ಕನ್ನಡದ ಖ್ಯಾತ ನಟಿ ರಚಿತಾ ರಾಮ್’ರವರ ಸಹೋದರಿ ನಿತ್ಯಾರಾಮ್ ರವರ ನಿಶ್ಚಿತಾರ್ಥ ಅದ್ದೂರಿಯಾಗಿ ನಡೆದಿದೆ. ಇನ್ನೆರಡು ದಿನಗಳಲ್ಲಿ ಮದುವೆ ಆಗಲಿದ್ದು ಸಿದ್ದತೆ ನಡೆಯುತ್ತಿದೆ.
ನಿತ್ಯಾರಾಮ್ ಕನ್ನಡ ಸೇರಿದಂತೆ ತಮಿಳು ತೆಲುಗು ಭಾಷೆಯ ಧಾರಾವಾಹಿಯಲ್ಲಿ ನಟಿಸಿದ್ದಾರೆ. ತಮಿಳುನಾಡಿನ ಈರೋಡಿನಲ್ಲಿ ಜನಿಸಿದರು. ಇವರ ತಂಗಿ ರಚಿತ ರಾಮ್ ಕನ್ನಡದ ಜನಪ್ರಿಯ ನಟಿ. ನಂದಿನಿ ಧಾರಾವಾಹಿಯಲ್ಲಿ ಬಹು ಮುಖ್ಯ ಪಾತ್ರವನ್ನು ನಿರ್ವಹಿಸಿದ್ದಾರೆ. ಕ್ಲಾಸಿಕಲ್ ಡಾನ್ಸ್ ನ್ನು ಕಲಿತಿದ್ದಾರೆ. ಝೀ ಕನ್ನಡದ ಬೆಂಕಿಯಲ್ಲಿ ಅರಳಿದ ಹೂವು ಧಾರಾವಾಹಿಯಲ್ಲಿ ನಟಿಸುವ ಮೂಲಕ ಜರ್ನಿ ಆರಂಭಿಸಿದರು. ನಂತರ ಕರ್ಪುರದ ಗೊಂಬೆ ,ಎರಡು ಕನಸು ಚಿತ್ರಗಳಲ್ಲಿ ನಟಿಸಿದರು. ತೆಲುಗಿನ ಮುದ್ದು ಬಿಡ್ಡ ಧಾರಾವಾಹಿ ಆಕೆಗೆ ಬಹಳ ಹೆಸರು ಮಾಡಿತು.
ನಿತ್ಯಾರಾಮ್ ರವರ ಮದುವೆ ಆಸ್ಟ್ರೇಲಿಯಾದ ಬಿಜಿನೆಸ್ ಮ್ಯಾನ್’ನೊಂದಿಗೆ ನಡೆಯುತ್ತದೆ. ಅವರ ಬಗ್ಗೆ ಅಷ್ಟೇನೂ ಡೀಟೆಲ್ಸ್ ಬಿಟ್ಟು ಕೊಟ್ಟಿಲ್ಲ. ಇನ್ಸ್ಟಾಗ್ರಾಂನಲ್ಲಿ ನಿಶ್ಚಿತಾರ್ಥದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅರಿಸಿನ ಸೀರೆಯಲ್ಲಿ ಮಿಂಚಿದ್ದಾರೆ. ಉಂಗುರ ತೊಡಿಸಿ ನಿಶ್ಚಿತಾರ್ಥ ಮುಗಿಸಿದ್ದಾರೆ.
ಕಳೆದೆರಡು ವರ್ಷಗಳಿಂದ ಕನ್ನಡ ಸಿನಿಮಾ ನಟ ನಟಿಯರ ಮದುವೆ ಆಗಿ ರಂಗೇರುತ್ತಿದೆ. ದಿಗಂತ್ ,ಆಂದ್ರಿತಾ , ಧ್ರುವ ಸರ್ಜಾ , ಚಿರು ಸರ್ಜಾ , ಮೇಘನಾ ರಾಜ್ , ಕಿರಣ್ ಶ್ರೀನಿವಾಸ್, ಹಿತಾ ಚಂದ್ರಶೇಖರ ಮದುವೆ ನಡೆದಿದೆ. ಈಗ ನಿತ್ಯಾ ರಾಮ್ ಸರದಿ. ಅವರ ಅಕ್ಕ ರಚಿತಾ ರಾಮ್ ಕನ್ನಡದ ಮೊದಲ ಸಾಲಿನ ನಟಿ . ದರ್ಶನ್ ರ ಬುಲ್ ಬುಲ್ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು. ನಂತರ ಶಿವರಾಜ್ ಕುಮಾರ್, ಪುನೀತ್ ರಾಜ್‍ಕುಮಾರ್ ,ಧ್ರಯ ಸರ್ಜಾ ಸೇರಿದಂತೆ ಕನ್ನಡದ ಹಲವು ನಾಯಕರ ಜೊತೆಗೆ ನಾಯಕಿಯಾಗಿ ನಟಿಸಿದ್ದಾರೆ. ಇತ್ತೀಚಿಗೆ ಅವರ ಆಯುಷ್ಮಾನ್ ಭವ ಚಿತ್ರ ತೆರೆಗೆ ಬಂದಿತು. ಪಿ. ವಾಸು ನಿರ್ದೇಶಿಸಿದ ಈ ಚಿತ್ರವನ್ನು ದ್ವಾರಕೀಶ್ ನಿರ್ಮಿಸಿದ್ದಾರೆ. ಇದು ಅಷ್ಟಾಗಿ ಹೆಸರು ಮಾಡಲಿಲ್ಲ.
ನಿತ್ಯಾರಾಮ್ ಕನ್ನಡದ ಬಿಗ್ ಬಾಸ್ ನ ಮನೆಯೊಳಗೆ ಹೋಗಿ ಬಂದಿದ್ದಾರೆ.