ಹದ್ದು, ಗೂಬೇ ಅಥವಾ ಕಾಗೆ ಮನೆಯೊಳಗೆ ಬಂದರೆ ಏನಾಗುತ್ತೆ ಗೊತ್ತಾ..!! ನಮ್ಮ ಧರ್ಮದ ಅರ್ಥ ಪೂರ್ಣ ವಿಶ್ಲೇಷಣೆ.

0
6075

ಹದ್ದು ಗೂಬೆ ಮತ್ತು ಕಾಗೆ ಎಂದರೆ ಮನಸ್ಸಿಗೆ ಸ್ವಲ್ಪ ಹಿಂಸೆ ಆಗುತ್ತದೆ, ಕಾರಣ ಗೂಬೆ ವಿಚಿತ್ರವಾಗಿ ಹೋಗುವುದನ್ನು ನಾವು ಕೇಳಿರುತ್ತೇವೆ, ಹದ್ದು ಕುಕ್ಕಿ ತಿನ್ನುವ ಅದನ್ನು ನಾವು ಕಣ್ಣಾರೆ ನೋಡಿರುತ್ತೇವೆ, ಇನ್ನು ಕಾಗೆ ಎಂದರೆ ಸತ್ತಿರುವ ವ್ಯಕ್ತಿಗಳ ಪಿಂಡ ತಿನ್ನುತ್ತದೆ ಎನ್ನುವ ಭಾವ ಬಲವಾಗಿ ಮನಸ್ಸಿನಲ್ಲಿ ಬೇರು ಬಿಟ್ಟಿರುವುದರಿಂದ ಮನಸ್ಸಿಗೆ ಕಸಿವಿಸಿ ಎನಿಸುತ್ತದೆ, ಹೀಗಾಗಿ ಇಂತಹ ಪಕ್ಷಿಗಳು ಮನೆಯ ಒಳಗೆ ಪ್ರವೇಶ ಮಾಡಿದರೆ ಏನಾದರೂ ಕಷ್ಟ, ನಷ್ಟ ಅಥವಾ ಅಶುಭ ನಡೆಯುತ್ತದೆ ಎನ್ನುವ ನಂಬಿಕೆ ನಮ್ಮ ಪ್ರಾಚೀನ ಕಾಲದಿಂದ ಜನರು ನಂಬಿಕೊಂಡು ಬಂದಿದ್ದಾರೆ.

ಮನಸ್ಸು ವಿಕಾರ, ಕಿನ್ನತೆಗೆ ಒಳಗಾಗುವುದರಿಂದ ಒಂದು ಪರಿಹಾರ ಬೇಕು ಅಲ್ಲವೇ ? ಅಂತಹ ಒಂದು ಪರಿಹಾರ ಎಂದರೆ ಕೆಲವು ದಿನಗಳ ಕಾಲ ಆ ಮನೆ ಬಿಟ್ಟು ಬೇರೆ ಕಡೆ ವಾಸ ಮಾಡುವುದರಿಂದ, ಮನಸ್ಸು ಬೇರೆ ಕಡೆಗೆ ಹೊರಳಿಸಿ ಭಯ ಎನ್ನುವ ತೀವ್ರತೆ ಕಡಿಮೆ ಆಗುತ್ತದೆ, ಅಶುಭ ಹೋಗಲಾಡಿಸಲು ಶುಭ ಎನಿಸುವ ಪೂಜೆ, ಪುನಸ್ಕಾರ ಮಾಡಿಸುವುದು ಸರಿ ಎಂದು ಜನರು ಭಾವಿಸಿ ಮನಸ್ಸು ಹಗುರಾಗಲು ಪೂಜೆ, ಪುನಸ್ಕಾರ ಅಥವಾ ಹೋಮ ಮಾಡಿಸಿ ಪುನಹ ಗೃಹಪ್ರವೇಶ ಮಾಡುತ್ತಾರೆ ಆಗ ಮನಸ್ಸು ತಿಳಿಯಾಗುತ್ತದೆ.

ವಾಸ್ತವಿಕ ಅಥವಾ ವೈಜ್ಞಾನಿಕವಾಗಿ ಯೋಚನೆ ಮಾಡಿದರೆ ಯಾವ ಸಮಸ್ಯೆಗಳು ಕಾಡಬಹುದು?.

