ಸಾಮಾನ್ಯವಾಗಿ ಕೆಮ್ಮು ನಗಡಿ ಯ ನಂತರ ಬರುತ್ತದೆ, ಆದ್ದರಿಂದ ನಗಡಿ ಎಂದು ಮೊದಲು ವಾಸಿ ಮಾಡಿಕೊಳ್ಳದೆ ಇದ್ದರೆ ಕೆಮ್ಮು ಖಂಡಿತವಾಗಿಯೂ ತುಂಬಾ ದಿನಗಳ ಕಾಲ ಕಾಡುವುದು, ಕೆಮ್ಮು ಬಹಳ ದುಷ್ಟ ರೋಗ, ಕೆಮ್ಮಿನ ರೋಗವನ್ನು ನಿರ್ಲಕ್ಷ ಮಾಡುವುದರಿಂದ ಅನೇಕ ರೀತಿಯ ಕೆಟ್ಟ ರೋಗಗಳು ಉದ್ಭವವಾಗುತ್ತದೆ, ನೆಗಡಿ, ಕೆಮ್ಮು ಹಾಗೂ ಗಂಟಲು ನೋವು ಒಂದೇ ರೀತಿಯ ರೋಗಗಳು.
ಇವುಗಳಿಗೆ ಮನೆ ಮದ್ದಿನ ಉಪಶಮನಗಳನ್ನು ಈ ಕೆಳಗೆ ನೀಡಲಾಗಿದೆ.
ಅನಾನಸ್ ಹಣ್ಣನ್ನು ಆಗಾಗ್ಗೆ ಸೇವಿಸುವುದರಿಂದ ಗಂಟಲು ನೋವು ದೂರವಾಗುವುದು, ಅಮೃತ ಬಳ್ಳಿಗೆ ರಸಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ ಸೇವಿಸುವುದರಿಂದ ಕೆಮ್ಮು ಹಾಗೂ ನಗಡಿ ದೂರವಾಗುವುದು, ತುಳಸಿ ರಸ, ಕರಿ ಮೆಣಸಿನ ಪುಡಿಯನ್ನು ಬೆರೆಸಿ ಆಗಾಗ್ಗೆ ಸೇವಿಸುವುದರಿಂದ ಕೆಮ್ಮು ದೂರವಾಗುವುದು.
ಬೇಕೆನಿಸಿದಾಗ ತಾಜಾ ಬೆಣ್ಣೆಯನ್ನು ಸೇವನೆ ಮಾಡುವುದರಿಂದ ಕೆಮ್ಮು ಬರುವುದಿಲ್ಲ, ಸಣ್ಣ ಮಕ್ಕಳಿಗೆ ಕೆಮ್ಮು ಬಂದಾಗ ಕತ್ತೆಯ ಹಾಲನ್ನು ತಂದು ಕುಡಿಸುವ ರಿಂದ ಕೆಮ್ಮು ಶಮನವಾಗುವುದು.
ಓಮಿನ ಕಾಳು ಮತ್ತು ಮೆಂತ್ಯ ಬೆರೆಸಿ ಕಷಾಯವನ್ನು ತಯಾರಿಸಿ, ನೀವು ಸಿದ್ಧಪಡಿಸಿದ ಕಷಾಯಕ್ಕೆ ಸ್ವಲ್ಪ ಜೇನುತುಪ್ಪ ಬೆರೆಸಿ ಕುಡಿಯುವುದರಿಂದ ಕೆಮ್ಮು ದೂರವಾಗುವುದು, ಹಾಗೆಯೇ ವೀಳ್ಯದೆಲೆ, ಕಾಳು ಮೆಣಸು, ಉಪ್ಪು ಸೇರಿಸಿ ಅಗೆಯುವುದರಿಂದ ಕೆಮ್ಮು ದೂರವಾಗುವುದು.
ಕೆಂಪು ಶಮನ ಹೊಂದಬೇಕಾದರೆ ದೊಡ್ಡ ಪತ್ರೆ, ಉಪ್ಪು ಬೆರೆಸಿ ಸೇವಿಸುವುದರಿಂದ ಮಾಯವಾಗುವುದು, ಲವಂಗ ಮತ್ತು ಹರಳು ಉಪ್ಪು ಸೇರಿಸಿ ಬಾಯಲ್ಲಿ ಇಟ್ಟುಕೊಂಡು ಚಪ್ಪರಿಸು ವುದರಿಂದ ನಗಡಿ ಹಾಗೂ ಕೆಮ್ಮು ದೂರವಾಗುವುದು.
ಅರಿಶಿನ ಪುಡಿ,ರಾಗಿ ಹಿಟ್ಟು ಬೆರೆಸಿ ಕೆಂಡದ ಮೇಲೆ ಹಾಕಿಕೊಂಡು ಹೊಗೆಯನ್ನು ತೆಗೆದುಕೊಳ್ಳುವುದರಿಂದ ನೆಗಡಿ ಕೆಮ್ಮು ಮಾಯ ವಾಗುವುದು, ಕಿತ್ತಳೆ ರಸಕ್ಕೆ ಒಂದು ಚಿಟಿಕೆ ಉಪ್ಪು ಹಾಗೂ ಜೇನುತುಪ್ಪ ಬೆರೆಸಿ ಕುಡಿಯುವುದರಿಂದ ಕೆಮ್ಮು ಶಮನವಾಗುವುದು.