ಬೇಸಿಗೆಯಲ್ಲಿ ಈ ರೀತಿ ಸ್ನಾನ ಮಾಡಿದರೆ ಸಿಗುತ್ತೆ ಇಷ್ಟೊಂದು ಲಾಭಗಳು..!!

0
2375

ಸ್ನಾನ ಪದ್ಧತಿಗಳು ಹತ್ತು ಹಲವಾರು ಉಂಟು ಪ್ರತಿ ದಿನ ಬ್ರಾಹ್ಮೀ ಮುಹೂರ್ತ ಕಳೆದ ನಂತರ ಸ್ನಾನ ಮಾಡುವ ಪದ್ಧತಿಯಿಂದ ದೇಹ ಶುದ್ಧವಾಗುವುದು ಮನಸ್ಸು ಪ್ರಫುಲ್ಲವಾಗುತ್ತದೆ.

ಸ್ನಾನ ಮಾಡದೆ ಇರುವ ದಿನ ಮನಸ್ಸಿಗೆ ಒಂದು ವಿಧವಾದ ಬೇಸರ ಮತ್ತು ಜಡತ್ವ ಆದ್ದರಿಂದ ಪ್ರತಿದಿನ ಸ್ನಾನ ಆರೋಗ್ಯಕ್ಕೆ ಸೋಪಾನ.

ತಣ್ಣೀರು ಸ್ನಾನ : ತಣ್ಣೀರಿನ ಸ್ನಾನದ ಅಭ್ಯಾಸ ಮಾಡಿಕೊಂಡರೆ ಹಸಿವು ಚೆನ್ನಾಗಿ ಆಗುತ್ತದೆ,  ಚೆನ್ನಾಗಿ ನಿದ್ರೆ ಬರುತ್ತದೆ ಶರೀರ ಆಯಾಸ ನಿವಾರಣೆಯಾಗುತ್ತದೆ ದೇಹದ ಚರ್ಮ ರೋಗಗಳು ದೂರವಾಗುತ್ತದೆ.

ಪ್ರತಿದಿನ ಹದಿನೈದು ನಿಮಿಷಗಳ ಕಾಲ ತಣ್ಣೀರಿನಲ್ಲಿ ಈಜಾಡುವುದು ಆರೋಗ್ಯಕರ.

ಪೆಟ್ಟು ಬಿದ್ದವರು ಶರೀರದ ಭಾಗವನ್ನು ತಣ್ಣೀರಿನಲ್ಲಿ ಮುಳುಗಿಸಿ ಮಾಲೀಶು ಮಾಡಿದರೆ ಬೇಗನೆ ಗುಣವಾಗುವುದು.

ನದಿಯಲ್ಲಿ ಸ್ನಾನ ಮಾಡಿದರೆ ಶರೀರದ ಜಿಡ್ಡು ಪರಿಹಾರವಾಗುವುದು.

ಶರೀರದ ಪೆಟ್ಟಾಗಿರುವ ಭಾಗಕ್ಕೆ ತಣ್ಣೀರಿನಲ್ಲಿ ನೆನೆಸಿದ ಹತ್ತಿ ಬಟ್ಟೆಯ ಪಟ್ಟಿ ಕಟ್ಟಿ ಅದರ ಮೇಲೆ ಉಣ್ಣೆಬಟ್ಟೆಯ ಚೂರನ್ನು ಸುತ್ತುತ್ತಿದ್ದರೆ ಶೀಘ್ರವೇ ಗುಣ ದೊರಕುವುದು ಪಟ್ಟಿಯಲ್ಲಿನ ತಣ್ಣೀರು ಆರಿದರೆ ಪುನಃ ಮೊದಲಿನಂತೆ ಪಟ್ಟಿ ಹಾಕಬೇಕು.

