ಎಚ್ಚರ ಗಣಪತಿ ವಿಗ್ರಹದ ಹಿಂಭಾಗವನ್ನು ನೋಡ ಬಾರದು..!! ನೋಡಿದರೆ ಏನಾಗುತ್ತೆ ಗೊತ್ತಾ..?

0
2612

ಗಣಪತಿ ಎಲ್ಲರಿಗೂ ಅತ್ಯಂತ ಪ್ರಿಯವಾದ ದೇವರು, ಗಜಮುಖನಿಗೆ ಮೊದಲ ಪೂಜೆಯನ್ನು ಸಲ್ಲಿಸಿ ಆತನಿಗೆ ಗೌರವವನ್ನು ಸೂಚಿಸುತ್ತವೆ, ಆದರೆ ಗಣಪತಿ ವಿಗ್ರಹದ ಹಿಂದೆಯ ಭಾಗವನ್ನು ಮಾತ್ರ ಯಾವುದೇ ಕಾರಣಕ್ಕೂ ನೋಡಬಾರದು ಎಂದು ಶಾಸ್ತ್ರಗಳಲ್ಲಿ ಉಲ್ಲೇಖವಾಗಿವೆ ಹಾಗೂ ಸಂಪೂರ್ಣವಾಗಿ ನಿಷೇಧವನ್ನು ಹೇಳಲಾಗಿದೆ, ಹಾಗಾದ್ರೆ ಗಣಪತಿಯ ಹಿಂದಿನ ಭಾಗ ನೋಡಿದರೆ ಏನಾಗುತ್ತೆ ಯಾಕೆ ನೋಡಬಾರದು ಎಂಬುದರ ಬಗ್ಗೆ ಇಂದು ತಿಳಿಸುತ್ತೇವೆ.

ಗಣಪತಿಯ ದೇಹದ ಪ್ರತಿ ಅಂಗವು ವಿಶಿಷ್ಟವಾದುದು, ಪ್ರತಿಯೊಂದು ಅಂಗಗಳಿಗೂ ಬಹಳಷ್ಟು ಅರ್ಥ ಇದೆ, ಉದಾಹರಣೆಗೆ ಗಣಪತಿಯ ಆನೆಯ ತಲೆಯು ನಂಬಿಕೆ, ಬುದ್ಧಿವಂತಿಕೆ ಹಾಗೂ ವಿವೇಚನೆಯ ಮೂಲ ಎಂದು ಹೇಳಲಾಗುತ್ತದೆ, ಹಾಗೂ ಗಣಪತಿಯ ದಂತ ಸಾಮರ್ಥ್ಯವನ್ನು ಸೂಚಿಸುತ್ತದೆ, ಗಜಮುಖನ ದೊಡ್ಡದಾದ ಕಿವಿಗಳು ವಿವೇಕದ ಸಂಕೇತವಾಗಿದೆ, ಹಾಗೂ ಗಜಮುಖನ ಸೊಂಡಿಲು ಸತ್ಯ ಮತ್ತು ಮಿಥ್ಯ ಗಳ ನಡುವಿನ ವ್ಯತ್ಯಾಸವನ್ನು ಸೂಚಿಸುತ್ತದೆ.

ಈ ರೀತಿಯಲ್ಲಿ ಗಜಮುಖನ ದೇಹದ ವಿನ್ಯಾಸ ಹಾಗೂ ಪ್ರತಿಯೊಂದು ಅಂಗವೂ ವೈಶಿಷ್ಟ್ಯವನ್ನು ಹೊಂದಿದೆ ಮತ್ತು ಜೀವನ ಹಾಗೂ ಬ್ರಹ್ಮಾಂಡದ ಅಂಶಗಳನ್ನು ಒಳಗೊಂಡಿದೆ ಆದರೆ ಗಜಮುಖನ ಹಿಂದಿ ಮಾತ್ರ ಯಾವುದೇ ಕಾರಣಕ್ಕೂ ನೋಡ ಬಾರದು.

ಗಣಪನ ಹಿಂಭಾಗದಲ್ಲಿ ದಾರಿದ್ರ್ಯ ನೆಲೆಸಿದೆ, ಇಂತಹ ಶ್ರೀಮಂತ ವ್ಯಕ್ತಿಯೇ ಆಗಲಿ, ಯಾವುದೇ ಸಮಸ್ಯೆಗಳಿಲ್ಲದೆ ಸುಖವಾಗಿದ್ದ ಮನುಷ್ಯನೇ ಆಗಲಿ ಗಣಪತಿಯ ಹಿಂಭಾಗದ ದರ್ಶನ ಮಾಡಿದ ತಕ್ಷಣ ದಾರಿದ್ರ್ಯ ಅವನ ಬೆನ್ನೇರಿ ಹಲವು ಪ್ರಶ್ನೆಗಳಿಗೆ ಸಿಲುಕಿ ನಲುಗಲು ಪ್ರಾರಂಭಿಸುತ್ತಾನೆ, ನೀವೇನಾದರೂ ಗೊತ್ತಿಲ್ಲದೆ ಗಜಮುಖನ ಹಿಂಭಾಗವನ್ನು ನೋಡಿದರೆ ಗಣಪನಿಗೆ ಕ್ಷಮೆ ಕೋರಿ ಪ್ರಾರ್ಥನೆ ಮಾಡಿದರೆ ಎಲ್ಲಾ ಪಾಪಗಳು ಪರಿಹಾರವಾಗಲಿದೆ ಎಂದು ಶಾಸ್ತ್ರ ಹೇಳುತ್ತದೆ.

LEAVE A REPLY

Please enter your comment!
Please enter your name here