ಹೊಟ್ಟೆಯ ಕೊಬ್ಬು ಕರಗಿಸಲು ಮಜ್ಜಿಗೆಯಲ್ಲಿ ಇದನ್ನ ಬೆರೆಸಿ ಕುಡಿಯಿರಿ…!

0
16875

ಹೊಟ್ಟೆಯ ಕೊಬ್ಬು ಎಂಬುದು ತಮಾಷೆಯ ಮಾತಲ್ಲ, ಹೊಟ್ಟೆಯ ಕೊಬ್ಬು ನಮ್ಮ ದೇಹದ ಆಕೃತಿಯನ್ನ ವಿಕಾರ ಮಾಡುವುದಲ್ಲದೆ, ಇದು ಅನೇಕ ಅರೋಗ್ಯ ಸಮಸ್ಯೆಯನ್ನು ತಂದು ಕೊಡುತ್ತದೆ, ನಮ್ಮ ದೇಹದ ತೂಕ ಹೇಗಿದ್ದರೂ ಹೊಟ್ಟೆಯ ಸುತ್ತಲಿನ ಕೊಬ್ಬು ಹೆಚ್ಚಾದರೆ ಹೃದಯಕ್ಕೆ ಸಂಬಂದಿಸಿದ ಸಮಸ್ಯೆಗಳು, ಸಕ್ಕರೆ ಖಾಯಿಲೆ ಮತ್ತು ಕೆಲವೊಮ್ಮೆ ಕ್ಯಾನ್ಸರ್ ಬರುವ ಅವಕಾಶಗಳು ತುಂಬಾನೇ ಹೆಚ್ಚು ಎಂದು ನಿಪುಣರು ಹೇಳುತ್ತಾರೆ.

ನಮ್ಮ ಪ್ರಸ್ತುತ ಕಾಲದಲ್ಲಿ ಆಹಾರ ಪದ್ದತಿಯನ್ನು ಬದಲಾಯಿಸುವ ಮೂಲಕ ಹೊಟ್ಟೆಯ ಸುತ್ತಲಿರುವ ಕೊಬ್ಬನ್ನು 70 % ಕಡಿಮೆ ಮಾಡಿಕೊಳ್ಳ ಬಹುದು, ಉಳಿದ 30 % ನಿಯಮಿತ ವ್ಯಾಯಾಮ ಮಾಡುವ ಮೂಲಕ ಕಡಿಮೆ ಮಾಡಿಕೊಂಡು ನಮ್ಮ ಆರೋಗ್ಯವನ್ನು ಹೆಚ್ಚಿಸಿಕೊಳ್ಳ ಬಹುದು, ಮಜ್ಜಿಗೆಯನ್ನ ಬಳಸಿಕೊಂಡು ಹೊಟ್ಟೆಯ ಕೊಬ್ಬನ್ನು ಹೇಗೆ ಕಡಿಮೆ ಮಾಡಿಕೊಳ್ಳ ಬಹುದು ಎಂಬುದು ಇಲ್ಲಿದೆ, ಈಗ ನಾವು ಹೇಳುವ ಉಪಾಯದಿಂದ ಹೊಟ್ಟೆ ಕೊಬ್ಬು, ಎದೆಯಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ, ತೂಕ ಕಡಿಮೆಯಾಗಲು ಸಹ ಇದು ಸಹಾಯ ಮಾಡುತ್ತದೆ.

ಇದಕ್ಕೆ ಬೇಕಾಗುವ ಪದಾರ್ಥಗಳು : ಕೆನೆ ಇಲ್ಲದ ಮಜ್ಜಿಗೆ – ಒಂದು ಗ್ಲಾಸ್, ಓಂ ಕಾಲಿನ ಪುಡಿ(ಅಜ್ವನಾ) – ಅರ್ಧ ಚಮಚ, ಶುಂಠಿ – ಎರಡು ಚಮಚ ಹಾಗು ಕರಿಬೇವು – 6 ಎಳೆಗಳು.

ಇದನ್ನ ಮಾಡುವ ವಿಧಾನ : ಮೊದಲಿಗೆ ಒಂದು ಗ್ಲಾಸ್ ಕೆನೆ ಇಲ್ಲದ ಮಜ್ಜಿಗೆಯನ್ನು ತೆಗೆದುಕೊಂಡು, ಅದಕ್ಕೆ ಶುಂಠಿ ಪೇಸ್ಟ್ ಅನ್ನು ಹಾಕಿ ಚನ್ನಾಗಿ ಮಿಶ್ರಣ ಮಾಡಿ ನಂತರ ಓಂ ಕಾಲಿನ ಪುಡಿ ಮತ್ತು ಕರಿಬೇವನ್ನು ಬೆರೆಸಿ ನಿಮಗೆ ಬೇಕಾದಷ್ಟು ನೀರನ್ನು ಮಿಶ್ರಣ ಮಾಡಿ ಮಜ್ಜಿಗೆಯನ್ನು ಕುಡಿಯ ಬೇಕು, ನಿಮಗೆ ರುಚಿ ಬೇಕು ಎಂದರೆ ಸ್ವಲ್ಪ ಉಪ್ಪನ್ನು ಬೆರೆಸಿಕೊಳ್ಳಿ.

ಬೆಳಗ್ಗೆ ಉಪಹಾರದ ನಂತರ ಈ ಮಿಶ್ರಣವನ್ನು ಒಂದು ಗ್ಲಾಸ್ ಸೇವಿಸ ಬೇಕು, ಮತ್ತು ಸಾಯಂಕಾಲದ ಸಮಯದಲ್ಲಿ ಇನ್ನೊಂದು ಗ್ಲಾಸ್ ಮಿಶ್ರಣವನ್ನು ಕುಡಿಯಬೇಕು, ಹೀಗೆ ಕ್ರಮವಾಗಿ ಸೇವಿಸುತ್ತಾ ಬಂದರೆ ಕೊಬ್ಬು ಶೀಘ್ರವಾಗಿ ಕಡಿಮೆಯಾಗುತ್ತಾ ಬರುತ್ತದೆ. ಮಜ್ಜಿಗೆ, ಓಂ ಕಾಲು, ಶುಂಠಿ, ಕರಿಬೇವು ಇವುಗಳಲ್ಲಿ ಕೊಲೆಸ್ರ್ಟಾಲ್ ಅನ್ನು ಕಡಿಮೆ ಮಾಡುವ ಗುಣವಿದೆ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here