ಮೂತ್ರದ ರಾಸಾಯನಿಕಗಳು ಹರಳುಗಳ ರೂಪದಲ್ಲಿ ಕಿಡ್ನಿಯಲ್ಲಿ ಕಲ್ಲುಗಳಾಗಿ ಪರಿವರ್ತನೆಯಾಗುತ್ತದೆ, ಪ್ರಾರಂಭಿಕ ಹಂತದಲ್ಲಿ ಸಣ್ಣ ಗಾತ್ರದಲ್ಲಿ ಇದ್ದರೂ ಕ್ರಮೇಣ ದೊಡ್ಡದಾಗಿ ಅರ್ಧ ಇಂಚಿನ ವರೆಗೂ ಬೆಳೆಯುತ್ತವೆ, ಮೂತ್ರಕೋಶ ಮತ್ತು ಶರೀರದ ಲವಣಾಂಶ ಗಳಲ್ಲಿ ಕೆಲವು ಬಾರಿ ಏರುಪೇರುಗಳ ಆದಾಗ ಮೂತ್ರದಲ್ಲಿ ಹರಳುಗಳು ಸೃಷ್ಟಿಯಾಗುತ್ತವೆ, ಇಷ್ಟೇ ಅಲ್ಲದೆ ಕೆಲವು ಔಷಧಿಗಳ ಸೇವನೆ ಯಿಂದಲೂ ಕಿಡ್ನಿಯಲ್ಲಿ ತೊಂದರೆಗಳು ಸೃಷ್ಟಿ ಯಾಗುವ ಸಾಧ್ಯತೆಗಳು ಉಂಟು.
ಮೊದಲ ಹಂತದಲ್ಲಿ ಕಿಡ್ನಿಯಲ್ಲಿ ಕಲ್ಲುಗಳ ಸೃಷ್ಟಿಯಾಗಲು ಶುರುವಾದರೆ ಕಾಣಿಸುವ ಲಕ್ಷಣಗಳು ಹೀಗಿವೆ.
ದಿನದಲ್ಲಿ ಹಲವು ಬಾರಿ ಮೂತ್ರ ಮಾಡಬೇಕು ಎಂದು ಅನಿಸುತ್ತದೆ ಮತ್ತು ವಾಕರಿಕೆ ಹಾಗೂ ವಾಂತಿ ಬರುವ ಹಾಗೆ ಆಗುತ್ತದೆ, ಕೆಲವೊಮ್ಮೆ ವಾಂತಿ ಯು ಆಗುತ್ತದೆ.
ಮೂತ್ರ ವಿಸರ್ಜನೆಯ ಸಂದರ್ಭದಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುತ್ತದೆ, ಕೆಲವೊಮ್ಮೆ ಮೂತ್ರದಲ್ಲಿ ರಕ್ತ ಬರುವುದು ಅಥವಾ ಮೂತ್ರವು ಬಹಳ ಕೆಟ್ಟ ವಾಸನೆಯಿಂದ ಕೂಡಿರುತ್ತದೆ.
ಮೂತ್ರ ವಿಸರ್ಜನೆಯ ಸಂದರ್ಭದಲ್ಲಿ ಕಾಣಿಸಿಕೊಳ್ಳುವ ನೋವು ಕೆಲವೊಮ್ಮೆ 20 ನಿಮಿಷಗಳ ಒಂದು ಗಂಟೆಗಳವರೆಗೂ ಕಾಣಬಹುದು, ಸೋಂಕಿನ ಸಮಸ್ಯೆಗಳಿದ್ದರೆ ಜ್ವರ ಮತ್ತು ಕೈ-ಕಾಲುಗಳಲ್ಲಿ ನಡುಕ ಉಂಟಾಗುತ್ತದೆ.
ಮೊದಲಿಗೆ ನೋವು ಬೆನ್ನಿನಿಂದ ಪ್ರಾರಂಭವಾಗಿ ಮುಂಭಾಗಕ್ಕೆ ಬರುತ್ತವೆ, ಪಕ್ಕೆಲುಬುಗಳು, ಎದೆ ಮೂಳೆಗಳ ಕೆಳಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ.
ಕೆಲವೊಮ್ಮೆ ಯಾವುದೇ ಲಕ್ಷಣಗಳು ತೋರದೆ ಕಿಡ್ನಿ ಸ್ಟೋನ್ ಗಳು ರಾಜ್ಯವಾಗಿ ಬೆಳೆಯುವ ಉದಾಹರಣೆಗಳು ಬಹಳಷ್ಟಿವೆ, ಮೇಲಿನ ಯಾವುದೇ ಲಕ್ಷಣಗಳು ನಿಮಗೆ ಕಂಡು ಬಂದಲ್ಲಿ ನಿಮ್ಮ ಹತ್ತಿರದ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.