4 ಗಂಟೆಯ ಕೆಲಸವನ್ನು ಒಂದೇ ಗಂಟೆಯಲ್ಲಿ ಮುಗಿಸುವುದು ಹೇಗೆ

0
2308

ಈ ಐದು ವಿಧಾನಗಳಿಂದ ನೀವು ಯಾವುದೇ ಕೆಲಸವನ್ನು ಬಹಳ ಬೇಗನೇ ಮಾಡಬಹುದು, ಸ್ನೇಹಿತರೆ. ಕೆಲವು ಕೆಲಸವನ್ನು ಅತಿ ಕಷ್ಟಪಟ್ಟು ಮಾಡಿ ಮುಗಿಸುವ ಬದಲಿಗೆ ಅದನ್ನು ಸರಳವಾಗಿ ಸ್ಮಾರ್ಟ್ ಆಗಿ ಮುಗಿಸಬಹುದು. ಇದನ್ನು ಸ್ಮಾರ್ಟ್ ವರ್ಕ್ ಎನ್ನುತ್ತಾರೆ.

ಉದಾಹರಣೆಗೆ ನೀವು ಸ್ಟೇಡಿಯಂನಲ್ಲಿ 1600 ಮೀಟರ್ ಓಡುವ ಸ್ಪರ್ಧೆ ಇರುತ್ತದೆ.ಆಗ ನೀವು 4 ರೌಂಡ್ ಓಡಬೇಕಾಗುತ್ತದೆ. ಓಟ ಆರಂಭವಾದಾಗ ಯಾರು ಮೊದಲ ರೌಂಡ್ ಬೇಗ ಮುಗಿಸುತ್ತಾರೋ ಅವರು 1600 ಮೀಟರ್ ಓಡಿ ಗೆಲ್ಲುತ್ತಾರೆ. ಆದರೆ ಎರಡನೇ ರ್ಯಕ್, ಮೂರನೇ ರ್ಯಕ್’ನವರು ವ್ಯರ್ಥವಾಗಿ ಓಡುತ್ತಲೇ ಇರಬೇಕಾಗುತ್ತದೆ.

ಇದೇ ರೀತಿ ನಾವು ದೈನಂದಿನ ಜೀವನದಲ್ಲಿ ಹಲವು ಕೆಲಸಗಳನ್ನು ಮಾಡಲು ಅಗತ್ಯಕ್ಕಿಂತ ಜಾಸ್ತಿ ಸಮಯವನ್ನು ವ್ಯರ್ಥ ಮಾಡುತ್ತೇವೆ. ಜಾಸ್ತಿ ಶ್ರಮ ಪಡುತ್ತೇವೆ. ಕೆಲವು ಟ್ರಿಕ್’ಗಳನ್ನು ಬಳಸುವುದರಿಂದ ಯಾವುದೇ ಕೆಲಸವನ್ನು ಬಹಳ ಬೇಗನೇ ಮಾಡಬಹುದು. ಅದು ಯಾವ ಯಾವ ಟ್ರಿಕ್ ಎಂದು ನೋಡೋಣ ಬನ್ನಿ.

ಗುಂಪುಗಳಾಗಿ ವಿಂಗಡನೆ- ಯಾವುದೇ ಕೆಲಸವನ್ನು ಪ್ರತ್ಯೇಕ ಗುಂಪುಗಳಾಗಿ ವಿಂಗಡಿಸಬೇಕು. ನಮ್ಮಲ್ಲಿ ಕೆಲವರಿಗೆ ಯಾವ ಕೆಲಸವನ್ನು ಪ್ರಾರಂಭಿಸಬೇಕು , ಯಾವ ಕೆಲಸವನ್ನು ಮುಗಿಸಬೇಕು ಎಂಬ ಗೊಂದಲ ಇರುತ್ತದೆ. ಇದರಿಂದ ಅವರು ಕೆಲಸವನ್ನು ಪೂರ್ತಿ ಮಾಡುವುದಿಲ್ಲ. ಎಲ್ಲಾ ಅರ್ದಂಬರ್ಧ ಮಾಡುತ್ತಾರೆ. ಉದಾಹರಣೆಗೆ ನೀವು ಬೆಳಿಗ್ಗೆ ಬೇಗ ಏಳಬೇಕು, ಕಾರ್ ವಾಷಿಂಗ್ ಮಾಡಬೇಕು, ಬಟ್ಟೆ ವಾಷಿಂಗ್ ಮಾಡಬೇಕು, ನಂತರ ಸ್ವಲ್ಪ ಲ್ಯಾಪ್‌ಟಾಪ್ ವರ್ಕ್ ಮಾಡಬೇಕು ನಂತರ ಆಫೀಸಿಗೆ ತೆರಳಬೇಕು‌. ಈಗ ನೀವೇನ್ ಮಾಡ್ತೀರ ವ್ಯಾಯಾಮ ಮಾಡಿ ಕಾರ್ ವಾಷಿಂಗ್ ಮಾಡ್ತೀರ , ನಂತರ ಬಟ್ಟೆ ಒಗೆಯಲು ಮನಸ್ಸು ಆಗುವುದಿಲ್ಲ. ನಂತರ ಲ್ಯಾಪ್ ಟಾಪ್ ಕೆಲಸ ಮಾಡಿ ಆಫಿಸ್ ಗೆ ಹೋಗ್ತೀರ! ಇದರಿಂದ ಬಟ್ಟೆ ಒಗೆಯುವ ಕೆಲಸ ಪೆಂಡಿಂಗ್ ಉಳಿಯುತ್ತೆ. ಅದರ ಬದಲಿಗೆ ಕಾರ್ ವಾಷಿಂಗ್ ಮತ್ತು ಬಟ್ಟೆ ಒಗೆಯುವ ಕೆಲಸ ಎರಡೂ ಒಂದೇ ಎಂದು ಅದನ್ನು ವಿಂಗಡನೆ ಮಾಡಿ. ಇದರಿಂದಾಗಿ ಕಾರ್ ವಾಷಿಂಗ್ ಮತ್ತು ಬಟ್ಟೆ ಕೆಲಸ ಪೂರ್ತಿ ಮಾಡಬಹುದು.

