ಈ ಬೇಸಿಗೆಯಲ್ಲಿ ಮಜ್ಜಿಗೆ ಕುಡಿಯುವುದರಿಂದ ಎಷ್ಟೆಲ್ಲ ಆರೋಗ್ಯಕಾರಿ ಲಾಭಗಳಿವೆ ಗೊತ್ತಾ..!

0
2034

ನಾವು ಈ ತಂಪು ಪಾನೀಯಗಳನ್ನು ಕುಡಿಯೋದು ಅಭ್ಯಾಸ ಮಾಡಿಕೊಂಡಿದ್ದೇವೆ ಆದರೆ ಮಜ್ಜಿಗೆ ಕುಡಿದು ಅಭ್ಯಾಸ ಮಾಡಿಕೊಳ್ಳಿ ಅದರಿಂದ ಎಷ್ಟೆಲ್ಲ ಆರೋಗ್ಯಕಾರಿ ಅಂಶಗಳಿವೆ ಗೊತ್ತಾ, ಇಲ್ಲಿದೆ ನೋಡಿ.

ಮಜ್ಜಿಗೆಗೆ ಕಲ್ಲು ಸಕ್ಕರೆ ಅಥವಾ ಸಕ್ಕರೆ ಬೆರೆಸಿ ಕುಡಿದರೆ ಪಿತ್ತದಿಂದ ಕಾಡುವ ಎದೆ ಉರಿ ಮತ್ತು ಹುಳಿ ತೇಗು ಶಮನವಾಗುತ್ತದೆ, ಮಜ್ಜಿಗೆ ಮತ್ತು ಟೊಮೇಟೊಗಳನ್ನು ಪೇಸ್ಟ್‌ ಮಾಡಿ ಸನ್‌ ಟ್ಯಾನ್‌ ಆದ ಚರ್ಮಕ್ಕೆ ಹಚ್ಚಿದರೆ ಟ್ಯಾನ್‌ ನಿವಾರಣೆಯಾಗುತ್ತದೆ, ಬೇಧಿ ಹೆಚ್ಚಾಗಿದ್ದರೆ ಮಜ್ಜಿಗೆಗೆ ಒಣ ಶುಂಠಿ ಪುಡಿ ಬೆರೆಸಿ ಕುಡಿದರೆ ಸಮಸ್ಯೆ ನಿವಾರಣೆಯಾಗುತ್ತದೆ.

ಬೆಣ್ಣೆ ತೆಗೆದ ಮಜ್ಜಿಗೆ ಕುಡಿಯುವುದರಿಂದ ದೇಹದಲ್ಲಿರುವ ಬೊಜ್ಜು ಕರಗುತ್ತದೆ ಮತ್ತು ತೂಕ ಕಡಿಮೆಯಾಗುತ್ತದೆ, ಹೊಟ್ಟೆ ಉಬ್ಬರ ಮತ್ತು ನೋವು ಇದ್ದರೆ ಹುಳಿ ಮಜ್ಜಿಗೆಗೆ ಸ್ವಲ್ಪ ಉಪ್ಪು ಬೆರೆಸಿ ಕುಡಿದರೆ ಗ್ಯಾಸ್‌ ಕಡಿಮೆಯಾಗಿ ನೋವು ಮತ್ತು ಉಬ್ಬರ ನಿವಾರಣೆಯಾಗುತ್ತವೆ.

ಬೆಣ್ಣೆ ತೆಗೆದ ಮಜ್ಜಿಗೆಗೆ ಶುಂಠಿ, ಜೀರಿಗೆ, ಕಾಳುಮೆಣಸು ಮತ್ತು ಹಿಪ್ಪಲಿ ಪುಡಿಗಳನ್ನು ಕಲಸಿ ಸೇವಿಸಿದರೆ ಹೊಟ್ಟೆ ಹಗುರವಾಗಿ ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ.ಮುಖದ ಕಾಂತಿ ಹೆಚ್ಚಿಸಲು ಅರಶಿನ, ಕಡಲೆ ಹಿಟ್ಟು ಮತ್ತು ಮಜ್ಜಿಗೆ ಕಲಸಿ ಮುಖಕ್ಕೆ ಲೇಪಿಸಿ ಅರ್ಧ ಗಂಟೆ ಬಿಟ್ಟು ತೊಳೆಯಿರಿ.

ಮೂತ್ರ ಮಾಡುವಾಗ ಕಷ್ಟವಾಗುತ್ತಿದ್ದರೆ ಮಜ್ಜಿಗೆಗೆ ಬೆಲ್ಲ ಸೇರಿಸಿ ಕುಡಿದರೆ ಸಮಸ್ಯೆ ನಿವಾರಣೆಯಾಗುತ್ತದೆ. ಮಜ್ಜಿಗೆಗೆ ಉಪ್ಪು, ಇಂಗು ಮತ್ತು ಜೀರಿಗೆ ಪುಡಿ ಬೆರೆಸಿ ಕುಡಿದರೆ ಅನಿಮಿಯ ದೂರವಾಗುತ್ತದೆ ಮತ್ತು ಶೀತ, ನೆಗಡಿಯಿಂದ ಮೂಗು ಸೊರುತ್ತಿದ್ದರೆ ಮಜ್ಜಿಗೆಗೆ ಸಾಸಿವೆ, ಜೀರಿಗೆ, ಕರಿಮೆಣಸು ಸೇರಿಸಿ ಕುಡಿದರೆ ಶೀತ ಕಡಿಮೆಯಾಗುತ್ತದೆ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here