ಬಿಗ್ ಬಾಸ್-4 ವಿನ್ನರ್ ಒಳ್ಳೆ ಹುಡ್ಗ ಪ್ರಥಮ್ ಸ್ಥಿತಿ ನೋಡಿದರೆ ಕಣ್ಣಲ್ಲಿ ನೀರು ಬರುತ್ತೆ !

0
2728

ಒಳ್ಳೆಯ ಹುಡುಗ ಯಾರು ಅಂದರೆ ಇಡೀ‌ ಕರ್ನಾಟಕನೇ ಹೇಳುತ್ತೆ ಅದು ಪ್ರಥಮ್ ಅಂತ . ಇದ್ದಕ್ಕಿದ್ದಂತೆ ಹುಟ್ಟಿಕೊಂಡ ಬಿಗ್ಬಾಸ್ ಪ್ರತಿಭೆ ಈತ. ಅಪಾರ ಕನ್ನಡ ಪ್ರೇಮಿ , ಕನ್ನಡವನ್ನು ಇವರಷ್ಟು ಸುಲಲಿತವಾಗಿ, ಸರಾಗವಾಗಿ ಮಾತಾಡುವ ಕನ್ನಡ ನಟರು ಇಲ್ಲವೆ ಇಲ್ಲ ( ರಾಜ್‍ಕುಮಾರ್ ಬಿಟ್ಟು) .‌ ಕೇವಲ ಮಾತಿನಿಂದಲೇ ಅರಮನೆ ಕಟ್ಟಬಲ್ಲ ಚಾಲಾಕಿ ಇವರು. ಬರೀ ಮಾತಿಗಷ್ಟೇ ಅಲ್ಲ ಕೆಲಸದಲ್ಲೂ ಮಿ.ಪರ್ಫೆಕ್ಟ್. ಇತ್ತೀಚಿನ ದಿನಗಳಲ್ಲಿ ಬಿಡುಗಡೆಗೊಂಡು ಟ್ರೆಂಡ್ ಆದ ಇವರ ನಟ ಭಯಂಕರ ಚಿತ್ರದ ಹಾಡುಗಳೇ ಸಾಕ್ಷಿ. ಪ್ರಥಮ್ ಎಂತಹ ಅಭಿರುಚಿ ಹೊಂದಿರುವವರು ಎಂದು ! ಹಾಡಿನ ಸಾಹಿತ್ಯ,ಸಂಗೀತ ಎಷ್ಟು ಚೆನ್ನಾಗಿ ಮೂಡಿ ಬಂದಿದೆ ಎಂದರೆ ಅದು ನಟ ಭಯಂಕರ ಚಿತ್ರದ ಕ್ವಾಲಿಟಿಗೆ ಮುನ್ನುಡಿ ಕೊಟ್ಟಿದೆ. ಅಷ್ಟು ಭರವಸೆ ಇಡಬಹುದು.

ಇನ್ನೂ ಒಳ್ಳೆ ಹುಡುಗ ಪ್ರಥಮ್ ಕೇವಲ ಸಿನಿಮಾ ಅಲ್ಲದೆ ಬಿಡುವಿನ ವೇಳೆಯಲ್ಲಿ ಸಾಮಾಜಿಕ ಸೇವೆಯನ್ನು ತಮ್ಮ ಕೈಲಾದಷ್ಟು ಮಾಡಿಕೊಂಡು ಬರುತ್ತಿದ್ದಾರೆ.ಜನ ಪ್ರೀತಿಯಿಂದ ಕರೆದರೆ ಇಲ್ಲ ಅನ್ನದೇ ತಮ್ಮದೇ ಖರ್ಚಿನಲ್ಲಿ ಹತ್ತಾರು ಕಡೆ ದೂರ ಪ್ರಯಾಣ ಮಾಡಿ ಕಾರ್ಯಕ್ರಮಕ್ಕೆ ಹಾಜರಾಗುತ್ತಾರೆ. ಇದು ಸ್ವಲ್ಪ ಉತ್ಪ್ರೇಕ್ಷೆ ಅನಿಸಿದರೂ ಸತ್ಯವಾದ ಮಾತು. ಸಾಮಾಜಿಕ ಜಾಲತಾಣದಲ್ಲಿ ಬಹಳ ಆಕ್ಟಿವ್ ಆಗಿರುವ ಇವರು ಬಹಳಷ್ಟು ಒಳ್ಳೆಯ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ.