ನಮ್ಮ ಮನಸ್ಸಿನಲ್ಲಿ ಕೆಲವು ಪ್ರಾಣಿಗಳ ಬಗ್ಗೆ ನಕಾರಾತ್ಮಕ ಭಾವನೆ ಇದೆ, ಇದರಿಂದಲೇ ನಾವು ಅಂತಹ ಪ್ರಾಣಿ ಪಕ್ಷಿಗಳನ್ನು ನಮ್ಮ ಮನೆಯ ಒಳಗೆ ಬಿಟ್ಟುಕೊಳ್ಳುವುದಿಲ್ಲ, ಅಕಸ್ಮಾತ್ ಬಂದರೆ ಹೆದರಿ ಕಂಗಾಲಾಗುತ್ತೇವೆ, ಆಗ ಮನಸ್ಸು ಕೆಟ್ಟ ಸಂಗತಿಗಳನ್ನು ಪದೇ ಪದೇ ಯೋಚನೆ ಮಾಡಿ ಕೊರಗಳು ಶುರುಮಾಡುತ್ತದೆ, ಮನಸ್ಸಲ್ಲಿ ಇರುವ ಅನುಮಾನಗಳು ಹೋಗಲೇ ಬೇಕು ಇಲ್ಲದಿದ್ದರೆ ಮನಸ್ಸು ನೆಮ್ಮದಿಯಾಗಿ ಇರುವುದಿಲ್ಲ.

ಹೀಗಾಗಿ ನಾವು ನಮ್ಮ ಕೆಟ್ಟ, ಭಯದ ಭಾವನೆಯನ್ನು ತಿಳಿಗೊಳಿಸಿ ಕೊಳ್ಳಲು ಪ್ರಾಚೀನ ಕಾಲದಿಂದಲೂ ಹರಿದು ಬಂದಿರುವ ನಂಬಿಕೆಗಳನ್ನು ಮನಸ್ಸಿನಿಂದ ಹೊರ ಹಾಕಲು ಸ್ವಲ್ಪ ಕಷ್ಟ ಆದರೂ ಸರಿಯೇ ಮಾಡುವುದು ಸೂಕ್ತ, ಆಗಲೇ ನಾವು ನಿರಾಳವಾಗಿ ಇರಲು ಸಾಧ್ಯ, ಹೀಗೆ ನಾವು ವಾಸ್ತವಿಕತೆಯಲ್ಲಿ ಸಹ ಭಾವನಾತ್ಮಕತೆ ಬೆರೆಸಿಕೊಂಡು ಬದುಕು ಸಾಗಿಸಬೇಕು ಆಗಲಿ ನಮ್ಮ ಜೀವನ ಸುಖ ಸಮೃದ್ಧಿಯಿಂದ ಇರಲು ಸಾಧ್ಯ.

ವೈಚಾರಿಕತೆ : ಗೂಬೆ, ಕಾಗೆ ಎಂದರೆ ಸಾಕು ಮನಸ್ಸಿನಲ್ಲಿ ಒಂದು ಬಗೆಯ ಭಯ ಎನ್ನುವುದರಲ್ಲಿ ಸಂದೇಹವಿಲ್ಲ, ಹೀಗಾಗಿ ನಾವು ದೃಢವಾಗಿ ಆತ್ಮಬಲದಿಂದ ಇದ್ದರೆ ಯಾವುದೇ ಬಗೆಯ ನೋವುಗಳು ನಮ್ಮನ್ನು ಕಾಡುವುದಿಲ್ಲ, ಆದರೆ ಮನಸ್ಸು ಅಂಜಿಕೆ ಹಾಗು ಭಯಕ್ಕೆ ಒಳಗಾಗುವುದರಿಂದ ನಡೆದ ಘಟನೆಗಳ ಬಗ್ಗೆ ಪದೇ ಪದೇ ನೆನಪು ಮಾಡಿಕೊಳ್ಳಬಾರದು, ಹೀಗೆ ನೆನಪು ಮಾಡಿ ಕೊರುಗುವುದಕ್ಕಿಂತ ಪೂಜೆ ಪುನಸ್ಕಾರ ಮಾಡುವುದು ಲೇಸು, ಹಾಗೂ ಸ್ವಲ್ಪ ದಿನ ಪ್ರವಾಸದ ನೆಪವೊಡ್ಡಿ ಮನಸ್ಸಿಗೆ ಉಲ್ಲಾಸ ತರುವಂತಹ ಜಾಗಗಳಿಗೆ ಪ್ರವಾಸಕ್ಕೆ ಹೋಗುವುದು ಒಳ್ಳೆಯದು.

ನಮ್ಮ ಮನಸ್ಸು ಸಕಾರಾತ್ಮಕವಾಗಿ ಬಲವಾಗಿದ್ದರೆ ಯಾವ ಘಟನೆಗಳು ನಮ್ಮನ್ನು ಕುಗ್ಗಿಸಲು ಅಥವಾ ದುಃಖಿಸಲು ಸಾಧ್ಯವೇ ಇಲ್ಲ, ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಮರೆಯದೆ ನಮ್ಮ ಕಾಮೆಂಟ್ ಬಾಕ್ಸಲ್ಲಿ ಬರೆದು ತಿಳಿಸಿ.

LEAVE A REPLY

Please enter your comment!
Please enter your name here