್ಯದಲ್ಲಿಯೇ ಕಿರುತೆರೆಯ ಕಾರ್ಯಕ್ರಮ ಒಂದನ್ನು ನಡೆಸಿಕೊಡಲು ಒಪ್ಪಿಕೊಂಡಿದ್ದಾರೆ. ಅದು ಯಾವ ಶೋ , ಯಾವ ಚಾನಲ್ ಎಂದು ಸದ್ಯದಲ್ಲಿಯೇ ಗೊತ್ತಾಗಲಿದೆ. ಅವರು ಯಾವ ರೀತಿಯಲ್ಲಿ ನಿರೂಪಣೆ ಮಾಡಬಹುದು ಎಂಬ ಕುತೂಹಲ ಭಾರೀ ಇದೆ.

ಸದ್ಯ ದರ್ಶನ್’ರವರು ಒಡೆಯ ಚಿತ್ರದ ಬಿಡುಗಡೆಯ ಬಿಜಿಯಲ್ಲಿದ್ದಾರೆ. ಈ ಚಿತ್ರವನ್ನು ಅವರ ಆಪ್ತ ಗೆಳೆಯ ಎಂಡಿ ಶ್ರೀಧರ್ ನಿರ್ದೇಶಿಸಿದ್ದು , ಸಂದೇಶ್ ನಾಗರಾಜ್ ಬಂಡವಾಳ ಹೂಡಿದ್ದಾರೆ. ತಮಿಳಿನ ವೀರಂ ಚಿತ್ರದ ರೀಮೇಕ್ ಒಡೆಯ ಚಿತ್ರ. ಅದರಲ್ಲಿ ಅಜಿತ್ ನಟಿಸಿದ್ದರು. ಅದು ಮೂರು ವರ್ಷಗಳ ಹಿಂದೆ ತೆರೆ ಕಂಡಿದ್ದು ಬ್ಲಾಕ್ ಬಸ್ಟರ್ ಆಗಿತ್ತು. ಅದನ್ನೇ ತೆಲುಗಿನಲ್ಲಿ ಪವನ್ ಕಲ್ಯಾಣ್ ಕಾಟಮರಾಯುಡು ಆಗಿ ಬಂದಿದ್ದರು. ಆದರೆ ಅದು ಅಷ್ಟಾಗಿ ಓಡಲಿಲ್ಲ. ಅಣ್ಣನಿಗೆ ತಮ್ಮಂದಿರು ಹೆಣ್ಣು ಹುಡುಕುವುದು ಈ ಚಿತ್ರದ ಮೇನ್ ಕತೆ‌.

ಈ ವರ್ಷ ದರ್ಶನ್ರ ಎರಡು ಚಿತ್ರಗಳು ರಿಲೀಸ್ ಆಗಿವೆ. ಯಜಮಾನ ಮತ್ತು ಕುರುಕ್ಷೇತ್ರ. ಎರಡೂ ಹಿಟ್ ಆಗಿವೆ. ಈಗ ಒಡೆಯ ಹಿಟ್ ಆದರೆ ಹ್ಯಾಟ್ರಿಕ್ ಹಿಟ್ ಕೊಟ್ಟಂತಾಗುತ್ತದೆ.

LEAVE A REPLY

Please enter your comment!
Please enter your name here