ಮನುಷ್ಯನಿಗೆ ನಿದ್ದೆ ಅನ್ನೋದು ತುಂಬ ಮಹತ್ವ ಯಾಕೆ ಅಂದ್ರೆ ಮನುಷ್ಯ ನಿದ್ದೆ ಸರಿಯಾಗಿ ಮಾಡದಿದ್ದರೆ ಹಲವು ರೀತಿಯ ಖಾಯಿಲೆಗಳು ಮತ್ತು ಹಲವು ಮಾನಸಿಕ ತೊಂದರೆಗಳಾಗುವ ಸಂಭವ ಹೆಚ್ಚು. ಹೀಗಿರುವ ಕಡಿಮೆ ನಿದ್ದೆ ಮಾಡಿದ್ರೆ ಏನ್ ಆಗುತ್ತೆ ಅನ್ನೋದನ್ನ ಹೊಸ ಸಂಶೋಧನೆ ಬಹಿರಂಗ ಪಡಿಸಿದೆ ನೋಡಿ.
1,615 ವಯಸ್ಕರನ್ನು ಸಮೀಕ್ಷೆಗೆ ಒಳಪಡಿಸಲಾಗಿದ್ದು, PLOS ONE ಜರ್ನಲ್ ನಲ್ಲಿ ಈ ಅಧ್ಯಯನ ವರದಿ ವಿಸ್ತೃತವಾಗಿ ಪ್ರಕಟಗೊಂಡಿದೆ, ರಾತ್ರಿ ಸಮಯದಲ್ಲಿ ನಿದ್ದೆ ಕಡಿಮೆಯಾದರೆ ಸ್ಥೂಲಕಾಯ ಹಾಗೂ ಮಧುಮೇಹ ಬರುವ ಸಾಧ್ಯತೆ ಹೆಚ್ಚು ಎಂದು ಹೊಸ ಅಧ್ಯಯನ ವರದಿ ತಿಳಿಸಿದೆ. ರಾತ್ರಿ ವೇಳೆ ಕೇವಲ 6 ಗಂಟೆ ನಿದ್ದೆ ಮಾಡುವವರ ಸೊಂಟದ ಸುತ್ತಳತೆ 9 ಗಂಟೆಗಳ ಕಾಲ ನಿದ್ದೆ ಮಾಡುವವರಿಗಿಂತ 3 ಸೆಂಟಿ ಮೀಟರ್ ಹೆಚ್ಚಿರುತ್ತದೆ ಎಂದು ಸಂಶೋಧನಾ ವರದಿ ಬಹಿರಂಗ ಪಡಿಸಿದೆ.
ನಿಮ್ಮ ನಿದ್ದೆ ಕಡಿಮೆಯಾದರೆ ಮಧುಮೇಹ ಖಾಯಿಲೆ ಬರುವ ಸಂಭವ ಹೆಚ್ಚಿದೆ ಎಂದು ಈ ಸಂಶೋಧನೆ ತಿಳಿಸಿದೆ. 1980 ರಿಂದ ವಿಶ್ವಾದ್ಯಂತ ಇರುವ ಸ್ಥೂಲಕಾಯದ ಜನರ ಸಂಖ್ಯೆ ಹೆಚ್ಚಿದೆ. ಸ್ಥೂಲಕಾಯದಿಂದಾಗಿ ಟೈಪ್2 ಮಧುಮೇಹ ಬರುವ ಸಾಧ್ಯತೆ ಇದೆ ಎಂದು ಯುಕೆಯ ಲೀಡ್ಸ್ ವಿವಿಯ ಗ್ರೆಗ್ ಪಾಟರ್ ತಿಳಿಸಿದ್ದಾರೆ.
ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.