ಬಿಸಿನೀರಿನ ಸ್ನಾನ : ಶರೀರದ ಎಲ್ಲ ಭಾಗಗಳನ್ನೂ ಅಡಿಗೆ ಮಾಡುವ ಉಪ್ಪಿನ ಪುಡಿಯಿಂದ ಚೆನ್ನಾಗಿ ಉಜ್ಜಿ ಬಿಸಿನೀರಿನ ಸ್ನಾನ ಮಾಡಿದರೆ ರಾತ್ರಿಯ ವೇಳೆ ನಿದ್ರೆ ಚೆನ್ನಾಗಿ ಬರುವುದು ಹಾಗೂ ಶರೀರಕ್ಕೆ  ಹಗುರವಾಗುತ್ತದೆ.

ಚಳಿಗಾಲದಲ್ಲಂತೂ ಬಿಸಿ ನೀರಿನ ಸ್ನಾನ ತುಂಬಾ ಹಿತಕರವಾಗುತ್ತದೆ ಬಿಸಿನೀರು ಉಷ್ಣ ಶಮನಕಾರಿ.

ಮೈ ಕೈ ನೋವು ಕಂಡಾಗ ಬಿಸಿನೀರಿನಿಂದ ಸ್ನಾನ ಮಾಡಿ ಸ್ವಲ್ಪ ವಿಶ್ರಾಂತಿ ಪಡೆದದ್ದೇ ಆದರೆ ಮೈ ಕೈ ನೋವು ಪರಿಹಾರವಾಗುವುದು ಕಾಲು ಉಳುಕಿದಾಗ ಬಿಸಿ ನೀರಿನೊಳಗೆ ಕಾಲಿಟ್ಟು  ಆ ನೀರಿನಲ್ಲಿ ಬೆರಳಿನಿಂದ ಮಸಾಜ್ ಮಾಡಿದರೆ ಉಳುಕು ನಿವಾರಣೆಯಾಗುವುದು.

ಸೂರ್ಯ ಸ್ನಾನ : ಸೂರ್ಯನನ್ನು ಜೀವಾದಾರ ಎಂದು ಹೇಳುವುದುಂಟು  ಬೆಳಗ್ಗೆ 6 ಗಂಟೆಯಿಂದ 6.30 ರವರೆಗೆ ಎಳೆಯ ಬಿಸಿಲಿನಲ್ಲಿ ಸೂರ್ಯ ನಮಸ್ಕಾರ ಮಾಡುವುದರಿಂದ ಶರೀರವು ಆರೋಗ್ಯದಾಯಕ ಮಾಂಸಖಂಡಗಳಿಗೆ ಬಲವು ಮುಖದಲ್ಲಿ ತೇಜಸ್ಸು ಉಂಟಾಗುತ್ತದೆ.

ಸೂರ್ಯೋದಯದ ನಂತರ ಬೆಳಗ್ಗೆ 8.30 ಒಳಗೆ ಹಾಗೂ ಮಧ್ಯಾಹ್ನ ನಾಲ್ಕು ಗಂಟೆಯ ನಂತರ ನಗ್ನ ದೇಹವನ್ನು ಬಿಸಿಲಿಗೆ ಒಡ್ಡುವುದರಿಂದ ರೋಗಾನಿರೋಧಕ ಶಕ್ತಿ ಉಂಟಾಗುವುದು ಮತ್ತು ಅಂಗಾಂಗ ಕ್ರಿಯೆ ಚೆನ್ನಾಗಿ ನಡೆಯುವುದು, ಶಾರೀರಿಕ ಮತ್ತು ಮಾನಸಿಕ ಕ್ರಿಯೆಯು ಉತ್ಕರ್ಷವಾಗುವುದು.

ರಿಕೆಟ್ಸ್ ರೋಗದಿಂದ ನರಳತ್ತಿರುವ ಮಗುವಿನ ಶರೀರಕ್ಕೆ ಕೊಬ್ಬರಿ ಎಣ್ಣೆಯನ್ನು ಹಚ್ಚಿ ಸೂರ್ಯಸ್ನಾನ ಮಾಡಿಸುವುದರಿಂದ ದೇಹದ ಮೂಳೆಗಳ ಬೆಳವಣಿಗೆಗೆ ಹೆಚ್ಚು ಸಹಾಯವಾಗುವುದು.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here