ಹೌದು ಈ ಮೂಲಿಕೆಯು ಕಡಲಂಚಿನ ಸಸ್ಯಾವರಣದಲ್ಲಿ ಬೆಳೆಯುತ್ತದೆ, ಇದು ಭತ್ತದ ಗದ್ದೆಯಲ್ಲಿ ಕೊಯ್ಲಾದ ನಂತರ ಹುಲುಸಾಗಿ ಬೆಳೆಯುತ್ತದೆ, ಕಳ್ಳಿ ಕುರುಚಲು ಗಿಡಗಳನ್ನೊಳಗೊಂಡ ಸಸ್ಯಾವರಣದ ಸಮೀಪವಿರುವ ಒದ್ದೆ ನೆಲದಲ್ಲಿ, ಕೆರೆಯಂಗಳದಲ್ಲಿ ಮೂಡಿಬರುತ್ತದೆ.ಚಮಚದಾಕಾರದ ಎಲೆಗಳು ಕುಬ್ಜವಾದ ಕಾಂಡದ ಮೇಲಿದ್ದು, ನೆಲಕ್ಕೆ ಅಂಟಿಕೊಂಡಂತೆ ಹರಡಿರುತ್ತವೆ. ಕನಿಷ್ಟ ೧ ರಿಂದ ೩ ಸೆ. ಮೀ ವರೆಗೆ ಹರಡಿಕೊಂಡಿರುತ್ತದೆ, ಈ ಜಾತಿಯ ಸಸ್ಯಗಳು ಹಸಿರು, ಕಡು ಹಸಿರು, ಕೆಂಪು ಹಸಿರು ಮತ್ತು ಚಿನ್ನದಂತ ಹಸಿರು ಬಣ್ಣಗಳಲ್ಲಿ ಕಂಡುಬರುತ್ತದೆ.
ಉಪಯೋಗಗಳು : ಗಿಡದ ಸಮೂಲವನ್ನು ಅರೆದು ಕಾಲಿನ ಅಣಿ (ಕಲ್ಲೂತ್ತು) ಇರುವ ಕಡೆ ಲೇಪಿಸಿದರೆ, ಕಲ್ಲೂತ್ತು ಗುಣವಾಗುತ್ತದೆ.
ಸಮೂಲದ ರಸವನ್ನು ಮೊಸರಿನೊಡನೆ ಕುಡಿಸುವುದರಿಂದ ಮೂತ್ರ ತಡೆಯು ಗುಣವಾಗುತ್ತದೆ.
ಗಿಡದ ಸ್ವರಸವು ಮಕ್ಕಳ ನಾಯಿ ಕೆಮ್ಮಿಗೆ ಔಷಧವಾಗಿದೆ.
ಹಗೇವು ಅಥವಾ ಕಣಜದೊಳಗೆ ಹೋದವರು ಮೂರ್ಛೆ ಹೋದಾಗ ಗಿಡದ ಸಮೂಲವನ್ನು ಕುಟ್ಟಿ ಹಿಂಡಿ ರಸ ಮಾಡಿ ಕುಡಿಸಿದರೆ, ಬೇಗ ಎಚ್ಚರಗೊಳ್ಳುತ್ತಾರೆ.
ಜೊತೆಯಲ್ಲಿ ಇದನ್ನು ಓದಿ ದೇಹದ ತೂಕ ಇಳಿಸಲು ಸೀಬೆಕಾಯಿ ಸೇವನೆಯಲ್ಲಿದೆ ಉತ್ತಮ ಪರಿಹಾರ.
ನಾವು ಈಗಾಗಲೇ ತಿಳಿಸಿರುವ ಹಾಗೆ ಸೀಬೆಕಾಯಿ ಬಹಳ ಉಪಯುಕ್ತಕಾರಿ, ಸೀಬೆಕಾಯಿಯಿಂದ ಕೂದಲ ಹಾಗೂ ತ್ವಚೆಯ ಆರೋಗ್ಯವನ್ನ ಅಷ್ಟೇ ಅಲ್ಲದೆ ನಮ್ಮ ದೇಹದ ಆರೋಗ್ಯವನ್ನ ಸಹ ಕಾಪಾಡಿಕೊಳ್ಳ ಬಹುದು. ನಮ್ಮಲಿ ತೂಕ ಹೆಚ್ಚಿಸಿ ಕೊಳ್ಳಲು ಬಯಸುವವರಿಗಿಂತ ತೂಕ ಕಡಿಮೆ ಮಾಡಿಕೊಳ್ಳಲು ಬಯಸುವವರೇ ಹೆಚ್ಚು. ಜೀವನ ಶೈಲಿಯ ಅನಿವಾರ್ಯತೆಗೆ ಬಿದ್ದು ನಮ್ಮ ಆರೋಗ್ಯವನ್ನ ನಮ್ಮ ಕೈಯಾರೆಯೇ ಹಾಳು ಮಾಡಿಕೊಳುತಿರುವವರು ನಾವು ಎಂದರೆ ಖಂಡಿತ ಈ ಮಾತನ್ನ ಹಲವಾರು ಒಪ್ಪುತ್ತಾರೆ. ಅದೇನೇ ಇರಲಿ ನಮ್ಮ ದೇಹದ ತೂಕವನ್ನ ಕಡಿಮೆ ಮಾಡಿಕೊಳ್ಳುವುದು ಹೇಗೆ ? ಹಾಗು ತೂಕ ಕಡಿಮೆ ಮಾಡಿಕೊಳ್ಳಲು ಸೀಬೆಕಾಯಿ ಉತ್ತಮವೇ ? ಎಂಬ ನಿಮ್ಮೆಲ್ಲ ಪ್ರಶೆಗೆ ಉತ್ತರ ಇಲ್ಲಿದೆ ನೋಡಿ.
ತಜ್ಞರ ಪ್ರಕಾರ ತೂಕ ಇಳಿಸಲು ಬಯಸುವವರು ಸೀಬೇಕಾಯಿ ಸೇವಿಸಬಹುದು, ಯಾಕೆಂದರೆ ಸೀಬೇಕಾಯಿಯಲ್ಲಿ ವಿಟಮಿನ್ ಸಿ, ನಾರಿನಂಶ ಮತ್ತು ಜೀರ್ಣಪ್ರಕ್ರಿಯೆ ಸುಗಮಗೊಳಿಸುವ ಹಲವು ಪೋಷಕಾಂಶಗಳಿವೆ.
ಅಷ್ಟೇ ಅಲ್ಲ, ಇದರಲ್ಲಿ ಸಕ್ಕರೆ ಅಂಶವೂ ಕಡಿಮೆ ಹಾಗಾಗಿ ಆರೋಗ್ಯಕ್ಕೂ ಒಳ್ಳೆಯದು, ಹಸಿವೂ ನೀಗಿಸುತ್ತದೆ ಹಾಗೆಯೇ ಅಷ್ಟೇ ಬೇಗ ಜೀರ್ಣವೂ ಆಗಬಲ್ಲದು. ಹಾಗಾಗಿ ತೂಕ ಇಳಿಸಲು ಬಯಸುವವರಿಗೆ ಇದು ಹೇಳಿ ಮಾಡಿಸಿದ ಹಣ್ಣು.
ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.