ಕಲರ್ಸ್ ಕನ್ನಡದಲ್ಲಿ ಖ್ಯಾತ ನಟ ಸೃಜನ್ ಲೋಕೇಶ್ ಅವರು ನಡೆಸಿಕೊಡುವ ಮಜಾ ಟಾಕೀಸ್ ಯಾರಿಗೆ ತಾನೇ ಗೊತ್ತಿಲ್ಲ. ಮಜಾ ಟಾಕೀಸ್ ನಲ್ಲಿ ಬರುವ ಒಂದೊಂದು ಪಾತ್ರಗಳೂ ತನ್ನದೇ ಆದ ವೈಶಿಷ್ಟ್ಯತೆಯನ್ನು ಹೊಂದಿದೆ. ಪ್ರತಿಯೊಂದು ಪಾತ್ರಗಳು ತೆರೆಯ ಮೇಲೆ ಬಂದಾಗಲೂ ಪ್ರೇಕ್ಷಕರ ಮುಖದಲ್ಲಿ ನಗು ತರಿಸುತ್ತವೆ. ಇದೇ ಕಾರಣಕ್ಕಾಗಿ ಕಲರ್ಸ್ ಕನ್ನಡ ಮತ್ತೊಮ್ಮೆ ತಮ್ಮ ವಾಹಿನಿಯಲ್ಲಿ ಲಾ’ಕ್ಡೌನ್ ನಂತರ ಮಜಾ ಟಾಕೀಸ್ ಅನ್ನು
ಪ್ರಾರಂಭ ಮಾಡಿದೆ. ಆದರೆ ಈ ಬಾರಿಯ ಮಜಾ ಟಾಕೀಸ್ ನಲ್ಲಿ ಕೊಡಗಿನ ಬೆಡಗಿ ಶ್ವೇತಾ ಚಂಗಪ್ಪ ರವರು ಇಲ್ಲದಿರುವುದು ಹಲವರಿಗೆ ಬೇಸರ ತರಿಸಿದೆ.
ಎಸ್ ನಾರಾಯಣ್ ರವರ ನಿರ್ದೇಶನದ ಮೊದಲ ಧಾರಾವಾಹಿ ಸುಮತಿಯಲ್ಲಿ ನಟಿಸಿದ ನಂತರ ಆಕೆಯ ಕಿರುತೆರೆ ಪಯಣ ಶುರುವಾಯಿತು. ನಂತರ ಬಾಲಾಜಿ ಟೆಲಿಫಿಲ್ಮ್ಸ್ ಅವರ ಅಡಿಯಲ್ಲಿ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಕಾದಂಬರಿ ಧಾರವಾಹಿ ಅತಿ ಹೆಚ್ಚು ಜನಪ್ರಿಯತೆ ದೊರಕಿತ್ತು. ನಂತರ ಈಟಿವಿ ಕನ್ನಡದಲ್ಲಿ ಸುಕನ್ಯಾ ಹಾಗೂ ಅರುಂಧತಿ ಎಂಬ ಧಾರವಾಹಿಗಳಿಗೆ ಬಣ್ಣಹಚ್ಚಿದ್ದರು ಶ್ವೇತ.
ಜೀ ಕನ್ನಡದಲ್ಲಿ ಮಹಿಳಾ ಪ್ರಧಾನವಾದ ರಿಯಾಲಿಟಿ ಶೋ ಕಾರ್ಯಕ್ರಮ ಯಾರಿಗುಂಟು ಯಾರಿಗಿಲ್ಲ ನಿರೂಪಕಿಯಾಗಿ ಕಾಣಿಸಿಕೊಂಡಿದ್ದರು. ಅಷ್ಟೇ ಅಲ್ಲ ಕುಣಿಯೋಣು ಬಾ’ರ ಮಕ್ಕಳ ಆವೃತ್ತಿಯಲ್ಲಿ ಕೂಡ ಈಕೆ ನಿರೂಪಣೆ ಮಾಡಿದರು. ಅದಾದನಂತರ ಸ್ಟಾರ್ ಸುವರ್ಣದ ಡ್ಯಾನ್ಸ್ ಡ್ಯಾನ್ಸ್ ಜೂನಿಯರ್ಸ್ ಕಾರ್ಯಕ್ರಮವನ್ನು ಕೂಡ ನಿರೂಪಣೆ ಮಾಡಿದರು. ಕೇವಲ ಕಿರುತೆರೆಯಲ್ಲಿ ಅಷ್ಟೇ ಅಲ್ಲ ಹಿರಿತೆರೆಯಲ್ಲೂ ಶ್ವೇತರ್ ಅವರು ಮಿಂಚಿದ್ದಾರೆ. ತಂಗಿಗಾಗಿ ಚಿತ್ರದಲ್ಲಿ ದರ್ಶನ್ ಅವರ ಜೊತೆ ಹಾಗೂ ವರ್ಷ ಚಿತ್ರದಲ್ಲಿ ವಿಷ್ಣುವರ್ಧನ್ ಅವರ ಜೊತೆ ಶ್ವೇತಾ ಅವರು ನಟಿಸಿದ್ದಾರೆ.
