ಮನುಷ್ಯನ ದೇಹಕ್ಕೆ ಅಗತ್ಯವಿರುವ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುವ ಹಣ್ಣುಗಳು ಯಾವುದು ಗೊತ್ತಾ.?

0
3921

ವೈದ್ಯರು ನಿಮಗೆ ರಕ್ತದಲ್ಲಿ ಹಿಮೋಗ್ಲೋಬಿನ್ ಸಂಖ್ಯೆ ಕಡಿಮೆಯಾಗಿದೆ ಎಂದು ಹೇಳಿದಲ್ಲಿ ಅಥವಾ ಅದಕ್ಕಾಗಿ ಮುಂದಿನ ದಿನಗಳಲ್ಲಿ ನಿಮ್ಮ ಆಹಾರ ಸೇವನೆಯಲ್ಲಿ ಜಾಗೃತರಾಗಿರಿ ಎಂಬ ಸಲಹೆಯನ್ನು ನೀಡಿದಾಗ ನೀವು ಹಿಮೋಗ್ಲೋಬಿನ್ ಅತ್ಯಧಿಕವಾಗಿರುವ ಆಹಾರಗಳನ್ನು ಸೇವಿಸಬೇಕು ಆಗಿಬರುತ್ತದೆ, ಹಾಗಾದರೆ ಯಾವ ತರಕಾರಿ ಅಥವಾ ಹಣ್ಣುಗಳಲ್ಲಿ ಹಿಮೋಗ್ಲೋಬಿನ್ ಸಂಖ್ಯೆ ಹೆಚ್ಚಾಗಿ ಮನುಷ್ಯನ ದೇಹಕ್ಕೆ ಸಿಗುತ್ತದೆ ಎಂಬುದರ ಬಗ್ಗೆ ತಿಳಿಯೋಣ.

ಸೂರ್ಯನ ಬಿಸಿಲಿಗೆ ಒಣಗಿದ ಟೊಮೆಟೊ : ನಿಮಗೆ ಗೊತ್ತಿರಲಿ ಸೂರ್ಯನ ಬಿಸಿಲಿಗೆ ಒಣಗಿದ ಟೊಮೆಟೊದಲ್ಲಿ ಉತ್ತಮವಾದ ಕಬ್ಬಿಣಾಂಶ ದೊರೆಯುತ್ತದೆ, ಇದರ ಜೊತೆಗೆ ವಿಟಮಿನ್ ಸಿ ದೇಹವು ಕಬ್ಬಿಣದಂಶವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ, ಈ ರೀತಿಯ ಟೊಮೆಟೊಗಳು ತಾಜಾ ಟೊಮೇಟೊ ಹಣ್ಣುಗಳಿಗಿಂತ ಉತ್ತಮ ಎಂದು ಹೇಳಲಾಗಿದೆ ಹಾಗೂ ಅದನ್ನು ದಿನಬಳಕೆಯಲ್ಲಿ ಟೊಮೆಟೊ ಸ್ಲೈಸ್ ಗಳಾಗಿ ಬಳಸಬಹುದು.

ಒಣದ್ರಾಕ್ಷಿ : ಕಬ್ಬಿಣಾಂಶವನ್ನು ಅತ್ಯಧಿಕವಾಗಿ ಹೊಂದಿರುವ ಮತ್ತೊಂದು ಹೆಣ್ಣು ಎಂದರೆ ಅದು ಒಣಗಿದ ದ್ರಾಕ್ಷಿ ಗಳು, ಇವುಗಳನ್ನು ನೀವು ಪ್ರತಿದಿನ ನಿಮ್ಮ ಮುಂಜಾನೆಯ ನಾಷ್ಟದ ಸಮಯದಲ್ಲಿ ಅಥವಾ ಮೊಸರು ಅನ್ನದಲ್ಲಿ ಬೆರೆಸಿ ತಿನ್ನಬಹುದು.

ಕಲ್ಲಂಗಡಿ : ಕೆಂಪಾದ ಸಿಹಿ ಬರೆದ ಕಲ್ಲಂಗಡಿ ನೋಡಿದರೆ ಯಾರಿಗೆ ತಾನೆ ಇಷ್ಟವಾಗುವುದಿಲ್ಲ, ಇದು ನಿಮ್ಮ ರಕ್ತದಲ್ಲಿನ ಹಿಮೋಗ್ಲೋಬಿನ್ ಹೆಚ್ಚಿಸುವುದರಲ್ಲಿ ಬಹಳಷ್ಟು ಪರಿಣಾಮಕಾರಿ, ಈ ಹಣ್ಣಿನಲ್ಲಿ ವಿಟಮಿನ್ ಸಿ ಮತ್ತು ಕಬ್ಬಿಣದಂಶ ಅತ್ಯಧಿಕವಾಗಿದೆ, ಆದ್ದರಿಂದ ನಿಮ್ಮ ಬಿಡುವಿನ ಸಮಯದಲ್ಲಿ ಇತರ ಹಣ್ಣುಗಳಿಗಿಂತ ನಿಮಗೆ ಕಲ್ಲಂಗಡಿ ಹಣ್ಣು ಉತ್ತಮ.

ದಾಳಿಂಬೆ : ದಾಳಿಂಬೆ ಹಣ್ಣಿನಲ್ಲಿ ವಿಟಮಿನ್ ಸಿ ಅತ್ಯಧಿಕವಾಗಿ ಇರುವುದರಿಂದ ನಿಮ್ಮ ರಕ್ತದಲ್ಲಿನ ಹಿಮೋಗ್ಲೊಮಿನ್ ಸಂಖ್ಯೆಯನ್ನು ಹೆಚ್ಚುಸುವುದರಲ್ಲಿ ಬಹಳ ಸಹಕಾರಿಯಾಗಿದೆ, ಆದ್ದರಿಂದ ಪ್ರತಿದಿನ ನಿಮ್ಮ ಸಂಜೆಯ ಸಮಯದಲ್ಲಿ ಬೇರೆ ಆಹಾರ ಪದ್ದತಿಗಳನ್ನು ನೀವು ಅನುಸರುತ್ತಿದ್ದರೆ ತಪ್ಪದೆ ಅದನ್ನು ಬಿಟ್ಟು ದಾಳಿಂಬೆ ಹಣ್ಣಿನ ಸೇವೆನೆ ಶುರು ಮಾಡಿ.

LEAVE A REPLY

Please enter your comment!
Please enter your name here