ಮೆದುಳು ಸಕ್ರಿಯವಾಗಿ ಕೆಲಸ ಮಾಡಲು ಇಲ್ಲಿದೆ ಬಹಳ ಸುಲಭವಾದ ಟಿಪ್ಸ್.. ನೀವು ಮಾಡಿ ನೋಡಿ..

0
2642

ಕೆಲವೊಮ್ಮೆ ಮಾತ್ರ ಕೆಲವು ವಿಚಾರಗಳನ್ನ ಮಾತ್ರ ನೆನಪಿನಲ್ಲಿ ಇಟ್ಟುಕೊಳ್ಳಬಾರದು ಅಂತ ಅನ್ಸುತ್ತೆ ಆದರೆ ಮಿಕ್ಕ ಎಲ್ಲ ವಿಚಾರಗಳನ್ನ ಮೆರೆಯಲು ಯಾರು ಇಷ್ಟ ಪಡುವುದಿಲ್ಲ, ಹಳೆಯ ಸಂಗತಿಗಳಲನ್ನ ಮರೆಯುವುದು ಒಂದು ಸಮಸ್ಯೆಯಾದರೆ ಕೆಲವರಿಗೆ ಕೇವಲ ಹತ್ತು ನಿಮಿಷದ ಹಿಂದೆ ಆಡಿದ ಅಥವಾ ಕೇಳಿದ ಮಾತೆ ಮರೆತು ಮತ್ತೆ ಕೇಳಲು ಮುಂದಾಗುತ್ತಾರೆ, ನಿಮ್ಮ ನೆನಪಿನ ಶಕ್ತಿಯನ್ನ ಪರೀಕ್ಷೆ ಮಾಡಲು ರೇಡಿಯೋದಲ್ಲಿ ಕೇಳಿದ ಮಾತನ್ನ ತಕ್ಷಣ ಒಂದು ಪುಸ್ತಕದಲ್ಲಿ ಬರೆಯಲು ಪ್ರಯತ್ನ ಪಟ್ಟು ನೋಡಿ.

ನೆನಪಿನ ಶಕ್ತಿಯ ಸಮಸ್ಯೆ ಸಧ್ಯದ ಯುವ ಪೀಳಿಗೆಯಲ್ಲಿ ಕಂಡು ಬರುವ ದೊಡ್ಡ ಸಮಸ್ಯೆ ಯಾಗಿದೆ, ತಮ್ಮ ವಸ್ತುಗಳನ್ನ ಒಂದು ಕಡೆ ಇಟ್ಟು ಹತ್ತು ಕಡೆ ಹುಡುಕೋದು ಸಾಮಾನ್ಯ, ಹೀಗೆ ನಾವು ಒಂದು ಮನೆಯಲ್ಲಿ ಒಬ್ಬರನ್ನಾದರೂ ನೋಡಬಹುದು. ಈ ಸಮಸ್ಯೆಗೆ ಪರಿಹಾರವೇನು ಮುಂದೆ ಓದಿ.

ನಿಮ್ಮ ಮೆದುಳನ್ನ ಸಕ್ರಿಯವಾಗಿಡಲು ನೀವು ಗಣಿತ ಶಾಸ್ತ್ರ ಸಂಭಂದ ಪಟ್ಟ ಸಮಸ್ಯೆಗಳನ್ನ ಬಗೆಹರಿಸುವ ಅಭ್ಯಾಸ ಮಾಡಿಕೊಳ್ಳಿ ಜೊತೆಯಲ್ಲಿ ಮುಂಜಾನೆಯ ವ್ಯಾಯಾಮ ನಿಮಗೆ ತುಂಬಾ ಉಪಯೋಗಕಾರಿ.

ದೇಹಕ್ಕೆ ಬೇಕಾದ ಕ್ಯಾಲೋರಿಗಳಿಗಿಂತ ಕೊಂಚ ಕಡಿಮೆ ಕ್ಯಾಲೋರಿ ಆಹಾರಗಳನ್ನ ಸೇವಿಸಿದರೆ ಅದರಿಂದ ಕೂಡ ಮೆದುಳು ಹೆಚ್ಚು ಸಕ್ರಿಯಗೊಳ್ಳುತ್ತದೆ ಹಾಗು ಬಿ ಪಿ ಸಹ ನಿಯಂತ್ರದಲ್ಲಿ ಇರಬೇಕು.

ಸಕ್ಕರೆ ಕಾಯಿಲೆ ಇದ್ದವರಿಗೆ ಈ ಸಮಸ್ಯೆ ಹೆಚ್ಚಿರುತ್ತದೆ ಹಾಗಾಗಿ ದೇಹದಲ್ಲಿ ಸಕ್ಕರೆ ಜಾಸ್ತಿ ಇರದಂತೆ ನೋಡಿಕೊಳ್ಳ ಬೇಕು. ಮುಖ್ಯವಾಗಿ ಮಧ್ಯಪಾನ ಹಾಗು ಧೂಮಪಾನ ಅಭ್ಯಾಸಗಳನ್ನ ಬಿಡಬೇಕು, ಇವು ನಿಮ್ಮ ಮೆದುಳಿನ ಸಾಮರ್ಥ್ಯ ಕಡಿಮೆ ಮಾಡುತ್ತದೆ.

ನಿಮ್ಮ ಮನಸ್ಸು ಯಾವಾಗಲೂ ಪ್ರಶಾಂತವಾಗಿರಲಿ ಯಾವುದೇ ರೀತಿಯ ಒತ್ತಡಗಳಿಂದ ದೂರವಿರಬೇಕು, ಇದರಿಂದ ಮೆದುಳಿನ ಮೇಲೆ ಕಡಿಮೆ ಒತ್ತದೆ ಬೀಳುತ್ತದೆ ಎಂದು ವೈದ್ಯರು ಹೇಳುತ್ತಾರೆ.

LEAVE A REPLY

Please enter your comment!
Please enter your name here