ಎಚ್ಚರ ಅಧಿಕ ರಕ್ತದೊತ್ತಡ ( Blood Pressure ) ವಿದ್ದರೆ ಈ ಸಮಸ್ಯೆಗಳು ನಿಮ್ಮನ್ನು ಕಾಡುತ್ತವೆ..!!

0
5053

ಅಧಿಕ ರಕ್ತದೊತ್ತಡದ ಸಮಸ್ಯೆಯು ಬಹುಬೇಗನೆ ಬರುವಂಥದ್ದಲ್ಲ, ಇವು ದೀರ್ಘಾವಧಿಯ ಸಮಸ್ಯೆ, ಈ ಸಮಸ್ಯೆಯು ಹಲವು ವರ್ಷಗಳಿಂದ ನಿಮ್ಮ ರಕ್ತನಾಳಗಳು ಮತ್ತು ಅಂಗಾಂಗಗಳ ಮೇಲೆ ಮಾಡಿರುವ ಹಾನಿಯಾಗಿರುತ್ತದೆ, ಇಂತಹ ಅಧಿಕ ರಕ್ತದೊತ್ತಡದ ಸಮಸ್ಯೆಗೆ ಚಿಕಿತ್ಸೆ ಪಡೆಯದೆ ಹಾಗೆ ಬಿಟ್ಟರೆ ಕಾಲಾನಂತರದಲ್ಲಿ ಸಂಭವಿಸಬಹುದಾದ ಅಡ್ಡ ಪರಿಣಾಮಗಳ ಬಗ್ಗೆ ಇಂದು ತಿಳಿಸುತ್ತೇವೆ.

ಅಪಧಮನಿಗಳ ರಕ್ತ ನಾಳ ಕಾಯಿಲೆ : ಅಪಧಮನಿಗಳ ರಕ್ತನಾಳದ ಕೆಲಸವೆಂದರೆ ಇವು ಹೃದಯಕ್ಕೆ ರಕ್ತ ಸಾಗಿಸುವ ರಕ್ತನಾಳಗಳು, ಇಂತಹ ರಕ್ತನಾಳಗಳ ಮೇಲೆ ಪರಿಣಾಮವನ್ನು ಬೀರುವುದರಿಂದ ರಕ್ತವು ನಿಮ್ಮ ಹೃದಯಕ್ಕೆ ಮುಕ್ತವಾಗಿ ಹರಿಯುವುದಿಲ್ಲ, ಇದರಿಂದ ನೀವು ಎದೆ ನೋವು, ಹೃದಯಾಘಾತ ಅಥವಾ ಅನಿಯಮಿತ ಹೃದಯಲಯ ಅನುಭವಿಸಬೇಕಾಗುತ್ತದೆ.

ಪಾಶ್ವವಾಯು : ಪಾರ್ಶ್ವವಾಯುವಿಗೆ ಕಾರಣವೆಂದರೆ ನಿಮ್ಮ ಮೆದುಳಿನ ಒಂದು ಭಾಗಕ್ಕೆ ಅವಶ್ಯಕತೆ ಇರುವಂತಹ ಆಮ್ಲಜನಕ ಮತ್ತು ಪೋಷಕಾಂಶಗಳನ್ನು ಸರಿಯಾದ ಪ್ರಮಾಣದಲ್ಲಿ ಪೂರೈಕೆ ಆಗದೇ ಇದ್ದಾಗ ಮೆದುಳು ಪ್ರಾರಂಭಿಸುತ್ತವೆ ಮತ್ತು ಇದು ಪಾರ್ಶ್ವವಾಯು ನಂತಹ ಸಮಸ್ಯೆಗೆ ಕಾರಣವಾಗುತ್ತದೆ, ಅತಿಯಾದ ರಕ್ತದೊತ್ತಡದಿಂದ ನಿಮ್ಮ ಮೆದುಳಿನ ರಕ್ತನಾಳಗಳು ಸಹ ಹಾಳಾಗಿ ಬಿಡುತ್ತವೆ ಜೊತೆಯಲ್ಲಿ ಕಿರಿದಾಗಿಬಿಡುತ್ತವೆ, ಹೀಗೆ ಹೊಡೆದ ರಕ್ತನಾಳಗಳು ಸೋರಿಕೆಯಾದ ರಕ್ತ ನಾಳಗಳ ಒಳಗೆ ಅಥವಾ ಮೆದುಳಿನ ಮೇಲೆ ಹೆಪ್ಪುಗಟ್ಟಿ ಪಾಶ್ವವಾಯು ವಾಗಲು ಮುಖ್ಯ ಕಾರಣವಾಗಿ ಬಿಡುತ್ತದೆ.

ಮೂತ್ರಪಿಂಡಗಳ ವೈಫಲ್ಯ : ಅಧಿಕ ರಕ್ತದೊತ್ತಡವು ಮೂತ್ರಪಿಂಡ ವೈಫಲ್ಯಕ್ಕೆ ಒಂದು ಪ್ರಮುಖ ಹಾಗೂ ಸಾಮಾನ್ಯ ಕಾರಣವಾಗಿದೆ, ಕಾರಣ ಇದು ಮೂತ್ರಪಿಂಡಕ್ಕೆ ರಕ್ತ ಸಾಗಿಸುವ ದೊಡ್ಡ ರಕ್ತನಾಳಗಳು ಮತ್ತು ಸಣ್ಣ ಸಣ್ಣ ರಕ್ತನಾಳಗಳನ್ನು ಹಾಳು ಮಾಡುತ್ತದೆ, ಆದ್ದರಿಂದ ಮೂತ್ರಪಿಂಡವು ದೇಹದ ತ್ಯಾಜ್ಯವನ್ನು ಸಮರ್ಪಕವಾಗಿ ಹೊರಹಾಕಲು ಸಫಲವಾಗುತ್ತವೆ.

ದೃಷ್ಟಿ ಸಮಸ್ಯೆ : ಅಧಿಕ ರಕ್ತದೊತ್ತಡವು ದೇಹದ ಇತರ ರಕ್ತನಾಳಗಳ ಮೇಲೆ ಪ್ರಭಾವ ಬೀರುವುದಲ್ಲದೆ ಕಣ್ಣಿಗೆ ರಕ್ತ ಸಾಗಿಸುವ ಅಂತಹ ರಕ್ತನಾಳಗಳು ಸಹ ಪರಿಣಾಮವನ್ನು ಬೀರುತ್ತದೆ, ಇದರಿಂದ ಕಣ್ಣಿನ ಸಂಸ್ಥೆಯಾದ ರೆಟಿನೋಪತಿ ಶುರುವಾಗುತ್ತದೆ, ಕಣ್ಣಿನಿಂದ ನೀರು ಬರುವುದು ದೃಷ್ಟಿ ಮಂಜಾಗುವುದು ಅಥವಾ ಶಾಶ್ವತವಾಗಿ ನೀವು ದೃಷ್ಟಿಯನ್ನು ಕಳೆದುಕೊಳ್ಳಬೇಕಾಗುತ್ತದೆ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here