ಶಬರಿಮಲೈ : ಪವಿತ್ರವಾದ ಮಾಲೆಯನ್ನು ಏಕೆ ಧರಿಸುತ್ತಾರೆ ಗೊತ್ತಾ..?

0
2756

ದೇವಸ್ಥಾನಕ್ಕೆ ಹೋಗುವವರು ದೇವಸ್ಥಾನಕ್ಕೆ ಹೋಗಲು ಬಯಸಿದರೆ ತಕ್ಷಣ ಹೋಗಬಹುದು, ಯಾವುದೇ ಪೂರ್ವ ನಿಯೋಜಿತ ಕಾರ್ಯಗಳನ್ನು ಮಾಡುವುದಿಲ್ಲ, ಇದು ಸಾಮಾನ್ಯವಾಗಿ ಎಲ್ಲ ದೇವರ ದೇವಾಲಯಗಳಿಗೆ ಅನುಸರಿಸಿದರೆ, ಅಯ್ಯಪ್ಪ ಸ್ವಾಮಿ ಅಥವಾ ಶಬರಿ ಮಲೆ ದೇವಾಲಯದ್ದೆ ಬೇರೆ ರೀತಿ, ಶಬರಿ ಮಲೆಗೆ ಹೋಗಲು ಬಯಸುವವರನ್ನು ನೀವು ನೋಡಿರ ಬಹುದು ಅಥವಾ ನೀವೇ ತೆರಳಿರಬಹುದು ಅವರು ದೇವಾಲಯಕ್ಕೆ ತೆರಳುವ ಮುನ್ನವೇ ಮಾಲೆಯನ್ನು ಧರಿಸಿರುತ್ತಾರೆ ಈ ಮಾಲೆ ಎಂದರೇನು ಅದರ ಪ್ರಾಮುಖ್ಯತೆ ಏನು ಎಂಬುದರ ಬಗ್ಗೆ ಇಂದು ತಿಳಿಯೋಣ.

ಅಯ್ಯಪ್ಪ ಸ್ವಾಮಿಯ ಭಕ್ತರು ರುದ್ರಾಕ್ಷಿ ಅಥವಾ ತುಳಸಿ ಮಣಿಗಳಿಂದ ಮಾಡಿದ ಪವಿತ್ರವಾದ ಮಾಲೆಯನ್ನು ಕತ್ತಿನ ಸುತ್ತ ಧರಿಸುತ್ತಾರೆ. ಅವರು 41 ದಿನದ ವ್ರತವನ್ನು ಪ್ರಾರಂಭಿಸುವ ಮುನ್ನ ಮಾಲೆಯನ್ನು ಧರಿಸುತ್ತಾರೆ. ಶಬರಿಮಲೈ ದೇವಸ್ಥಾನವನ್ನು ಈಗಾಗಲೇ ಬಹಳಷ್ಟು ಬಾರಿ ಹೋಗಿ ಬಂದಿರುವ ಹಿರಿಯ ಭಕ್ತಾದಿ ಹೊಸ ಭಕ್ತಾದಿಗಳಿಗೆ ಮಾರ್ಗದರ್ಶನ ನೀಡುತ್ತಾರೆ.

ಶನಿವಾರ ಶುಭ ದಿನ ಆದ್ದರಿಂದ ಅಂದು ಭಕ್ತಾದಿಗಳಿಗೆ ಮಾಲೆಯನ್ನು ಧರಿಸಲು ಕೊಡುತ್ತಾರೆ. ವ್ರತವನ್ನು ಮಾಡಲು ಇಚ್ಚಿಸುವ ಭಕ್ತರು ಮುಂಜಾನೆ ಎದ್ದು, ಮನೆ ದೇವರಿಗೆ ಹಾಗು ನವಗ್ರಹಗಳಿಗೆ ಪೂಜೆ ಮಾಡಬೇಕು. ಪೂಜೆ ಮಾಡಿದ ನಂತರ ಅವರು ಗುರು ಸ್ವಾಮಿಯನ್ನು ಭೇಟಿ ಮಾಡಿ ಮಾಲೆಯನ್ನು ತೆಗೆದುಕೊಳ್ಳುತ್ತಾರೆ.

ಭಕ್ತಾದಿಗಳು ವ್ರತದ ಸಮಯದಲ್ಲಿ ಗಡ್ಡವನ್ನು ತೆಗೆಸಬಾರದು ಹಾಗು ಕ್ಷೌರವನ್ನು ಮಾಡಿಸಬಾರದು. ಇದು ಒಂದು ಸಂಪ್ರದಾಯದ ಹಾಗೆ ಪಾಲಿಸುತ್ತಾರೆ. ವಿಭೂತಿ ಹಾಗು ಗಂಧವನ್ನು ಹಚ್ಚಿಕೊಳ್ಳುವುದು ಅವರ ದೈನಂದಿನ ಕಾರ್ಯವಾಗುತ್ತದೆ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here