ರಕ್ಷಿತ್ ಶೆಟ್ಟಿಯ ಭಾರೀ ನಿರೀಕ್ಷಿತ ಚಿತ್ರ ಅವನೇ ಶ್ರೀ ಮನ್ನಾರಾಯಣದ ಟ್ರೇಲರ್ ಬಿಡುಗಡೆ ಆಗಿ ಟ್ರೆಂಡಿಂಗ್’ನಲ್ಲಿದೆ.ಸುಮಾರು 5 ಭಾಷೆಗಳಲ್ಲಿ ಚಿತ್ರ ಬಿಡುಗಡೆ ಆಗುತ್ತಿದ್ದು ನೂರು ಕೋಟಿ ಬಜೆಟ್ಟ್ ವ್ಯಯಿಸಲಾಗಿದೆ. ಕಿರಿಕ್ ಪಾರ್ಟಿ ಚಿತ್ರದ ನಂತರ ಸುಮಾರು ಮೂರು ವರ್ಷಗಳ ನಂತರ ಅವನೇ ಶ್ರೀಮನ್ನಾರಾಯಣ ಬಿಡುಗಡೆ ಆಗುತ್ತಿದೆ.
ಅವರ ವೈಯಕ್ತಿಕ ಜೀವನದ ಕಹಿ ಘಟನೆಗಳು ಈ ಮಧ್ಯೆ ನಡೆದಿದೆ. ಕಿರಿಕ್ ಪಾರ್ಟಿ ಚಿತ್ರ ಅವರಿಗೆ ಭಾರೀ ಹೆಸರು ತಂದುಕೊಟ್ಟಿತು. ಬೇರೆ ನಟರಾದರೆ ಈ ಖುಷಿಗೆ ಒಂದರ ಮೇಲೊಂದು ಚಿತ್ರಗಳನ್ನು ಮಾಡುತ್ತಿದ್ದರು. ಆದರೆ ರಕ್ಷಿತ್ ಶೆಟ್ಟಿ ಮತ್ತು ತಂಡ ಕನ್ನಡದಲ್ಲಿ ಬೇರೆ ರೀತಿಯ ಪ್ರಯತ್ನ ಮಾಡಬೇಕು ಎಂಬ ನಿಟ್ಟಿನಲ್ಲಿ ಶ್ರಮ ವಹಿಸಿದೆ. ಟ್ರೇಲರ್’ನಲ್ಲಿ ಇದು ಎದ್ದು ತೋರುತ್ತಿದೆ. ಚಿತ್ರ ಐದು ಭಾಷೆಗಳಲ್ಲಿ ಮೂಡಿ ಬರುತ್ತಿದೆ. ಕೆಜಿಎಫ್ ಚಿತ್ರದ ನಂತರ ಭಾರೀ ನಿರೀಕ್ಷೆ ಇರುವ ಚಿತ್ರ ಇದಾಗಿದೆ.
ಚಿತ್ರದ ಟ್ರೇಲರ್ ಬಿಡುಗಡೆ ವೇಳೆ ರಕ್ಷಿತ್ ಶೆಟ್ಟಿ ಮಾತನಾಡುತ್ತಾ ಭಾವುಕರಾದರು. ಅವರಿಗೆ ಯಾರು ನೆನಪಾದರೋ ಅಥವಾ ಅವರ ಕಷ್ಟದ ಜೀವನ ನೆನಪಾಯಿತೋ ಏನೋ ಒಮ್ಮೆಲೆ ಅಳು ಬಂದು ಸ್ವಲ್ಪ ನೀರು ಕುಡಿದು ಸುಧಾರಿಸಿಕೊಂಡರು. ಮತ್ತೆಮಾತಾಡಲು ಹೊರಟರೆ ಅವರ ಅಳು ಅವರಿಗೆ ಮಾತಾಡಲು ಬಿಡಲಿಲ್ಲ.
ಅಷ್ಟಕ್ಕೂ ಅವರು ಅಳುವುದಕ್ಕೆ ಕಾರಣ ಏನು ? ಅವರು ಚಿತ್ರರಂಗಕ್ಕೆ ಬರುವ ಮೊದಲು ಅನುಭವಿಸಿದ ಕಷ್ಟಗಳನ್ನು ನೆನೆದರು. ಅವರ ಜೀವನದಲ್ಲಿ ಕೆಲವರು ಬಂದರು. ನಂತರ ಕೆಲವರು ಬಿಟ್ಟು ಹೋದರು . ಇದನ್ನು ಹೇಳುತ್ತಾ ಅವರಿಗೆ ಅಳು ಬಂದಿತು.
ಬೆಂಗಳೂರಿಗೆ ಬಂದಾಗ ಅವರಿಗೆ ಯಾರೂ ಪರಿಚಯ ಇರಲಿಲ್ಲ. ಮೊದಲು ಜೀರೋ ಬಜೆಟ್ಟಿನಲ್ಲಿ ಕಿರುಚಿತ್ರ ಮಾಡಿದರು. ನಂತರ ಐದು ಸಾವಿರ ಒಂದುಗೂಡಿಸಿ ಎರಡನೇ ಕಿರುಚಿತ್ರ ಮಾಡಿದರು. ಮೂರನೇ ಕಿರುಚಿತ್ರ ಮೂವತ್ತು ಸಾವಿರ ಖರ್ಚು ಮಾಡಿದರು. ನಾಲ್ಕನೇ ಕಿರುಚಿತ್ರವನ್ನು ಅವರ ಸ್ನೇಹಿತರ ಜೊತೆಗೂಡಿ ಒಂದೂವರೆ ಲಕ್ಷ ರೂಪಾಯಿ ಹಾಕಿ ನಿರ್ಮಿಸಿದರು. ನಂತರ ಎರಡನೇ ಚಿತ್ರ ಸುನಿ ನಿರ್ದೇಶಿಸಿದ ಸಿಂಪಾಲ್ಲಾಗ್ ಒಂದ್ ಲವ್ ಸ್ಟೋರಿ ಚಿತ್ರದ ನಾಯಕನಾದ ರಕ್ಷಿತ್ ಶೆಟ್ಟಿ ಚಿತ್ರರಂಗದಲ್ಲಿ ಒಂದು ನೆಲೆ ನಿಂತರು. ಉಳಿದವರು ಕಂಡಂತೆ ಚಿತ್ರ ನಿರ್ದೇಸಿದರು. ಕಿರಿಕ್ ಪಾರ್ಟಿ ಚಿತ್ರವನ್ನು ನಿರ್ಮಿಸಿದರು. ಈ ಮಧ್ಯೆ ಅವರ ಬದುಕಿನಲ್ಲಿ ಹಲವಾರು ಜನ ಬಂದಿದ್ದಾರೆ. ಕೆಲವರು ಹೋಗಿದ್ದಾರೆ. ಇದನ್ನು ನೆನೆದು ರಕ್ಷಿತ್ ಶೆಟ್ಟಿ ಅತ್ತಿದ್ದಾರೆ. ಅವರ ಶ್ರೀಮನ್ನರಾಯಣ ಚಿತ್ರಕ್ಕೆ ಶುಭಾಶಯ ಕೋರೋಣ