ಬಾಳೆಹಣ್ಣು ಸುಲಭವಾಗಿ ಸಿಗುವ ಹಣ್ಣುಗಳಲ್ಲಿ ಒಂದಾಗಿದೆ, ಇದನ್ನ ಎಲ್ಲರು ಸೇವಿಸ ಬಹುದು, ಇದು ದೇಹಕ್ಕೆ ಬೇಕಾದ ಶಕ್ತಿಯನ್ನ ನೀಡುತ್ತದೆ, ಬರೀ ಶಕ್ತಿ ಮಾತ್ರವಲ್ಲ ದೇಹ ಫಿಟ್ ಆಗಿರುವ ಜೊತೆಗೆ ಆರೋಗ್ಯ ಕೂಡ ಸುಧಾರಿಸುತ್ತದೆ, ಬಾಳೆಹಣ್ಣು ತಿನ್ನೋದ್ರಿಂದ ಕೆಲವು ನಿಮಿಷ ವ್ಯಾಯಾಮ ಮಾಡಿದಾಗ ಸಿಗುವಷ್ಟು ಶಕ್ತಿ ಸಿಗುತ್ತದೆಯಂತೆ, ಹಾಗಾದರೆ ಬನ್ನಿ ಬಾಳೆಹಣ್ಣಿನಿಂದ ಏನೆಲ್ಲಾ ಉಪಯೋಗಗಳಿವೆ ತಿಳಿಯೋಣ.
ರಕ್ತಹೀನತೆ : ಬಾಳೆಹಣ್ಣಿನಲ್ಲಿ ಕಬ್ಬಿಣದ ಅಂಶ ಸಮೃದ್ಧವಾಗಿರುವುದರಿಂದ ದೇಹದಲ್ಲಿ ಕೆಂಪು ರಕ್ತಕಣಗಳ ಉತ್ಪಾದನೆಯನ್ನು ಪ್ರಚೋದಿಸಿ, ರಕ್ತಹೀನತೆಯನ್ನು ನೀಗಿಸುತ್ತದೆ.
ರಕ್ತದೊತ್ತಡ : ಬಾಳೆಹಣ್ಣಿನಲ್ಲಿ ಪೊಟಾಷಿಯಮ್, ಲವಣ ಸಮೃದ್ಧಿಯಾಗಿದ್ದು, ಉಪ್ಪಿನ ಅಂಶ ತೀರಾ ಕಡಿಮೆ. ಇದರಿಂದ ಬಾಳೆಹಣ್ಣು ರಕ್ತದೊತ್ತಡವನ್ನು ತಡೆಗಟ್ಟಲು ಸೂಕ್ತ ಅಸ್ತ್ರ, ಅಮೆರಿಕದ ಆಹಾರ ಮತ್ತು ಔಷಧಿಗಳ ಆಡಳಿತ ಮಂಡಲಿ ಕೂಡ ಇತ್ತೀಚೆಗೆ ಅಧಿಕೃತವಾಗಿ ಜಾಹೀರುಗೊಳಿಸಲು, ಅನುಮತಿ ನೀಡಿದೆ.
ಅಲ್ಸರ್ (ಹುಣ್ಣು) : ಬಾಳೆಹಣ್ಣು ಆಮ್ಲೀಯತೆಯನ್ನು ತಗ್ಗಿಸುತ್ತದೆ, ಜಠರದ ಪೊರೆಯನ್ನು ಮರುಲೇಪಿಸುವ ಮೂಲಕ, ಅಲ್ಸರ್ ತೊಂದರೆಯನ್ನು ಶಮನಗೊಳಿಸುತ್ತದೆ.
ಉಷ್ಣ ನಿಯಂತ್ರಕ : ಬಾಳೆಹಣ್ಣು ದೇಹಕ್ಕೆ ತಂಪು ಎಂಬ ನಂಬಿಕೆ ವಿಶ್ವದ ಬಹುತೇಕ ಜನಾಂಗಗಳಲ್ಲಿ ಇದೆ, ಥಾಯ್ ಲ್ಯಾಂಡ್ ನಲ್ಲಿ ಗರ್ಭಿಣಿ ಸ್ತ್ರೀಯರು ಬಾಳೆಹಣ್ಣಿನ ಸೇವನೆಯನ್ನು ಮಾಡುವುದು ಸಾಮಾನ್ಯ, ಇದರಿಂದ ಅವರ ದೇಹ ಮತ್ತು ಮನಸ್ಸುಗಳೆರಡರ ಉಷ್ಣತೆ ಕಡಿಮೆಯಾಗಿ, ಹುಟ್ಟಿದ ಮಗುವಿನ ದೇಹ ಮತ್ತು ಮನಸ್ಸುಗಳು ಶಾಂತವಾಗಿರಲೆಂಬ ನಂಬಿಕೆ ಇದೆ.
ಮಲಬದ್ಧತೆ : ನಾರಿನ ಅಂಶ ಯತೇಚ್ಛ, ಕೃತಕ ವಿರೇಚಕಗಳಿಲ್ಲದೆ, ಬಾಳೆಹಣ್ಣು ಮಲಬದ್ಧತೆಯ ಸಮಸ್ಯೆಯನ್ನು ಹೋಗಲಾಡಿಸಲು ಅತ್ಯಂತ ಸಹಾಯಕಾರಿ.
ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.