ಭಾವನಾತ್ಮಕತೆ : ಪ್ರಕೃತಿಯಲ್ಲಿ ದೊಡ್ಡ ಬುದ್ಧಿವಂತ ಎಂದು ಇರುತ್ತಾರೆ, ಇಂತಹ ವ್ಯಕ್ತಿಗಳಿಗೆ ತಿಳಿಸಿ ಹೇಳುವುದು ಕಷ್ಟ ಅಲ್ಲವೇ ಅಲ್ಲ, ದಡ್ಡನಿಗೆ ತಾನು ತಿಳಿದುಕೊಳ್ಳಬೇಕು ಎನ್ನುವ ಹಂಬಲ ಇರುತ್ತದೆ, ಬುದ್ಧಿವಂತನಿಗೆ ತಿಳಿಸಿ ಹೇಳುತ್ತಿರುವ ಸಂಗತಿಗಳು ಸುಲಭ ಸರಳ ರೀತಿಯಲ್ಲಿ ಅರ್ಥ ಆಗುತ್ತದೆ, ಆದರೆ ಅರ್ಧಂಬರ್ಧ ತಿಳಿದುಕೊಂಡಿರುವ ವ್ಯಕ್ತಿ ದಡ್ಡ, ಬುದ್ದಿವಂತನಾ ಸಾಲಿಗೆ ಸೇರುವುದಿಲ್ಲ, ಜೊತೆಗೆ ಅವನ ಅಹಂಕಾರ ಸೇರಿಕೊಂಡರೆ ಸಾಕು, ಅವನಿಗೆ ತಿಳಿ ಹೇಳುವುದು ಬ್ರಹ್ಮನಿಗೂ ಸಾಧ್ಯವಾಗುವುದಿಲ್ಲ ಎಂದು ನಮ್ಮ ಹಿರಿಯರು ಹೇಳುತ್ತಾರೆ.
ವಾಸ್ತವಿಕತೆ : ಹಂಕಾರ ಇರುವುದು ಯಾವ ಕಾಲದಲ್ಲಿಯೂ ಫಲ ನೀಡಿಲ್ಲ, ಅಹಂಕಾರ ಆಗಿರುವುದು ಒಬ್ಬ ವ್ಯಕ್ತಿಗೆ ವಿನಾಶದ ಅಂಚಿಗೆ ಕರೆದುಕೊಂಡು ಹೋಗಬಲ್ಲದು, ದಡ್ಡನಿಗೆ ಅಹಂಕಾರ ಇರುವುದಿಲ್ಲ, ಆದರೆ ಅವನಿಗೆ ಬೇಗ ಬೇಗ ಸಂಗತಿಗಳು ಅರ್ಥ ಆಗುವುದಿಲ್ಲ, ಬುದ್ಧಿವಂತನಿಗೆ ಸಾಮಾನ್ಯ ಜ್ಞಾನ ಅಧಿಕ ಪ್ರಮಾಣದಲ್ಲಿ ಇರುತ್ತದೆ, ಜೊತೆಗೆ ಅವನು ನನಗಿಂತ ಬುದ್ಧಿವಂತರು ಜಗತ್ತಿನಲ್ಲಿ ಇದ್ದಾರೆ ಎನ್ನುವ ಕಟು ಸತ್ಯ ಒಪ್ಪಿಕೊಂಡು ಮುಂದೆ ಸಾಗಲು ನಾಚಿಕೆ ಪಡುವುದಿಲ್ಲ, ಬಂದು ಮರಕ್ಕಿಂತ ಇನ್ನೊಂದು ಮರ ದೊಡ್ಡದು ಎನ್ನುವ ಸಾಮಾನ್ಯ ಜ್ಞಾನ ಬುದ್ಧಿವಂತನಿಗೆ ಇರುತ್ತದೆ, ಹೀಗಾಗಿ ಅಂತಹ ವ್ಯಕ್ತಿಗಳನ್ನು ಸುಲಭವಾಗಿ ಸಂಭವಿಸಬಹುದು, ಒಬ್ಬ ವ್ಯಕ್ತಿಯ ಅಹಂಕಾರ ನಶಿಸಿಹೋಗಲು ಮದ್ದು ಅವನ ಬಳಿ ಇರುತ್ತದೆ, ನಮ್ಮಿಂದ ಇನ್ನೊಬ್ಬರ ಅಹಂಕಾರ ದೂರ ಮಾಡಲು ಸಾಧ್ಯವಿಲ್ಲ.
ವೈಚಾರಿಕತೆ : ಅಹಂಕಾರ ನಾಶ, ವಿನಯ ಆತ್ಮಸ್ಥೈರ್ಯ ಈ ಮಾತುಗಳನ್ನು ಪ್ರತಿಯೊಬ್ಬರು ತಮ್ಮ ಮನಸ್ಸು, ಹೃದಯ, ಮೆದುಳಿನಲ್ಲಿ ಮುದ್ರಿಸಿ ಕೊಳ್ಳಬೇಕು, ಆಗಲೇ ನಾವು ಕಲಿತು, ಹರಿದು ಜೀವನ ನಡೆಸಲು ಸಾಧ್ಯ, ಅಹಂಕಾರಿ ಎಂದಿಗೂ ಸುಖವಾಗಿ ಇರಲಾರನು, ತನ್ನ ಸುತ್ತಲೂ ಇರುವ ಜನರನ್ನು ಸಹ ಕಷ್ಟ, ದುಃಖ, ಬೇಸರಕ್ಕೆ ಸಿಲುಕಿಸುತ್ತಾರೆ.
ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗು ಅಭಿಪ್ರಾಯಗಳನ್ನು ಮರೆಯದೆ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಬರೆದು ತಿಳಿಸಿ.