ಆರೋಗ್ಯವೇ ಮಹಾಭಾಗ್ಯ, ಆರೋಗ್ಯ ಹೊಂದಿದ್ದರೆ ಸಾಕು ಮಿಕ್ಕಿದ್ದೆಲ್ಲ ತಾನಾಗಿಯೇ ಕೈ ಸೇರುತ್ತದೆ, ಎಂಬುವ ಆರೋಗ್ಯ ಸಂಬಂಧಿ ಹಲವು ನೀತಿ ಮಾತುಗಳನ್ನು ನಮ್ಮ ಹಿರಿಯರ ಬಾಯಲ್ಲಿ ನಾವು ಕೇಳಿರುತ್ತೇವೆ, ಮೊದಲೆಲ್ಲಾ ನಮ್ಮ ಪೂರ್ವಿಕರು ನೂರು ವರ್ಷ ಆಯಸ್ಸು ಅನ್ನು ಸಂಪೂರ್ಣವಾಗಿ ಜೀವಿಸುತ್ತಿದ್ದರು, ಕಾಲ ಬದಲಾಗಿದೆ ಆಧುನಿಕತೆ ನಮ್ಮನ್ನು ಆವರಿಸಿ ಬದುಕನ್ನು ಸುಲಭ ಮಾಡಿದೆ, ಇದೇ ಕಾರಣಕ್ಕಾಗಿಯೇ ಏನೋ ಮನುಷ್ಯನ ಆಯಸ್ಸು ಅರ್ಧದಷ್ಟು ಕಡಿಮೆಯಾಗಿದೆ.
ಇಂತಹ ತೀಕ್ಷ್ಣ ಚರ್ಚೆಯನ್ನು ಮಾಡುವ ಬದಲು ನಿಮಗೆ ಚಿಕ್ಕಬಳ್ಳಾಪುರದ ಒಂದು ಅಜ್ಜಿಯ ಪ್ರಸ್ತುತ ಕಥೆ ಹೇಳಬಯಸುತ್ತೇವೆ, ಅಜ್ಜಿ ನಿನ್ನೆ ಮಕ್ಕಳು, ಮೊಮ್ಮಕ್ಕಳು ಹಾಗೂ ಮರಿ ಮೊಮ್ಮಕ್ಕಳ ಜೊತೆಯಲ್ಲಿ ತನ್ನ ನೂರ ಒಂದನೇ ವರ್ಷದ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಂಡಿದ್ದಾರೆ.
ಮನೆಯಲ್ಲಿ ಈ ಅಜ್ಜಿಯ ಹುಟ್ಟುಹಬ್ಬದ ಸಂಭ್ರಮ, ಮನೆಯ ತುಂಬಲ್ಲ ಜನರು ಮಕ್ಕಳು ಹಾಗೂ ಮೊಮ್ಮಕ್ಕಳು, ನೀವು ನಂಬದಿರಬಹುದು ನೂರಕ್ಕೂ ಅಧಿಕ ಒಂದೇ ಕುಡಿಯ ಬಳ್ಳಿಗಳು ಮನೆಯಲ್ಲಿ ಅಜ್ಜಿಯ ಹುಟ್ಟುಹಬ್ಬವನ್ನು ಆಚರಣೆ ಮಾಡಿದರು, ನೂರಕ್ಕೂ ಅಧಿಕ ಮಕ್ಕಳು, ಮೊಮ್ಮಕ್ಕಳು ಹಾಗೂ ಮರಿ ಮಕ್ಕಳಿಗೆ ತಮ್ಮ ಅಜ್ಜಿಯನ್ನು ನೋಡುವ ಸೌಭಾಗ್ಯ ದೊರಕುತ್ತದೆಯೇ, ಬಹಳಷ್ಟು ಜನರಿಗೆ ಇದು ಕಷ್ಟ ಸಾಧ್ಯ.
ಚಿಕ್ಕಬಳ್ಳಾಪುರ ದಲ್ಲಿರುವ ಗಂಗಮ್ಮ ಮಿದ್ದೆ ಎನ್ನುವ ಬಡಾವಣೆಯೊಂದರಲ್ಲಿ ಮುನಿಯಮ್ಮ ಎಂಬ ಹೆಸರಿನ ಅಜ್ಜಿ 101 ವರ್ಷ ದಾಟಿದರೂ ಆರೋಗ್ಯವಾಗಿದ್ದಾರೆ, ಕಣ್ಣುಗಳು ತುಂಬಾ ಚೆನ್ನಾಗಿ ಕಾಣುತ್ತವೆ, ಕಿವಿಗಳು ತುಂಬಾ ಚೆನ್ನಾಗಿ ಕೇಳುತ್ತವೆ ಈ ಅಜ್ಜಿಯ ದೇಹದಲ್ಲಿ ಯಾವ ಅಂಗಾಂಗಗಳಿಗೂ ಯಾವುದೇ ಸಮಸ್ಯೆ ಇಲ್ಲ, ಈಗಿನ ನವ ಯುವತಿಯರು ಈ ಅಜ್ಜಿಯ ಆರೋಗ್ಯ ನೋಡಿ ನಾಚಿ ಕೊಳ್ಳಬೇಕು ಹಾಗೆ ತಮ್ಮ ಆರೋಗ್ಯವನ್ನು ಕಾಪಾಡಿಕೊಂಡಿದ್ದಾರೆ.
101 ನೇ ವರ್ಷದ ಹುಟ್ಟು ಹಬ್ಬವನ್ನು ಕುಟುಂಬದವರೆಲ್ಲ ಸೇರಿ ತಮ್ಮ ಅನುಕೂಲಕ್ಕೆ ತಕ್ಕಂತೆ ಭರ್ಜರಿಯಾಗಿಯೇ ಆಚರಣೆ ಮಾಡಿದ್ದು, ಕುಟುಂಬದವರೆಲ್ಲರಿಗೂ ಭರ್ಜರಿ ಬಾಡೂಟ ಹಾಕಿಸಿದ್ದಾರೆ, ಮುನಿಯಮ್ಮ ಅವರಿಗೆ ಇದ್ದದ್ದು ನಾಲ್ಕು ಗಂಡು ಮಕ್ಕಳು, ಪ್ರತಿ ಮಕ್ಕಳಿಗೂ ತಲಾ ನಾಲ್ಕು ಮೊಮ್ಮಕ್ಕಳು ಅಂದರೆ ಒಟ್ಟು 16ಜನ ಮೊಮ್ಮಕ್ಕಳು, ಹಾಗೂ ಇಪ್ಪತ್ತಕ್ಕೂ ಹೆಚ್ಚು ಮರಿಮಕ್ಕಳು ಇನ್ನು ಅಜ್ಜಿಯ ಹುಟ್ಟುಹಬ್ಬಕ್ಕೆ ಎಲ್ಲರೂ ಆಗಮಿಸಿದ್ದು ವಿಶೇಷ.