ಬಿಗ್ ಬಾಸ್ ಟಿವಿ ಜಗತ್ತಿನ ಅತಿ ದೊಡ್ಡ ರಿಯಾಲಿಟಿ ಶೋ.ಇಂತಹ ಶೋನಿಂದ ಜನರಿಗೆ ಯಾವ ರೀತಿಯ ಉಪಯೋಗ ಆಗುತ್ತದೋ ಗೊತ್ತಿಲ್ಲ. ಬಿಗ್ಬಾಸ್ ಮನೆಯೊಳಗೆ ನಡೆಯುವ ಸ್ಪರ್ಧಿಗಳ ಅಸಭ್ಯ ವರ್ತನೆಗಳು ವೀಕ್ಷಕರಿಗೆ ತಮ್ಮ ಕುಟುಂಬದ ಜೊತೆ ನೋಡಲು ತುಂಬಾ ಮುಜುಗರವಾಗುತ್ತದೆ. ಪ್ರೀತಿ ಪ್ರೇಮ, ರೊಮಾನ್ಸ್ ಇವು ಬಿಗ್ಬಾಸ್ ಸರಣಿಯಲ್ಲಿ ಮುಂದುವರೆಯುತ್ತಿದೆ. ಕನ್ನಡದಲ್ಲಿ ಕೂಡ ಇಂತಹ ಅಸಭ್ಯತೆ ಇದೆ. ಪರಸ್ಪರ ತಬ್ಬಿಕೊಳ್ಳುವುದು, ಪ್ರೀತಿಯ ನಿವೇದನೆ ಅಷ್ಟೇ ಅಲ್ಲದೇ ಕನ್ನಡದಲ್ಲಿ ಈ ಸಲ ಬಿಗ್ಬಾಸ್ ಇನ್ನೊಂದು ಅಸಹ್ಯಕ್ಕೆ ಕಾರಣವಾಗಿದೆ. ಕಿಶನ್ ಇತರೆ ನಟಿಯರ ಜೊತೆ ಅಸಭ್ಯವಾಗಿ ವರ್ತಸುವುದು ವೀಕ್ಷಕರಿಗೆ ಕಿರಿಕಿರಿ ಉಂಟು ಮಾಡುತ್ತಿದೆ.
ಹಿಂದಿಯಲ್ಲಂತೂ ಇದು ಎಲ್ಲೆ ಮೀರಿದೆ. ಹಿಂದಿಯ ಬಿಗ್ಬಾಸ್ ಪಾಶ್ಚಾತ್ಯ ದೇಶಗಳಲ್ಲಿ ನಡೆಯುವ ರಿಯಾಲಿಟಿ ಸೋ ರೀತಿಯಲ್ಲಿ ಇದೆ. ಸ್ಪರ್ಧಿಗಳು ರೊಮಾನ್ಸ್ ಮಾಡುವುದನ್ನು ಯಾವುದೇ ಕಟ್ ಇಲ್ಲದೇ ಹಾಕಲಾಗುತ್ತಿದೆ. ಈ ಸಲ ಹಿಂದಿಯಲ್ಲಿ ಬಿಗ್ಬಾಸ್ 13 ಸೀಜನ್ ನಡೆಯುತ್ತಿದೆ. ಇದರಲ್ಲಿ ನಟ ಸಿದ್ದಾರ್ಥ ಶುಕ್ಲಾ ಮತ್ತು ನಟಿ ಆದಿತ್ಯಾ ದೇಸಾಯಿ ರೊಮಾನ್ಸ್ ಮಾಡಿದ್ದು ಚರ್ಚೆಗೆ ಗ್ರಾಸವಾಗಿದೆ.
ಮೊದಲು ಬಿಗ್ಬಾಸ್ ಮನೆಯಲ್ಲಿ ಆದಿತ್ಯಾ ದೇಸಾಯಿ ಮತ್ತು ಸಿದ್ದಾರ್ಥ ಶುಕ್ಲಾ ನಟಿಸಿದ್ದ ಚಿತ್ರವೊಂದರ ರೋ ಮಾನ್ಸ್ ದೃಶ್ಯ ಪ್ರದರ್ಶಿಸಲಾಗುತ್ತೆ. ಅದನ್ನು ನೋಡಿ ದೇಸಾಯಿ ನಾಚಿಕೆಯಿಂದ ತಲೆ ಬಗ್ಗಿಸುತ್ತಾಳೆ.ನಂತರ ಬಿಗ್ಬಾಸ್ ಆಣತಿಯ ಮೇರೆಗೆ ಇವರಿಬ್ಬರೂ ರೋ ಮಾನ್ಸ್ ಮಾಡಬೇಕಾಗುತ್ತದೆ.
ಅದರಲ್ಲಿ ಇನ್ನೊಬ್ಬ ಸ್ಪರ್ಧಿ ಇವರಿಗೆ ಯಾವ ರೀತಿಯಲ್ಲಿ ರೋ ಮಾನ್ಸ್ ಮಾಡಬೇಕು ಎಂದು ಹೇಳುತ್ತಿದ್ದಾನೆ. ಮೊದಲು ಹೂವಿನಿಂದ ಅಲಂಕರಿಸಿದ ಬೆಡ್ ರೂಮ್ ಮೇಲೆ ಇವರಿಬ್ಬರ ಉರುಳಾಟ ಆದ ನಂತರ ಹೊರಗೆ ಗಾರ್ಡನ್ ಏರಿಯಾದಲ್ಲಿ ಹೋಗಬೇಕಾಗುತ್ತದೆ. ತದ ನಂತರ ದಾಸವಾಳದ ಹೂವಿನಿಂದ ಅಲಂಕರಿಸಿದ ನೀರಿನ ಕೊಳದಲ್ಲಿ ಇಬ್ಬರೂ ಬೀಳುತ್ತಾರೆ. ಇದು ಪ್ರೋಮೋದಲ್ಲಿ ಪ್ರಸರಣವಾಗಿದೆ.ಈ ದೃಶ್ಯ ನೋಡಿ ಟಿವಿ ಲೋಕ ಬೆಚ್ಚಿ ಬಿದ್ದಿದೆ. ಟಿವಿ ಮಾಧ್ಯಮಕ್ಕೆ ಸೆನ್ಸಾರ್ ಅವಶ್ಯಕತೆ ಇದೆ.ಹಿರಿತೆರೆಗೆ ಹೇಗೆ ಸಣ್ಣ ಪುಟ್ಟ ದೃಶ್ಯಗಳು ಹಾಗೂ ಮಾತಿಗೂ ಕಡಿವಾಣ ಹಾಕುತ್ತಾರೋ ಅದೇ ರೀತಿ ಟಿವಿ ಮಾಧ್ಯಮಕ್ಕೂ ಹಾಕಬೇಕಾಗಿದೆ. ಧಾರವಾಹಿಗಳನ್ನು ವರ್ಷಗಟ್ಟಲೆ ಎಳೆಯುವ ಸಂಪ್ರದಾಯ ನಿಲ್ಲಬೇಕದೆ.ಕತೆ ಎಷ್ಟು ಇದೆಯೋ ಅಷ್ಟೇ ವಾರ ಓಡಿದರೆ ಸಾಕು. ಅಲ್ಲವೇ ?!