ದಬಾಂಗ್ ಮೂರನೇ ಆವೃತ್ತಿ ಇಂದು ಬಿಡುಗಡೆಯಾಗಿದ್ದು ಇಷ್ಟು ದಿನ ಕಾಯುತ್ತಿದ್ದ ಸಲ್ಮಾನ್ ಖಾನ್ ಹಾಗೂ ಸುದೀಪ್ ಅವರ ಅಭಿಮಾನಿಗಳು ಚಿತ್ರಮಂದಿರದ ಕಡೆಗೆ ಗಮನ ನೀಡುತ್ತಿದ್ದಾರೆ, ಎಲ್ಲೆಡೆ ದಬಾಂಗ್ 3 ಸಿನಿಮಾ ಉತ್ತಮ ಪ್ರಶಂಸೆ ಪಡೆಯುತ್ತಿದೆ, ಕೆಲವರಿಗೆ ಇಂಟರ್ವಲ್ ಮುಂಚಿನ ಸಿನಿಮಾ ಇಷ್ಟವಾದರೆ ಇನ್ನು ಕೆಲವರಿಗೆ ಇಂಟರ್ವಲ್ ನಂತರ ಸಿನಿಮಾ ಇಷ್ಟವಾಗಿದೆ, ಸಾಮಾಜಿಕ ಜಾಲತಾಣಗಳಲ್ಲಿ ಹಲವು ಪಬ್ಲಿಕ್ ರಿವ್ಯೂ ವಿಡಿಯೋ ಹರಿದಾಡುತ್ತಿದ್ದು ಅದರಲ್ಲಿ ಒಂದು ಕಿಚ್ಚ ಸುದೀಪ್ ಅವರ ಅಭಿಮಾನಿಗಳಿಗೆ ಕೋಪವನ್ನು ಬರುವಂತೆ ಮಾಡಿದೆ.
ದಬಾಂಗ್ ಸಿನಿಮಾ ನೋಡಿ ಹೊರಬಂದ ಪ್ರೇಕ್ಷಕನನ್ನು ಸಿನಿಮಾ ಹೇಗಿದೆ ಎಂಬ ಪ್ರಶ್ನೆ ಕೇಳಿದಾಗ ಸಿನಿಮಾ ತುಂಬಾ ಚೆನ್ನಾಗಿದೆ ಸಲ್ಮಾನ್ ಖಾನ್ ಅವರು ಉತ್ತಮವಾಗಿ ನಟಿಸಿದ್ದಾರೆ ಕಥೆ ತುಂಬಾ ಚೆನ್ನಾಗಿದೆ ಎಂಬ ವಿಶ್ಲೇಷಣೆಯನ್ನು ನೀಡಿದ್ದಾನೆ, ನಂತರ ಕನ್ನಡದ ಸೂಪರ್ ಸ್ಟಾರ್ ಸುದೀಪ್ ಅವರು ವಿಲನ್ ಪಾತ್ರದಲ್ಲಿ ಅಭಿನಯಿಸಿರುವುದು ಹೇಗಿದೆ ಎಂದು ಕೇಳಿದಾಗ ಅವರ ಬಗ್ಗೆ ಮಾತನಾಡಬೇಡಿ ಅವರು ಚುತ್ಯಾ ಎಂದು ಹೇಳುವ ಮುಖಾಂತರ ಕಿಚ್ಚನ ಅಭಿಮಾನಿಗಳ ಮನಸ್ಸಿನಲ್ಲಿ ಕಿಚ್ಚು ಹಬ್ಬಿಸಿದ್ದಾನೆ.
ಕಿಚ್ಚ ಸುದೀಪ್ ಅವರಿಗೆ ದೇಶದಾದ್ಯಂತ ಉತ್ತಮ ಅಭಿಮಾನಿ ಬಳಗವಿದೆ, ಹಾಗೂ ಅವರದೇ ಆದ ಗೌರವ ಮತ್ತು ಪ್ರತಿಷ್ಠೆ ಇದೆ, ಇಂತಹ ಅವಹೇಳನಕಾರಿ ವಿಡಿಯೋಗಳನ್ನು ಸಾಮಾಜಿಕ ಚಾನೆಲ್ಗಳಲ್ಲಿ ಅಪ್ಲೋಡ್ ಮಾಡುವುದು ಎಷ್ಟರ ಮಟ್ಟಿಗೆ ಸರಿ, ಈ ವಿಡಿಯೋ ನೀವು ಇನ್ನೂ ನೋಡಿಲ್ಲ ಅಂದರೆ ಈ ಕೆಳಗೆ ಅದರ ಲಿಂಕ್ ನೀಡಲಾಗಿದೆ, ಈ ವಿಡಿಯೋ ಒಮ್ಮೆ ನೀವು ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಮರೆಯದೆ ನಮ್ಮ ಕಾಮೆಂಟ್ ಬಾಕ್ಸಲ್ಲಿ ತಿಳಿಸಿ.