ಒಂದೇ ಬಾರಿಗೆ ಎರಡೆರಡು ಕೆಲಸವನ್ನು ಮಾಡಬಾರದು. ನೀವು ಮೊಬೈಲ್ ನಲ್ಲಿ ನಾಲ್ಕೈದು ಅಪ್ಲಿಕೇಶನ್ ನ ಒಂದೇ ಬಾರಿಗೆ ಯೂಸ್ ಮಾಡ್ತಿದ್ರೆ ಫೋನ್ ಹ್ಯಾಂಗ್ ಆಗುತ್ತದೆ. ಆದುದರಿಂದ ನೀವು ಒಂದೇ ಕೆಲಸವನ್ನು ಒಂದೆ ಬಾರಿಗೆ ಮಾಡಿ. ಇದರಿಂದ ಏಕಾಗ್ರತೆ ಒಂದೇ ಕಡೆ ಇರುತ್ತೆ.

ದೊಡ್ಡ ಪ್ರಮಾಣದಕೆಲಸವನ್ನು ನೀವು ಸಣ್ಣ ಸಣ್ಣ ಭಾಗಗಳಾಗಿ ವಿಂಗಡಿಸಿ ಕೆಲಸ ಮಾಡಿ. ಆಗ ನಿಮಗೆ ಸುಲಭ ಎನ್ನಿಸುತ್ತೆ. ಉದಾಹರಣೆಗೆ ಎರಡು ಗಂಟೆಯ ಕೆಲಸವನ್ನು ನೀವು ನಾಲ್ಕು ಭಾಗಗಳಲ್ಲಿ ವಿಂಗಡಿಸಿ. ಒಂದು ಭಾಗದ ಕೆಲಸ ನಿಮ್ಮ ಟಾರ್ಗೆಟ್‌ ಆಗಿರುತ್ತದೆ. ಅದನ್ನು ಮುಗಿಸುವವರೆಗೂ ಏಳಬೇಡಿ‌. ಅದನ್ನು ಮುಗಿಸಿದ ನಂತರ ಹತ್ತು ನಿಮಿಷ ರೆಸ್ಟ್ ತಗೊಳಿ‌. ನಂತರ ಉಳಿದ ಭಾಗ ಪೂರ್ತಿಗೊಳಿಸಿ.

ನೀವು ಕೆಲಸ ಮಾಡುವ ಜಾಗವನ್ನು ಅಥವಾ ಮನೆಯಲ್ಲಿ ಕೆಲಸ ಮಾಡುತ್ತಿದ್ದರೆ ಅದನ್ನು ನೀಟಾಗಿಡಿ. ವಸ್ತುಗಳನ್ನು ಕ್ರಮಬದ್ದವಾಗಿ ಜೋಡಿಸಿ. ಇದರಿಂದ ನಿಮಗೆ ಕೆಲಸ ಮಾಡುವ ಉತ್ಸಾಹ ಬರುತ್ತದೆ.

ನೀವು ಯಾವುದೇ ಕೆಲಸವನ್ನು ಪೂರ್ತಿಗೊಳಿಸಬೇಕೆಂದಿದ್ದರೆ ಅದನ್ನು ನೀವು ಮೊದಲು ಪ್ರಾರಂಭಿಸಬೇಕು. ಬರೀ ಮುಗಿಸುವ ಯೋಚನೆ ಇದ್ದರೆ ಸಾಲದು. ಪ್ರಾರಂಬಿಸಿದರೆ ಅದರ ಮೇಲೆ ಮಗ್ನರಾಗ್ತೀರ. ನಂತರ ಮುಗಿಸುವ ಉತ್ಸಾಹ ಬರುತ್ತದೆ, ಇವಿಷ್ಟು ಟೆಕ್ನಿಕ್ ಬಳಸಿ ಗೆಲ್ಲಿರಿ. ಆಧಾರ – cgn creativity

LEAVE A REPLY

Please enter your comment!
Please enter your name here