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕನ್ನಡದ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 2 ರಲ್ಲಿ ಕಂಟೆಸ್ಟೆಂಟ್ ಆಗಿ ಈಕೆ ಇದ್ದರು. ಅಷ್ಟೇ ಅಲ್ಲ ಈಟಿವಿ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಸೂ’ಪರ್ ಮಿ’ನಿಟ್ ನಲ್ಲಿ ಕೂಡ ಭಾಗವಹಿಸಿದ್ದರು. ನಿಖಿತಾ ತುಕ್ರಾಲ್, ದೀಪಿಕಾ ಕಾಮಯ್ಯ, ನೀತು, ಅನುಶ್ರೀ, ನರೇಂದ್ರ ಬಾಬು ಶರ್ಮರಂತಹ ದಿಗ್ಗಜರಿದ್ದ ರಿಯಾಲಿಟಿ ಶೋದಲ್ಲಿ ಈಕೆ ಭಾಗವಹಿಸಿದ್ದು ವಿಶೇಷ.
ಜೀ ಕುಟುಂಬ ಅವಾರ್ಡ್ಸ್ ನಲ್ಲಿ ಬೆಸ್ಟ್ ಆಂಕರ್ ಅವಾರ್ಡ್ ಅನ್ನು ಪಡೆದಿರುವ ಶ್ವೇತ ರವರು, ಕರ್ನಾಟಕ ಸರ್ಕಾರದಿಂದ 2013ರಲ್ಲಿ ಆಕೆಯ ಉತ್ತಮ ನಟನೆಗೆ ಮಾಧ್ಯಮ್ ಸಮ್ಮಾನ್ ಎಂಬ ಅವಾರ್ಡ್ ಅನ್ನು ಅರುಂಧತಿ ಧಾರವಾಹಿಗೆ ಪಡೆದುಕೊಂಡಿದ್ದರು. ಆಕೆಯು ಭಾಗವಹಿಸಿರುವ ಕಾರ್ಯಕ್ರಮಗಳ ಹೆಸರುಗಳು ಇಂತಿವೆ. ಸುಮತಿ, ಕಾದಂಬರಿ, ಸುಕನ್ಯಾ, ಅರುಂಧತಿ, ಸೌಂದರ್ಯ, ಯಾರಿಗುಂಟು ಯಾರಿಗಿಲ್ಲ, ಕುಣಿಯೋಣು ಬಾ’ರ, ಬಿಗ್ ಬಾಸ್ ಸೀಸನ್ 2, ಸೂ’ಪರ್ ಮಿ’ನಿಟ್, ಮಜಾ ಟಾಕೀಸ್, ಡ್ಯಾನ್ಸಿಂಗ್ ಸ್ಟಾರ್, ಡ್ಯಾನ್ಸ್ ಡ್ಯಾನ್ಸ್ ಜೂನಿಯರ್.
ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ 6 ಲಕ್ಷದ 77 ಸಾವಿರಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಶ್ವೇತಾ ರವರು ಪ್ರತಿನಿತ್ಯ ಹಲವಾರು ವಿಚಾರಗಳನ್ನು ಹಂಚಿಕೊಳ್ಳುತ್ತಾರೆ.ಮಜಾ ಟಾಕೀಸ್ ನ ರಾಣಿ ಎಂದೇ ಖ್ಯಾತರಾಗಿರುವ ಶ್ವೇತಾ ಮತ್ತೊಮ್ಮೆ ಮಜಾ ಟಾಕೀಸ್ ಗೆ ಹಿಂತಿರುಗುತ್ತಾರ ಎಂದು ಅಭಿಮಾನಿಗಳು ಕಾದಿದ್ದಾರೆ.
ಮೂಲತಹ ಕೊಡಗಿನವರಾಗಿರುವ ಶ್ವೇತಾ ಅವರು ಇತ್ತೀಚೆಗಷ್ಟೇ ತಮ್ಮ ಮುದ್ದಾದ ಮಗುವಿನ ಫೋಟೋಶೂಟ್ ಮಾಡಿಸಿದ್ದಾರೆ. ತಮ್ಮ ಪುತ್ರ ಜಿಯಾನ್ ಅಯ್ಯಪ್ಪ ಹಾಗೂ ಪತಿ ಕಿರಣ್ ಅವರ ಜೊತೆಗಿನ ಸುಂದರ ಫೋಟೋಶೂಟ್ ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಖ್ಯಾತ ಛಾಯಾಗ್ರಾಹಕ ಸಂದೇಶ್ ಸುಗೂರು ಮಠ್ ಅವರು ಕ್ಲಿಕ್ಕಿಸಿರುವ ಈ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.