ಸದ್ಯ ಪ್ರಥಮ್ ಬಿಗ್’ಬಾಸ್ ನಲ್ಲಿ ಬಂದ ಹಣವನ್ನು ಹೇಳಿದಂತೆ ರೈತರಿಗೆ , ಯೋಧರು , ಬಡ ಕುಟುಂಬಕ್ಕೆ ನೀಡಿರುವುದು ನಿಮಗೆ ಗೊತ್ತೇ ಇದೆ. ಈಗ ಎರಡು ವರ್ಷಗಳಿಂದ ಪ್ರಥಮ್ ಒಂದೇ ಚಿತ್ರದ ಮೇಕಿಂಗ್’ನಲ್ಲಿ ಬಿಜಿ ಇದ್ದಾರೆ. ಬೇರೆಯವರಾದರೆ ಒಂದರ ಮೇಲೊಂದು ಚಿತ್ರದಲ್ಲಿ ನಟಿಸಿ ದುಡ್ಡು ಮಾಡಿಕೊಳ್ಳುತ್ತಿದ್ದರು. ಆದರೆ ಪ್ರಥಮ್ ನಿಧಾನವಾಗಿಯಾದರೂ ಕ್ವಾಲಿಟಿಗೆ ಮಹತ್ವ ಕೊಡುತ್ತಿದ್ದಾರೆ. ಪ್ರಥಮ್’ಗೆ ಈಗ ಹಣದ ಅವಶ್ಯಕತೆ ಇದೆಯಂತೆ. ಇಂತಹ ಸಮಯದಲ್ಲಿ ರಾಜಿನಾಮೆ ಪ್ರಹಸನದಿಂದ ಚುನಾವಣೆ ಬಂದಿದೆ. ಈಗ ಇವರ ಪರವಾಗಿ ಪ್ರಚಾರ ಮಾಡಲು ಪ್ರಥಮ್’ಗೆ ದೊಡ್ಡ ಮೊತ್ತದ ಆಫರ್ ಬಂದಿದೆ.

ಬೇರೆಯವರಾದರೆ ತಕ್ಷಣ ಒಪ್ಪಿಕೊಂಡು ಹಣಕ್ಕಾಗಿ ಅವರ ಪರ ಪ್ರಚಾರ ಮಾಡುತ್ತಿದ್ದರೋ ಏನೊ ? ( ಈಗಾಗಲೆ ನಾವು ನೋಡಿ ಆಗಿದೆಯಲ್.ಒಬ್ಬೊಬ್ಬ ನಟ- ನಟಿಯರು ಒಂದೊಂದು ಪಕ್ಷದ ಪರ ಪ್ರಚಾರ ಮಾಡುತ್ತಿರುವುದು ) ಆದರೆ ಪ್ರಥಮ್ ಬಿಲ್ಕುಲ್ ಒಪ್ಪಿಕೊಳ್ಳಲಿಲ್ಲ. ಅನರ್ಹರ ಪರ ಪ್ರಚಾರ ಮಾಡಿದರೆ ನನಗೆ ನಾಲ್ಕು ಕಾಸು ಬರಬಹುದು. ಆದರೆ ಅದಕ್ಕೆ ನನ್ನ ಆತ್ಮ ಸಾಕ್ಷಿ ಒಪ್ಪುವುದಿಲ್ಲ. ಅದಕ್ಕೆ ನಾನು ಯಾವುದೇ ಪಕ್ಷದ ಪರವಾಗಿ ಪ್ರಚಾರ ಮಾಡುವುದಿಲ್ಲ ಎಂದು ಕಡ್ಡಿ ತುಂಡು ಮಾಡಿದಂತೆ ಹೇಳಿದ್ದಾರೆ. ಇದನ್ನು ಕೇಳಿ ಅವರ ಅಭಿಮಾನಿಗಳು ಸಕ್ಕತ್ ಖುಷಿಯಾಗಿದ್ದಾರೆ.

ಪ್ರಥಮ್ ಬಹಿರಂಗವಾಗಿ ಟ್ವೀಟ್ ಮಾಡಿದ್ದಾರೆ. ಓಟ್ ಹಾಕುವುದಾದರೆ ಯಾವುದೇ ರಾಜಕೀಯ ಹೊರತಾದ ಪ್ರಜಾಕೀಯ ಪಕ್ಷಕ್ಕೆ ಓಟ್ ಹಾಕಿ . ಉಪೇಂದ್ರರವರನ್ನು ಬೆಂಬಲಿಸಿ ಎಂದು. ಇದಕ್ಕೆ ಅಲ್ಲವೇ ಕರ್ನಾಟಕದ ಜನತೆ ಇವರನ್ನು ಒಳ್ಳೆಯ ಹುಡುಗ ಎನ್ನುವುದು !

LEAVE A REPLY

Please enter your comment!
Please enter your name here