ಈ ದುರ್ಘಟನೆ ನಡೆದಿರುವುದು ಬೆಳಗಾವಿ ಜಿಲ್ಲೆಯಲ್ಲಿ, ಲಾಕ್ಡೌನ್ ಬಂದೋಬಸ್ತ್ ಗಾಗಿ ಬೆಳಗಾವಿಯ ಯಳ್ಳೂರು ಗ್ರಾಮದ ಹಾದಿಯಲ್ಲಿ ಹೋಗುತ್ತಿದ್ದ ಖಡೆ ಬಜಾರ್ ಪೊಲೀಸ್ ಠಾಣೆಯ ಪಿಎಸ್ಐ ಅವರು ತಮ್ಮ ವಾಹನದ ಮುಂದೆ ಬಂದ ನಾಯಿಯ ಜೀವವನ್ನು ಉಳಿಸಲು ಹೋಗಿ ವಾಹನ ಸ್ಕಿಡ್ ಆಗಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.
ಮೃತ ಪಿಎಸ್ಐ ಅವರನ್ನು ಮನೋಹರ ಗಣಾಚಾರಿ ಎಂದು ಗುರುತಿಸಲಾಗಿದ್ದು, ಮುಂಜಾನೆ ಕಡೆ ಬಜಾರ್ ಪೊಲೀಸ್ ಠಾಣೆಗೆ ಕರ್ತವ್ಯಕ್ಕೆ ಹಾಜರಾಗಲು ಬರುತ್ತಿದ್ದಾಗ ಈ ಘಟನೆ ಸಂಭವಿಸಿದೆ, ಯಳ್ಳೂರು ಬಳಿ ಕೆಎಲ್ಇ ಆಸ್ಪತ್ರೆ ಹತ್ತಿರ ಬೆಳಗಿನ ಜಾವ ಸರಿಸುಮಾರು ಏಳು ಗಂಟೆಗೆ ತಮ್ಮ ಬೈಕ್ನಲ್ಲಿ ಮನೋಹರ ಗಣಾಚಾರಿ ಅವರು ಬರುತ್ತಿದ್ದಾಗ ನಾಯಿಯೊಂದು ಅಡ್ಡ ಬಂದ ಕಾರಣ ಅದನ್ನು ಉಳಿಸಲು ಹೋಗಿ ತಮ್ಮ ಬೈಕ್ ಸ್ಕಿಡ್ ಆಗಿ ಬಿದ್ದಿದ್ದಾರೆ, ಇದರಿಂದ ಅವರ ತಲೆಗೆ ಬಲವಾದ ಪೆಟ್ಟು ಬಿದ್ದು ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕೇವಲ ಆರು ತಿಂಗಳ ಹಿಂದೆಯಷ್ಟೇ ಮನೋಹರ ಗಣಾಚಾರಿ ಅವರು ಪಿಎಸ್ಐ ಆಗಿ ಪ್ರಮೋಷನ್ ಪಡೆದಿದ್ದರು, ಒಂದು ವರ್ಷದ ಹಿಂದೆಯಷ್ಟೇ ಸ್ವಂತ ಮನೆ ಕಟ್ಟಿಸಿದ್ದರು ಹಾಗೂ ಇದೇ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ನಿವೃತ್ತಿಯಾಗುತ್ತಿದ್ದರು, ಆದರೆ ವಿಧಿಯಾಟ ಅಷ್ಟರೊಳಗೆ ಈ ಕೆಟ್ಟ ದುರಂತ ಸಂಭವಿಸಿದೆ.