ನಟ ಹುಚ್ಚ ವೆಂಕಟ್ ಅವರ ಮೇಲೆ ಶ್ರೀರಂಗಪಟ್ಟಣದಲ್ಲಿ ಕೆಲವು ಯುವಕರ ಗುಂಪಿನಿಂದ ಹಲ್ಲೆ ಯಾಗಿರುವ ಬಗ್ಗೆ ಮಾಹಿತಿ ನೀಡಿದ್ದೆವು ಆದರೆ ಅದರಲ್ಲಿ ಯಾರದು ತಪ್ಪು ಯಾರದು ಸರಿ ಅಥವಾ ಅಲ್ಲಿ ನಿಜವಾಗ್ಲೂ ಏನಾಯಿತು, ಎಂಬ ಇತ್ಯಾದಿ ಮಾಹಿತಿಗಳು ಇನ್ನೂ ಲಭ್ಯವಾಗಿರಲಿಲ್ಲ ಆದರೆ ಇಂದು ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಿದ್ದೇವೆ ಹಾಗು ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಈ ಹುಡುಗರ ವಿರುದ್ಧ ದೂರು ದಾಖಲಾಗಿದ್ದು ಅದರಲ್ಲಿ ಏನಿದೆ ಹಾಗೂ ಈ ದೂರನ್ನು ನೀಡಿತು ಯಾರು ಒಂದು ವಿಶ್ಲೇಷಣೆ ನಿಮ್ಮ ಮುಂದೆ.
ಈ ಪ್ರಕರಣ ವಿರುದ್ಧ ದೂರು ದಾಖಲಿಸಿರುವ ಪ್ರತಿಯೊಂದನ್ನು ನಟ ಜಗ್ಗೇಶ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ ಬುಧವಾರ ನಡೆದ ಘಟನೆಯ ಪ್ರತ್ಯಕ್ಷ ಸಾಕ್ಷಿ ಒಬ್ಬರೇ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ, ಮತ್ತು ಅದರಲ್ಲಿ ಘಟನೆಯ ಬಗ್ಗೆ ಸಂಪೂರ್ಣ ವಿವರ ನೀಡಿದ್ದಾರೆ, ಪ್ರತ್ಯಕ್ಷ ಸಾಕ್ಷಿ ನೀಡಿರುವ ದೂರಿನಲ್ಲಿ ಏನಿದೆ ?
ಬುಧವಾರ ಮಂಡ್ಯ ಜಿಲ್ಲೆಯ ಉಮ್ಮಡ ಹಳ್ಳಿ ಗೇಟ್ ಬಳಿಯಿರುವ ಕೂರ್ಗ್ ಟೀ ಅಂಗಡಿ ಬಳಿ ಹುಚ್ಚ ವೆಂಕಟ್ ಅವರು ಕಾರು ನಿಲ್ಲಿಸಿ ಐದು ಬಾರಿ ಟಿ ಕುಡಿದರಂತೆ, ನಂತರ ತಮ್ಮ ಕಾರಿಗೆ ತಾವು ಒರಗಿಕೊಂಡು ನಿಂತಿದ್ದರಂತೆ, ಅದನ್ನು ನೋಡಿದ ಸಾರ್ವಜನಿಕರು ಅವರ ಫೋಟೋ ತೆಗೆಯುತ್ತಿದ್ದರಂತೆ, ಅದೇ ಸಮಯದಲ್ಲಿ ಸಂಜೆ 7 ಗಂಟೆ ವೇಳೆಗೆ ಯುವಕರ ಗುಂಪೊಂದು ಬಂದಿದೆ ಹಾಗೂ ಲೋ ಹುಚ್ಚ ಟೀ ಅಂಗಡಿ ಬಳಿ ಯಾಕೆ ನಿಂತಿದ್ದೀಯ ಎಂದು ಹುಚ್ಚ ವೆಂಕಟ್ ಅವರನ್ನು ಕೇಳಿದ್ದಾರೆ ಆಗ ಗುಂಪಿನಲ್ಲಿದ್ದ ಒಬ್ಬ ವ್ಯಕ್ತಿಯ ಮೇಲೆ ವೆಂಕಟ್ ಹಲ್ಲೆ ಮಾಡಲು ಮುಂದಾಗಿದ್ದಾರೆ ಅದೇ ಸಮಯಕ್ಕೆ ಇಡೀ ಗುಂಪು ವೆಂಕಟ್ ಅವರನ್ನು ಕೆಡವಿ ಹೊಟ್ಟೆ ಮತ್ತು ತಲೆಗೆ ಹೊಡೆದು ಅಲ್ಲಿಂದ ಓಡಿಸಿದ್ದಾರೆ.
ಈ ದೂರು ನೀಡಿದ್ದು ಸ್ವತಹ ಟೀ ಅಂಗಡಿ ಮಾಲೀಕ ಅಕ್ರಂಪಾಷ, ಘಟನೆ ನಡೆದ ಎರಡು ದಿನಗಳ ಬಳಿಕ ದೂರು ನೀಡಿದ ಅಕ್ರಮ್ ಪಾಷಾ ಹಲ್ಲೆ ಮಾಡಿದ ಯುವಕರ ಹೆಸರು ಮತ್ತು ವಿಳಾಸ ತಿಳಿದಿಲ್ಲ ಎಂದು ನಮೂದಿಸಿದ್ದಾರೆ, ಜಗ್ಗೇಶ್ ಮತ್ತು ದುನಿಯಾ ವಿಜಯ್ ಹಾಗೂ ಇನ್ನೂ ಅನೇಕ ಕಲಾವಿದರು ಈ ಬಗ್ಗೆ ತಮ್ಮ ಅಸಹನೆ ವ್ಯಕ್ತ ಪಡಿಸಿರುವ ಬೆನ್ನಲ್ಲೇ ಪೊಲೀಸರು ಯುವಕರ ಗುಂಪನ್ನು ಬಂಧಿಸುವ ಸಾಧ್ಯತೆಯಿದೆ.