ಕಾಲ ಎಷ್ಟೇ ಮುಂದುವರೆಯಲಿ ನಮ್ಮ ಪುರಾತನ ಕಾಲದ ಆಯುರ್ವೇದ ಔಷಧಗಳು ಜೀವವನ್ನೇ ಉಳಿಸಬಲ್ಲವು. ಎಂತಹ ದೊಡ್ಡ ದೊಡ್ಡ ಕಾಯಿಲೆಗಳು ಯಾವುದೇ ಅಡ್ಡ ಪರಿಣಾಮಗಳು ಇಲ್ಲದೆ ವಾಸಿಯಾಗುತ್ತವೆ. ಲಕ್ಷಾಂತರ ಬಗೆಯ ಗಿಡಮೂಲಿಕೆಗಳು ನೂರಾರು ಕಾಯಿಲೆಗಳಿಗೆ ಪರಿಹಾರ ನೀಡುತ್ತವೆ. ತಲೆಮಾರುಗಳು ದಾಟುತ್ತಿದ್ದಂತೆಯೇ ಈ ಆಯುರ್ವೇದ ಔಷಧಗಳ ಉಪಯೋಗ ಕಡಿಮೆ ಆಗುತ್ತಿವೆ. ಜನರು ಆಧುನಿಕತೆಯ ಮೆಡಿಸಿನ್’ಗೆ ಅಡಿಕ್ಟ್ ಆಗಿದ್ದಾರೆ. ಅದು ಅಡ್ಡ ಪರಿಣಾಮಗಳನ್ನು ಉಂಟುಮಾಡುತ್ತದೆ. ಇದು ಗೊತ್ತಿದ್ದರೂ ಅವರಿಗೆ ಅನುವಾರ್ಯವೂ ಆಗಿವೆ.
ಎಲ್ಲಾ ಗೃಹಿಣಿಯರಿಗೆ ದೊಡ್ಡ ತಲೆ ನೋವು ಈ ಇರುವೆಗಳು. ಮನೆ ಎಷ್ಟೇ ಸ್ವಚ್ಚವಾಗಿಟ್ಟುಕೊಂಡಿರಲಿ ಸಿಹಿ ಅಂಶ ಇರುವ ಕಡೆ ಇರುವೆಗಳು ಮುತ್ತಿಕೊಳ್ಳುತ್ತವೆ. ಇರುವೆಗಳು ಇಲ್ಲದ ಜಾಗವೇ ಇಲ್ಲವೇನೊ ?! ಇರುವೆಗಳು ಹೋಗಲು ಗೃಹಿಣಿಯರು ಇರುವೆ ಪೌಡರ್ ಅಥವಾ ಡಿಡಿಟಿ ಪೌಡರ್ ಬಳಸುತ್ತಾರೆ. ಆದರೆ ಅದು ವಿಷಯುಕ್ತವಾದುದರಿಂದ ಮಕ್ಕಳಿರುವ ಮನೆಯಲ್ಲಿ ಇಡುವುದು ಬಹಳ ಡೇಂಜರ್.
ಆದರೆ ಇರುವೆಗಳಿಂದ ಮುಕ್ತಿ ಪಡೆಯಲು ನಾವು ಕೆಲವೊಂದು ಟ್ರಿಕ್ಸ್’ಗಳನ್ನು ಹೇಳುತ್ತೇವೆ. ಇದಕ್ಕೆ ಮನೆಯಲ್ಲೇ ಸಿಗುವ ವಸ್ತುಗಳನ್ನು ಬಳಸಿಕೊಂಡು ಇರುವೆಗಳಿಂದ ಮುಕ್ತಿ ಪಡೆಯಬಹುದು. ಇದಕ್ಕೆ ಈ ರೀತಿಯಲ್ಲಿ ಮಾಡಿ.
ಮೊದಲ ಉಪಾಯ ಒಂದು ನಿಂಬೆ ಹಣ್ಣಿನ ರಸ ತೆಗೆದುಕೊಂಡು ಅದಕ್ಕೆ ಒಂದು ಚಿಟಿಕೆ ಉಪ್ಪನ್ನು ಬೆರಸಿ ಚೆನ್ನಾಗಿ ಕಲೆಸಿ. ಅದನ್ನು ಇರುವೆಗಳು ಬರುವ ಜಾಗಕ್ಕೆ ಸಿಂಪಡಿಸಿ. ಇದರಿಂದ ಇರುವೆಗಳು ಬರುವುದೇ ಇಲ್ಲ. ಒಂದು ವೇಳೆ ಇರುವೆಗಳು ಜಾಸ್ತಿ ಇದ್ದರೆ ಕರಿಮೆಣಸಿನ ಪುಡಿಯನ್ನು ಬಿಸಿ ನೀರಿಗೆ ಹಾಕಿ. ಅದನ್ನು ನೇರವಾಗಿ ಸಿಂಪಡಿಸಿ. ಈ ಮದ್ದಿನಿಂದ ಇರುವೆಗಳು ಬರದಂತೆ ತಡೆಯುತ್ತದೆ.
ಇನ್ನೊಂದು ಉಪಾಯ ಏನೆಂದರೆ ದಾಲ್ಚಿನ್ನಿ ಚಕ್ಕೆಯನ್ನು ಪುಡಿಯನ್ನು ರಾತ್ರಿ ಮಲಗುವ ಮೊದಲು ಅಡುಗೆ ಮನೆಯಲ್ಲಿ ಸಿಂಪಡಿಸಿ. ಬೆಳಿಗ್ಗೆ ಎದ್ದು ನೋಡಿದಾಗ ಇರುವೆಗಳು ಬರುವುದೇ ಇಲ್ಲ. ದಾಲ್ಚಿನ್ನಿ ಇರುವೆಗಳು ಬರದಿರಲು ಬಹು ಮುಖ್ಯ ಮದ್ದು.
ಈ ಮೂರು ಉಪಾಯಗಳನ್ನು ಮಾಡಿದರೆ ಇರುವೆಗಳು ಬರದಂತೆ ತಡೆಯಬಹುದಾಗಿದೆ. ಗೃಹಿಣಿಯರಿಗೆ ಇದು ಬಹು ಮುಖ್ಯವಾಗಿ ಬೇಕಾಗಿರುತ್ತದೆ.