ಸೀಬೆಹಣ್ಣು ಅಷ್ಟೇ ಅಲ್ಲ ಸೀಬೆ ಎಲೆಯ ಉಪಯೋಗಗಳನ್ನು ಕೇಳಿದರೆ ಶಾಕ್ ಆಗ್ತೀರಾ..!!

0
3140

ವಿಟಮಿನ್ ಸಿ ತುಂಬಿರುವ ಸೀಬೆಹಣ್ಣು ತಿನ್ನಲು ಎಷ್ಟು ರುಚಿಕರವೂ ಆರೋಗ್ಯಕ್ಕೂ ಅಷ್ಟೇ ಸಹಕಾರಿ ಆದರೆ ಇದರ ಎಲೆಗಳು ಅಷ್ಟೇ ಉಪಯುಕ್ತವಾಗಿದ್ದು ಅವುಗಳ ನಿಯಮಿತ ಉಪಯೋಗ ಆರೋಗ್ಯ ಮತ್ತು ಸೌಂದರ್ಯ ಎರಡನ್ನು ವೃದ್ಧಿಸುತ್ತದೆ.

ಕೇಶ ಸೌಂದರ್ಯ : ಒಂದು ಪಾತ್ರೆಯಲ್ಲಿ ನಾಲ್ಕರಿಂದ ಐದು ಲೋಟ ನೀರು ಇಟ್ಟು ಅದರಲ್ಲಿ ಸೀಬೆಹಣ್ಣಿನ ಎಲೆಗಳನ್ನು ಹಾಕಿ ಚೆನ್ನಾಗಿ ಕುದಿಸಬೇಕು ನೀರು ಮೂರು ಲೋಟದಷ್ಟು ಕಡಿಮೆಯಾದಾಗ ತಣ್ಣಗಾಗಲು ಬಿಡಬೇಕು ತಣ್ಣಗಾದ ನೀರನ್ನು ಕೂದಲು ಮತ್ತು ಕೂದಲು ಬಿಡಕ್ಕೆ ಹಚ್ಚಿ ಹಗುರವಾಗಿ ಮಸಾಜ್ ಮಾಡಿ ನಂತರ ಮೃದು ಮತ್ತು ಉತ್ತಮ ಗುಣಮಟ್ಟದ ಶಾಂಪು ಬಳಸಿ ಸ್ನಾನ ಮಾಡಬೇಕು ಇದರಿಂದ ಕೂದಲು ಮೃದುವಾಗುತ್ತದೆ ಜೊತೆಗೆ ಹೊಳಪು ಪಡೆಯುತ್ತದೆ ಕೂದಲಿಗೆ ಶಕ್ತಿ ದೊರಕಿ ಸಂಪಾಗಿ ಬೆಳೆಯುತ್ತದೆ.

ಮೊಡವೆಗಳಿಗೆ ಸೀಬೆ ಹಣ್ಣಿನ ಎಲೆ : ಅಲರ್ಜಿ ತುರಿಕೆ ಚರ್ಮ ಸಮಸ್ಯೆ ಮತ್ತು ಮೊಡವೆಗಳಿಂದ ಬೇಸತ್ತವರು ಸೀಬೆಯ ಎಲೆಗಳನ್ನು ರುಬಿ ನಯವಾಗಿ ಪೇಸ್ಟ್ ಮಾಡಿಕೊಂಡು ರಾತ್ರಿ ಮುಖಕ್ಕೆ ಹಚ್ಚಿಕೊಂಡು ಒಣಗಿದ ನಂತರ ಮುಖವನ್ನು ಪ್ರತಿನಿತ್ಯ ತೊಳೆಯುತ್ತಾ ಬಂದರೆ ಮೊಡವೆ ಮತ್ತು ತುರಿಕೆ ಅಲರ್ಜಿ  ಸಮಸ್ಯೆಗೆ ಪರಿಹಾರ.

ಕಪ್ಪು ಕಲೆಗೆ ಸಹ ಸೀಬೆಹಣ್ಣಿನ ಎಲೆ ರಾಮಬಾಣ : ಬ್ಲಾಕ್ ಹೆಡ್ಸ್ ಮುಖದಲ್ಲಿ ಸಣ್ಣಪುಟ್ಟ ರಂದ್ರಗಳ ಸಮಸ್ಯೆ ಹೊಂದಿದವರು ಸಮಸ್ಯೆಗೆ ಎಲೆಗಳನ್ನು ತರಿ ತರಿಯಾಗಿ ರುಬಿ ಮುಖಕ್ಕೆ ಸ್ಕ್ರಬ್ ತರಹ ಮಸಾಜ್ ಮಾಡುತ್ತಾ ಬಂದರೆ ಜೊತೆಗೆ ಇದರ ಪೇಸ್ಟನ್ನು ಮುಖಕ್ಕೆ ಪ್ಯಾಕ್ ತರಹ ಬಂದಲ್ಲಿ ಮುಖದ ಸುಕ್ಕು ಕಡಿಮೆಯಾಗಿ ಕಪ್ಪಾಗಿರುವ ಜಾಗ ಕಾಲಕ್ರಮೇಣ ಬಿಳಿಯಾಗುತ್ತದೆ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here